ಟರ್ಕಿ ಭೂಕಂಪ: ತನ್ನ ಮೂತ್ರವನ್ನೇ ಕುಡಿದು 4ನೇ ದಿನ ಅವಶೇಷಗಳಿಂದ ಸುರಕ್ಷಿತವಾಗಿ ಹೊರಬಂದ ಯುವಕ, ವಿಡಿಯೋ!

ಟರ್ಕಿಯ ಗಾಜಿಯಾಂಟೆಪ್ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪವು ಮುಂದಿನ ಹಲವು ವರ್ಷಗಳವರೆಗೆ ಜನರ ಮನಸ್ಸಿನಲ್ಲಿ ಜೀವಂತವಾಗಿರಲಿದೆ. ಈ ಭೂಕಂಪದಲ್ಲಿ, ಟರ್ಕಿ ಮತ್ತು ಸಿರಿಯಾದಲ್ಲಿ ಸಾಕಷ್ಟು ನಾಶವಾಗಿದೆ.
ಬದುಕುಳಿದ ಅದ್ನಾನ್
ಬದುಕುಳಿದ ಅದ್ನಾನ್

ಅಂಕಾರಾ: ಟರ್ಕಿಯ ಗಾಜಿಯಾಂಟೆಪ್ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪವು ಮುಂದಿನ ಹಲವು ವರ್ಷಗಳವರೆಗೆ ಜನರ ಮನಸ್ಸಿನಲ್ಲಿ ಜೀವಂತವಾಗಿರಲಿದೆ. ಈ ಭೂಕಂಪದಲ್ಲಿ, ಟರ್ಕಿ ಮತ್ತು ಸಿರಿಯಾದಲ್ಲಿ ಸಾಕಷ್ಟು ನಾಶವಾಗಿದೆ. 

ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ಬದುಕಿರಬಹುದೆಂಬ ಆಶಾಭಾವನೆ ಕಡಿಮೆಯಾಗಿದೆ. ಆದರೆ 17 ವರ್ಷದ ಯುವಕನೊಬ್ಬ ಸಾವನ್ನು ಸೋಲಿಸಿ ಬದುಕಿ ಬಂದಿದ್ದಾನೆ. ಗಾಜಿಯಾಂಟೆಪ್ ಪ್ರಾಂತ್ಯದ ಸಹಿತಕಾಮಿಲ್ ಜಿಲ್ಲೆಯ ನಿವಾಸಿ ಅದ್ನಾನ್ ಮುಹಮ್ಮದ್ ಕೊರ್ಕುಟ್ ರನ್ನು 94 ಗಂಟೆಗಳ ನಂತರ ಅವರನ್ನು ಸುರಕ್ಷಿತವಾಗಿ ಅವಶೇಷಗಳಿಂದ ಹೊರತೆಗೆಯಲಾಗಿದೆ. 

ಅದ್ನಾನ್ ಅವಶೇಷಗಳಿಂದ ಹೊರಬಂದಾಗ ರಕ್ಷಣಾ ಸಿಬ್ಬಂದಿ ಸಂತೋಷಪಟ್ಟರು. ಅದ್ನಾನ್ ಅವರನ್ನು ಗುರುವಾರ ಹೊರಹಾಕಲಾಗಿದೆ. ಈ ವಿಡಿಯೋದಲ್ಲಿ ಅದ್ನಾನ್ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನಾನು ಜೀವಂತವಾಗಿರಲು ನನ್ನ ಮೂತ್ರವನ್ನು ಕುಡಿಯಬೇಕಾಗಿತ್ತು. ದೇವರ ದಯೆಯಿಂದ ನಾನು ಬದುಕುಳಿದೆ. ರಕ್ಷಣಾ ಸಿಬ್ಬಂದಿ ಬರುತ್ತಾರೆ ಎಂಬ ನಂಬಿಕೆ ನನಗಿತ್ತು. ಅದರಂತೆ ಕಾಯುತ್ತಿದ್ದೆ, ನೀವು ಬಂದಿದ್ದೀರಿ. ನಿಮಗೆಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದು ಅದ್ನಾನ್ ಹೇಳಿದ್ದಾನೆ.

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪಗಳ ಕಾರಣ, ಇಲ್ಲಿನ ಚಿತ್ರಣವು ತುಂಬಾ ಭೀಕರವಾಗಿದೆ. 24,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ಗಾಯಗೊಂಡಿದ್ದಾರೆ. ಇನ್ನೂ ನಾಪತ್ತೆಯಾದವರೂ ಇದ್ದಾರೆ. ಕೆಲವು ಇನ್ನೂ ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ ಮತ್ತು ಅವರ ಬದುಕುಳಿಯುವ ಸಾಧ್ಯತೆಗಳು ಕಡಿಮೆಯಾಗಿದೆ.

ಗಾಜಿಯಾಂಟೆಪ್ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದಿಂದ ಹೆಚ್ಚಿನ ವಿನಾಶ ಸಂಭವಿಸಿದೆ. ಇಲ್ಲಿ ಕಹ್ರಾನ್ಮಾಸ್ ಮತ್ತು ಗಾಜಿಯಾಂಟೆಪ್ನಲ್ಲಿ, ಇಡೀ ನಗರವು ಅವಶೇಷಗಳಾಗಿ ಮಾರ್ಪಟ್ಟಿದೆ. ಇಲ್ಲಿಯವರೆಗೆ ಕಟ್ಟಡದ ಅವಶೇಷಗಳಿಂದ ಜನರನ್ನು ಹೊರತೆಗೆಯಲಾಗುತ್ತಿದೆ. ಇಲ್ಲಿ ಚಳಿಯಿಂದಾಗಿ ಪರಿಸ್ಥಿತಿ ಕಷ್ಟಕರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com