
shooting in Monterey Park
ಲಾಸ್ ಎಂಜಲೀಸ್: ಅಮೆರಿಕದಲ್ಲಿ ನಡೆಯುತ್ತಿದ್ದ ಚೈನೀಸ್ ನ್ಯೂ ಇಯರ್ ಪಾರ್ಟಿ ವೇಳೆ ಶೂಟೌಟ್ ಸಂಭವಿಸಿದ್ದು, ಈ ವೇಳೆ ಹಲವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ರಾತ್ರಿ ಕ್ಯಾಲಿಫೋರ್ನಿಯಾದ ಮಾಂಟೆರಿ ಪಾರ್ಕ್‌ನಲ್ಲಿ ಈ ಶೂಟೌಟ್ ನಡೆದಿದೆ. ಚೀನೀ ಚಾಂದ್ರಮಾನ ಪದ್ಧತಿಯ ಪ್ರಕಾರ ಅರಂಭವಾಗುವ ಹೊಸವರ್ಷವನ್ನು ಸಂಭ್ರಮಿಸಲು ಈ ವೇಳೆ ಅಲ್ಲಿ ಸಾವಿರಾರು ಮಂದಿ ನೆರೆದಿದ್ದರು. ಇದನ್ನೇ ಗುರಿಯಾಗಿಸಿಕೊಂಡು ಆಗಂತುಕ ದಾಳಿ ನಡೆಸಿದ್ದಾನೆ.
ಇದನ್ನೂ ಓದಿ: ಲಾಹೋರ್‌ನಲ್ಲಿ ಡ್ರಗ್ಸ್‌ಗಾಗಿ ಶಾಲಾ ಬಾಲಕಿಯ ಮೇಲೆ ನಾಲ್ವರು ವಿದ್ಯಾರ್ಥಿನಿಯರಿಂದ ಮೃಗೀಯ ವರ್ತನೆ: ವಿಡಿಯೋ ವೈರಲ್
ಲಾಸ್ಏಂಜಲೀಸ್ ನಗರದ (Los Angeles) ಸಮೀಪ ಇರುವ ಮಾಂಟೆರೆ ಪಾರ್ಕ್‌ನಲ್ಲಿ ಶನಿವಾರ ರಾತ್ರಿ ಅಪರಿಚಿತ ದುಷ್ಕರ್ಮಿ ನಡೆಸಿದ ಗುಂಡಿನ ದಾಳಿಯಲ್ಲಿ (Shooting) ಕನಿಷ್ಠ 10 ಮಂದಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಸತ್ತವರ ಮತ್ತು ಗಾಯಗೊಂಡವರ ನಿಖರ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ. ಗುಂಡಿನ ದಾಳಿ ನಡೆದಿರುವುದನ್ನು 'ಲಾಸ್ಏಂಜಲೀಸ್ ಟೈಮ್ಸ್' ವರದಿಯು ದೃಢಪಡಿಸಿದೆ.
ಇದನ್ನೂ ಓದಿ: ಉಕ್ರೇನ್ ಹೆಲಿಕಾಪ್ಟರ್ ಪತನ: ಆಂತರಿಕ ಸಚಿವ ಸೇರಿ 16 ಮಂದಿ ಸಾವು
ಕ್ಯಾಲಿಫೋರ್ನಿಯಾದ ಸ್ಥಳೀಯ ಕಾಲಮಾನ ಶನಿವಾರ ರಾತ್ರಿ 10 ಗಂಟೆಯ ವೇಳೆಗೆ ಈ ದುರ್ಘಟನೆ ನಡೆದಿದೆ. ಚೀನೀ ಚಾಂದ್ರಮಾನ ಪದ್ಧತಿಯ ಪ್ರಕಾರ ಅರಂಭವಾಗುವ ಹೊಸವರ್ಷವನ್ನು ಸಂಭ್ರಮಿಸಲು (Chinese New Year Party) ಈ ವೇಳೆ ಅಲ್ಲಿ ಸಾವಿರಾರು ಮಂದಿ ನೆರೆದಿದ್ದರು. ಲಾಸ್ಏಂಜಲೀಸ್ ಕೌಂಟಿಯಲ್ಲಿರುವ ಮಾಂಟೆರೆ ಪಾರ್ಕ್ ಲಾಸ್ಏಂಜಲೀಸ್ ನಗರದಿಂದ 11 ಕಿಮೀ ದೂರದಲ್ಲಿದೆ. ಇದೇ ಸಂದರ್ಭದಲ್ಲಿ ಆಗಂತುಕ ಗುಂಡಿನ ದಾಳಿ ನಡೆಸಿದ್ದಾನೆ.