ಯುದ್ಧಪೀಡಿತ ಇಸ್ರೇಲ್ ಗೆ ಅಮೆರಿಕ ಮಿಲಿಟರಿ ನೆರವು: ಹಡಗು ಮತ್ತು ವಿಮಾನಗಳ ರವಾನೆ

ಉಗ್ರಗಾಮಿ ಸಂಘಟನೆ ಹಮಾಸ್ ನಿಂದ ಭೀಕರ ರಾಕೆಟ್ ದಾಳಿಗೆ ತುತ್ತಾಗಿ ಅಪಾರ ಸಂಖ್ಯೆಯಲ್ಲಿ ನಾಗರಿಕರನ್ನು ಕಳೆದುಕೊಂಡಿರುವ ಇಸ್ರೇಲ್​ ಮೇಲೆ 5 ಸಾವಿರಕ್ಕೂ ಅಧಿಕ ರಾಕೆಟ್ ದಾಳಿ ನಡೆಸಿದ್ದು, ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ಕೃತ್ಯವನ್ನು ಅಮೆರಿಕ ಹಾಗೂ ಭಾರತ ಖಂಡಿಸಿದೆ.
ಗಾಜಾ ಪಟ್ಟಿಯಿಂದ ಇಸ್ರೇಲ್ ಕಡೆಗೆ ರಾಕೆಟ್‌ ಹಾರಿಸುತ್ತಿರುವುದು
ಗಾಜಾ ಪಟ್ಟಿಯಿಂದ ಇಸ್ರೇಲ್ ಕಡೆಗೆ ರಾಕೆಟ್‌ ಹಾರಿಸುತ್ತಿರುವುದು

ವಾಷಿಂಗ್ಟನ್: ಉಗ್ರಗಾಮಿ ಸಂಘಟನೆ ಹಮಾಸ್ ನಿಂದ ಭೀಕರ ರಾಕೆಟ್ ದಾಳಿಗೆ ತುತ್ತಾಗಿ ಅಪಾರ ಸಂಖ್ಯೆಯಲ್ಲಿ ನಾಗರಿಕರನ್ನು ಕಳೆದುಕೊಂಡಿರುವ ಇಸ್ರೇಲ್​ ಮೇಲೆ 5 ಸಾವಿರಕ್ಕೂ ಅಧಿಕ ರಾಕೆಟ್ ದಾಳಿ ನಡೆಸಿದ್ದು, ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ಕೃತ್ಯವನ್ನು ಅಮೆರಿಕ ಹಾಗೂ ಭಾರತ ಖಂಡಿಸಿದೆ. ಇಸ್ರೇಲ್​ಗೆ ತಮ್ಮಿಂದಾದ ಎಲ್ಲಾ ಸಹಾಯವನ್ನು ಮಾಡುತ್ತೇವೆ ಎಂದು ಎರಡೂ ದೇಶಗಳು ಅಭಯ ನೀಡಿವೆ.

ಪ್ಯಾಲೇಸ್ಟಿನಿಯನ್ ಸಶಸ್ತ್ರ ಗುಂಪು ಹಮಾಸ್‌ನಿಂದ ನಿನ್ನೆ ನಡೆಸಿದ ಹಠಾತ್ ದಾಳಿಯ ನಂತರ ಅಮೆರಿಕ ಇಸ್ರೇಲ್‌ಗೆ ಅನೇಕ ಮಿಲಿಟರಿ ಹಡಗುಗಳು ಮತ್ತು ವಿಮಾನಗಳನ್ನು ಕಳುಹಿಸಿದೆ. ಅಮೆರಿಕವು ಇಸ್ರೇಲ್​ ಸೈನಿಕರಿಗೆ ಸಹಾಯವಾಗುವಂತೆ ಯುದ್ಧ ನೌಕೆಯನ್ನು ಕಳುಹಿಸಿದೆ, ಯುದ್ಧ ವಿಮಾನವನ್ನು ಕೂಡ ಕಳುಹಿಸಲು ತಯಾರಿ ನಡೆಸುತ್ತಿದೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಅದೇ ಸಮಯದಲ್ಲಿ, ಹಮಾಸ್ 100 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ. ಹಮಾಸ್‌ನ ಈ ದಾಳಿಯ ನಂತರ ಹಲವು ದೇಶಗಳು ಇಸ್ರೇಲ್‌ಗೆ ಸಹಾಯ ಹಸ್ತ ಚಾಚಿವೆ.

ಮಾಹಿತಿಯ ಪ್ರಕಾರ, ಯುಎಸ್ ಅಧ್ಯಕ್ಷ ಜೊ ಬೈಡನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ನಂತರ ಅವರು ಮೆಡಿಟರೇನಿಯನ್ ಸಮುದ್ರಕ್ಕೆ ಯುದ್ಧ ಹಡಗುಗಳನ್ನು ಕಳುಹಿಸಿದ್ದಾರೆ. ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ವಾಷಿಂಗ್ಟನ್ ಮಿಲಿಟರಿ ಸಹಾಯವನ್ನು ಹೆಚ್ಚಿಸಲಿದೆ ಮತ್ತು ಇಸ್ರೇಲ್ ಗೆ ಯುದ್ಧಸಾಮಗ್ರಿಗಳನ್ನು ಒದಗಿಸುತ್ತದೆ ಎಂದು ಹೇಳಿದರು.

ಹಮಾಸ್‌ನ ಈ ದಾಳಿಯಲ್ಲಿ ನಾಲ್ವರು ಅಮೆರಿಕನ್ ಪ್ರಜೆಗಳೂ ಮೃತಪಟ್ಟಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಹಿಂದೆ ಹಮಾಸ್ ದಾಳಿಯ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಇಸ್ರೇಲ್ ನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು.

ಗಾಜಾ ಪಟ್ಟಿಯ ಬಳಿ ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಸಾವಿರಕ್ಕೆ ಏರಿಕೆಯಾಗಿದೆ ಮತ್ತು ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. 

ಹಮಾಸ್ ರಾಕೆಟ್ ದಾಳಿ ಪ್ರಾರಂಭಿಸಿದ 24 ಗಂಟೆಗಳ ನಂತರ, ಗಾಜಾ ಗಡಿಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಐಡಿಎಫ್​ ಎಲ್ಲಾ ಭಯೋತ್ಪಾದಕರನ್ನು ತಟಸ್ಥಗೊಳಿಸುವ ಪ್ರಯತ್ನ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com