ತನ್ನ ಫೇಸ್‌ಬುಕ್ ಖಾತೆಯನ್ನು ಮರುಸ್ಥಾಪಿಸುವಂತೆ ಮೆಟಾವನ್ನು ಕೇಳಿದ ಡೊನಾಲ್ಡ್ ಟ್ರಂಪ್: ವರದಿ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನಕ್ಕೆ ಮರಳುವ ಸಲುವಾಗಿ ತಮ್ಮ ಪ್ರಬಲ ಸಾಮಾಜಿಕ ಮಾಧ್ಯಮ ಖಾತೆಗಳ ನಿಯಂತ್ರಣವನ್ನು ಮರಳಿ ಪಡೆಯಲು ಬಯಸುತ್ತಿದ್ದಾರೆ ಎಂದು ವರದಿಯಾಗಿದೆ.
Published: 19th January 2023 03:04 PM | Last Updated: 19th January 2023 03:08 PM | A+A A-

ಡೊನಾಲ್ಡ್ ಟ್ರಂಪ್
ಸ್ಯಾನ್ ಫ್ರಾನ್ಸಿಸ್ಕೊ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನಕ್ಕೆ ಮರಳುವ ಸಲುವಾಗಿ ತಮ್ಮ ಪ್ರಬಲ ಸಾಮಾಜಿಕ ಮಾಧ್ಯಮ ಖಾತೆಗಳ ನಿಯಂತ್ರಣವನ್ನು ಮರಳಿ ಪಡೆಯಲು ಬಯಸುತ್ತಿದ್ದಾರೆ ಎಂದು ವರದಿಯಾಗಿದೆ.
2021ರ ಜನವರಿ 6ರಂದು ಯುಎಸ್ ಕ್ಯಾಪಿಟಲ್‌ನಲ್ಲಿ ನಡೆದ ಗಲಭೆ ಕುರಿತು ಪ್ರಚೋದನಾಕಾರಿ ಪೋಸ್ಟ್ ಪ್ರಕಟಿಸಿದಕ್ಕಾಗಿ ಟ್ರಂಪ್ ಟ್ವಿಟರ್ ಖಾತೆಯನ್ನು ನಿರ್ಬಂಧಿಸಲಾಗಿತ್ತು. ಡೊನಾಲ್ಡ್ ಟ್ರಂಪ್ ಅವರ ಫೇಸ್‌ಬುಕ್ ಖಾತೆಯ ಎರಡು ವರ್ಷಗಳ ಅಮಾನತು ನಿರ್ಣಯ ಜನವರಿ 7 ರಿಂದ ಜಾರಿಯಾಗಿತ್ತು.
ಎರಡು ವರ್ಷಗಳ ಹಿಂದೆ ನಿರ್ಬಂಧಕ್ಕೊಳಗಾಗಿರುವ ತಮ್ಮ ಖಾತೆಯನ್ನು ಅನ್‌ಬ್ಲಾಕ್ ಮಾಡುವಂತೆ ಟ್ರಂಪ್ ಅವರ ವಕೀಲರು ಫೇಸ್‌ಬುಕ್‌ನ ಪೋಷಕ ಕಂಪನಿ ಮೆಟಾಗೆ ಔಪಚಾರಿಕವಾಗಿ ಮನವಿ ಮಾಡಿದೆ ಎಂದು ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ.
ಎನ್‌ಬಿಸಿ ನ್ಯೂಸ್ ಪರಿಶೀಲಿಸಿದ ಪ್ರತಿಯ ಪ್ರಕಾರ, ಟ್ರಂಪ್ ಅವರ ತಂಡವು ಮೆಟಾಗೆ ಸಲ್ಲಿಸಿರುವ ತನ್ನ ಪತ್ರದಲ್ಲಿ, 'ಫೇಸ್‌ಬುಕ್‌ನಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯ ಮೇಲಿನ ನಿಷೇಧವು ಸಾರ್ವಜನಿಕರೊಂದಿಗಿನ ಮಾತುಕತೆಯನ್ನು ನಾಟಕೀಯವಾಗಿ ವಿರೂಪಗೊಳಿಸಿದೆ ಮತ್ತು ಪ್ರತಿಬಂಧಿಸಿದೆ ಎಂದು ನಾವು ನಂಬುತ್ತೇವೆ' ಎಂದು ಹೇಳಿದೆ.
ಇದನ್ನೂ ಓದಿ: ಎಲಾನ್ ಮಸ್ಕ್ ತೆಕ್ಕೆಗೆ ಟ್ವಿಟರ್: ಸಂತಸ ವ್ಯಕ್ತಪಡಿಸಿದ ಡೊನಾಲ್ಡ್ ಟ್ರಂಪ್
ಆದಾಗ್ಯೂ, ಯಾವುದೇ ಬೆದರಿಕೆಯನ್ನು ಒಡ್ಡಿಲ್ಲ. ಬದಲಿಗೆ, ಇದು ವಾಕ್ ಸ್ವಾತಂತ್ರ್ಯದ ಪ್ರಾಮುಖ್ಯತೆಯನ್ನು ಒತ್ತಿಹೇಳಿದೆ ಮತ್ತು 'ಟ್ರಂಪ್ ಅವರ ಸಾಮಾಜಿಕ ಮಾಧ್ಯಮದ ಖಾತೆಯನ್ನು ಶೀಘ್ರ ಮರುಸ್ಥಾಪಿಸುವ ಕುರಿತು ಚರ್ಚಿಸಲು ಸಭೆಗಾಗಿ ಮೆಟಾಗೆ ಮನವಿ ಮಾಡಿದೆ.
ಆದಾಗ್ಯೂ, 'ನಾವು ರೂಪಿಸಿದ ಪ್ರಕ್ರಿಯೆಗೆ ಅನುಗುಣವಾಗಿ ಮುಂಬರುವ ವಾರಗಳಲ್ಲಿ ಕಂಪನಿಯು ಈ ಕುರಿತು ನಿರ್ಧಾರವನ್ನು ಪ್ರಕಟಿಸುತ್ತದೆ ಎಂದು ಮೆಟಾ ವಕ್ತಾರರು ಹೇಳಿರುವುದಾಗಿ ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ.
ಫೇಸ್‌ಬುಕ್ ಅಂತಿಮವಾಗಿ ಟ್ರಂಪ್‌ಗೆ ಸೀಮಿತ ನಿಷೇಧವನ್ನು ವಿಧಿಸಲು ನಿರ್ಧರಿಸಿತು ಮತ್ತು ಅದನ್ನು ಎರಡು ವರ್ಷಗಳ ನಂತರ ಪರಿಶೀಲಿಸಲಾಗುವುದು ಎಂದು ಹೇಳಿತ್ತು.
ಇದನ್ನೂ ಓದಿ: ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆ ಮರುಸ್ಥಾಪನೆ: ಎಲಾನ್ ಮಸ್ಕ್
ಕಳೆದ ವರ್ಷ ನವೆಂಬರ್ 19ರಂದು ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್, ಕಳೆದ ನವೆಂಬರ್‌ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್‌ಗೆ ಹೇರಲಾಗಿದ್ದ ಶಾಶ್ವತ ನಿಷೇಧವನ್ನು ಹಿಂತೆಗೆದುಕೊಂಡಿದ್ದರು.