ಇಸ್ರೇಲ್ ಮೇಲಿನ ಹಮಾಸ್ ದಾಳಿಗೆ 'ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್ ಕಾರಣ': ಅಮೆರಿಕ ಅಧ್ಯಕ್ಷ ಜೋ ಬೈಡನ್

ಇಸ್ರೇಲ್ ಮೇಲೆ ಹಮಾಸ್ ಉಗ್ರರು ಅಕ್ಟೋಬರ್ 7 ರಂದು ನಡೆಸಿದ ಭೀಕರ ದಾಳಿಗೆ ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್ ನಿರ್ಮಾಣ ಘೋಷಣೆ ಕಾರಣವಾಗಿರಬಹುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ (ಸಂಗ್ರಹ ಚಿತ್ರ)
ಅಮೆರಿಕ ಅಧ್ಯಕ್ಷ ಜೋ ಬೈಡನ್ (ಸಂಗ್ರಹ ಚಿತ್ರ)

ವಾಷಿಂಗ್ಟನ್: ಇಸ್ರೇಲ್ ಮೇಲೆ ಹಮಾಸ್ ಉಗ್ರರು ಅಕ್ಟೋಬರ್ 7 ರಂದು ನಡೆಸಿದ ಭೀಕರ ದಾಳಿಗೆ ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್ ನಿರ್ಮಾಣ ಘೋಷಣೆ ಕಾರಣವಾಗಿರಬಹುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಹೌದು.. ಈ ಹಿಂದೆ ಭಾರತದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭಾರತ, ಇಸ್ರೇಲ್, ಅಮೆರಿಕ ಸೇರಿದಂತೆ ಹಲವು ದೇಶಗಳು ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್ ನಿರ್ಮಾಣ ಘೋಷಣೆ ಮಾಡಿದ್ದವು. ಈ ಸಂಬಂಧ ಮಹತ್ವದ ಎಂಒಯು (Memorandum of Understanding-MoU)ಗೂ ಸಹಿ ಹಾಕಿದ್ದವು. ಇದು ಇಡೀ ಪ್ರದೇಶವನ್ನು ರೈಲು, ರಸ್ತೆ ಮತ್ತು ಬಂದರುಗಳ ಜಾಲದೊಂದಿಗೆ ಸಂಯೋಜಿಸುವ ಮಹತ್ವದ ಒಪ್ಪಂದವಾಗಿತ್ತು. ಆದರೆ ಇದೇ ಒಪ್ಪಂದ ಇಸ್ರೇಲ್ ಮೇಲಿನ ಹಮಾಸ್ ಉಗ್ರರ ದಾಳಿಗೆ ಕಾರಣವಾಗಿರಬಹುದು ಎಂದು ಜೋ ಬೈಡನ್ ಹೇಳಿದ್ದಾರೆ.

ಈ ಬಗ್ಗೆ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಜೋ ಬೈಡನ್, "ಹಮಾಸ್ ದಾಳಿ ಮಾಡಿದಾಗ ಈ ದಾಳಿಗೆ ಹಲವು ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಈ ಪೈಕಿ ಒಂದು ಕಾರಣ ನನಗೆ ಮನವರಿಕೆಯಾಗಿದ್ದು, ಅದು  ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್ ನಿರ್ಮಾಣ ಘೋಷಣೆಯಾಗಿದೆ. ಇದಕ್ಕೆ ನನ್ನ ಬಳಿ ಯಾವುದೇ ಪುರಾವೆಗಳಿಲ್ಲ. ಆದರೆ ಇಸ್ರೇಲ್‌ಗಾಗಿ ಪ್ರಾದೇಶಿಕ ಏಕೀಕರಣ ಮತ್ತು ಒಟ್ಟಾರೆ ಪ್ರಾದೇಶಿಕ ಏಕೀಕರಣದ ಕಡೆಗೆ ನಾವು ಮಾಡುತ್ತಿರುವ ಪ್ರಗತಿಯೇ ಹಮಾಸ್ ಉಗ್ರರ ಈ ದಾಳಿಗೆ ಕಾರಣವಾಗಿರಬಹುದು. ಆದರೆ ನಾವು ಈ ದಾಳಿಯಿಂದ ಎದೆಗುಂದುವ ಅವಶ್ಯಕತೆ ಇಲ್ಲ. ನಾವು ಈ ಕೆಲಸದಿಂದ ಹಿಂದೆ ಬೀಳುವ ಯಾವುದೇ ಕಾರಣಗಳಿಲ್ಲ ಎಂದು ಹೇಳಿದರು.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ಮಹತ್ವಾಕಾಂಕ್ಷಿ ಆರ್ಥಿಕ ಕಾರಿಡಾರ್ ಯೋಜನೆಯನ್ನು ಶ್ಲಾಘಿಸಿದರು. ಈ ಯೋಜನೆಯು ಎರಡು ಖಂಡಗಳಲ್ಲಿ ಹೂಡಿಕೆಗೆ ಅವಕಾಶಗಳನ್ನು ಉತ್ತೇಜಿಸುತ್ತದೆ. ರೈಲು ಬಂದರು ಯೋಜನೆಯು ಹೆಚ್ಚು ಸುಸ್ಥಿರ, ಸಮಗ್ರ ಮಧ್ಯಪ್ರಾಚ್ಯವನ್ನು ನಿರ್ಮಿಸುವ ಪ್ರಯತ್ನದ ಭಾಗವಾಗಿದೆ ಎಂದು ಹೇಳಿದರು.

ಈ ಹಿಂದೆ ಭಾರತದ ರಾಜಧಾನಿ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಭಾರತ, ಅಮೇರಿಕಾ, ಯುಎಇ, ಸೌದಿ ಅರೇಬಿಯಾ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಯುರೋಪಿಯನ್ ‍ಒಕ್ಕೂಟ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಸ್ಥಾಪಿಸಲು ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿದ್ದವು. ಮೂಲಗಳ ಪ್ರಕಾರ ಏಷ್ಯಾ, ಪಶ್ಚಿಮ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪ್ ನಡುವೆ ವರ್ಧಿತ ಸಂಪರ್ಕ ಮತ್ತು ಆರ್ಥಿಕ ಏಕೀಕರಣದ ಮೂಲಕ ಆರ್ಥಿಕ ಅಭಿವೃದ್ಧಿಗೆ ಈ ಕಾರಿಡಾರ್ ಪ್ರೋತ್ಸಾಹ ಮತ್ತು ಪ್ರಚೋದನೆಯನ್ನು ನೀಡುತ್ತದೆ ಎಂದು ಹೇಳಲಾಗಿತ್ತು.

ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಎರಡು ಪ್ರತ್ಯೇಕ ಕಾರಿಡಾರ್‌ಗಳನ್ನು ಒಳಗೊಂಡಿರುತ್ತದೆ, ಭಾರತವನ್ನು ಪಶ್ಚಿಮ ಏಷ್ಯಾ/ಮಧ್ಯಪ್ರಾಚ್ಯಕ್ಕೆ ಸಂಪರ್ಕಿಸುವ ಪೂರ್ವ ಕಾರಿಡಾರ್ ಮತ್ತು ಪಶ್ಚಿಮ ಏಷ್ಯಾ/ಮಧ್ಯಪ್ರಾಚ್ಯವನ್ನು ಯುರೋಪ್‌ಗೆ ಸಂಪರ್ಕಿಸುವುದು ಈ ಉತ್ತರ ಕಾರಿಡಾರ್ ನ ಪ್ರಮುಖ ಧ್ಯೇಯವಾಗಿದೆ.

ಇದು ರೈಲು ಮಾರ್ಗವನ್ನು ಒಳಗೊಂಡಿರುತ್ತದೆ. ಇದು ಪೂರ್ಣಗೊಂಡ ನಂತರ, ಭಾರತದ ಮೂಲಕ ಆಗ್ನೇಯ ಏಷ್ಯಾದ ನಡುವೆ ಸರಕು ಮತ್ತು ಸೇವೆಗಳ ಸಾಗಣೆಯನ್ನು ಹೆಚ್ಚಿಸುವ ಅಸ್ತಿತ್ವದಲ್ಲಿರುವ ಬಹು-ಮಾದರಿ ಸಾರಿಗೆ ಮಾರ್ಗಗಳಿಗೆ ಪೂರಕವಾಗಿ ವಿಶ್ವಾಸಾರ್ಹ ಮತ್ತು ವೆಚ್ಚ-ಪರಿಣಾಮಕಾರಿ ಅಡ್ಡ-ಗಡಿ ಹಡಗಿನಿಂದ ರೈಲು ಸಾರಿಗೆ ಜಾಲವನ್ನು ಪಶ್ಚಿಮ ಏಷ್ಯಾ/ಮಧ್ಯ ಪೂರ್ವ ಯುರೋಪ್‌ಗೆ ಒದಗಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com