ಪಾಕಿಸ್ತಾನ ಸರ್ಕಾರದ ವಿರುದ್ಧ ಸಾರ್ವಜನಿಕ ಟೀಕೆ: ಇಮ್ರಾನ್ ಖಾನ್ ಪಕ್ಷದ ನಾಯಕನ ಬಂಧನ
ಪಾಕಿಸ್ತಾನ ಸರ್ಕಾರದ ವಿರುದ್ಧ ಸಾರ್ವಜನಿಕ ಟೀಕೆ ಮಾಡಿದ್ದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ನಾಯಕ ಹಾಗೂ ಮಾಜಿ ಸಚಿವ ಫವಾದ್ ಚೌಧರಿಯನ್ನು ಬಂಧಿಸಲಾಗಿದೆ.
Published: 25th January 2023 01:42 PM | Last Updated: 25th January 2023 04:07 PM | A+A A-

ಫವಾದ್ ಚೌದರಿ ಬಂಧನ
ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರದ ವಿರುದ್ಧ ಸಾರ್ವಜನಿಕ ಟೀಕೆ ಮಾಡಿದ್ದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ನಾಯಕ ಹಾಗೂ ಮಾಜಿ ಸಚಿವ ಫವಾದ್ ಚೌಧರಿಯನ್ನು ಬಂಧಿಸಲಾಗಿದೆ.
ಪಾಕಿಸ್ತಾನದ ಮಾಜಿ ಸಚಿವ ಮತ್ತು ಹಿರಿಯ ಪಿಟಿಐ ನಾಯಕ ಫವಾದ್ ಚೌಧರಿ ಅವರನ್ನು ಬಂಧಿಸಲಾಗಿದ್ದು, ಬುಧವಾರ (ಜನವರಿ 25) ಬೆಳಗ್ಗೆ ಫವಾದ್ ಚೌಧರಿ ಬಂಧನದ ಬಗ್ಗೆ ಇಮ್ರಾನ್ ಖಾನ್ ಪಕ್ಷದ ಪಿಟಿಐ ನಾಯಕ ಫಾರೂಕ್ ಹಬೀಬ್ ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದ ಕಾರ್ಯದರ್ಶಿ ಚುನಾವಣಾ ಆಯೋಗದ (ಇಸಿಪಿ) ದೂರಿನ ಮೇರೆಗೆ ಕೊಹ್ಸಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ, ಇಮ್ರಾನ್ ಖಾನ್ ಅವರ ಆಪ್ತ ಸಹಾಯಕ ಫವಾದ್ ಅವರನ್ನು ಲಾಹೋರ್‌ನಲ್ಲಿರುವ ಅವರ ನಿವಾಸದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.
عمران خان آج شام 4 بجے میڈیا سے گفتگو کریں گے- #ReleaseFawadCh pic.twitter.com/fhTnXoQiRg
— PTI (@PTIofficial) January 25, 2023
ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಬಂಧಿಸಲು ಸರ್ಕಾರವನ್ನು ಸಾರ್ವಜನಿಕವಾಗಿ ಖಂಡಿಸಿದ ಕೂಡಲೇ ಫವಾದ್ ಚೌಧರಿ ಅವರನ್ನು ಅವರ ನಿವಾಸದಿಂದ ಬಂಧಿಸಲಾಯಿತು ಎಂದು ಅವರು ಹೇಳಿದರು. ಶಹಬಾಜ್ ಷರೀಫ್ ಸರ್ಕಾರ ಇಂದು ರಾತ್ರಿ ಇಮ್ರಾನ್ ಅವರನ್ನು ಬಂಧಿಸಲು ಪ್ರಯತ್ನಿಸುತ್ತದೆ ಎಂದು ಪಿಟಿಐ ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ವಿದ್ಯುತ್ ಬಿಕ್ಕಟ್ಟು: ಪ್ರಮುಖ ನಗರಗಳು ಕತ್ತಲಲ್ಲಿ; ಮಧ್ಯದಲ್ಲೇ ನಿಂತ ಮೆಟ್ರೋ ಸಂಚಾರ
ಫವಾದ್ ಚೌಧರಿ ಬಂಧನದ ಬೆನ್ನಲ್ಲೇ, ಇಮ್ರಾನ್ ಖಾನ್ ಅವರ ಮನೆಯ ಹೊರಗೆ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಶೆಹಬಾಜ್ ಷರೀಫ್ ಅವರ ಸರ್ಕಾರವು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಲು ಯೋಜಿಸುತ್ತಿದೆ ಎಂದು ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ಈ ಹಿಂದೆ ಹೇಳಿದ್ದರು.
ಪಾಕಿನಲ್ಲಿ ಮತ್ತೆ ರಾಜಕೀಯ ಬೆಳವಣಿಗೆ
ಇತ್ತ ಫವಾದ್ ಚೌದರಿ ಬೆನ್ನಲ್ಲೇ ಪಿಟಿಐ ಸರಣಿ ಟ್ವೀಟ್ ಮಾಡಿದ್ದು, ಇಮ್ರಾನ್ ಖಾನ್ ರನ್ನೂ ಬಂಧಿಸುವ ಆತಂಕ ವ್ಯಕ್ತಪಡಿಸಿದೆ. "ಚೌಧರಿ ಅವರನ್ನು ಯಾವುದೇ ನಂಬರ್ ಪ್ಲೇಟ್ ಹೊಂದಿರದ ನಾಲ್ಕು ಕಾರುಗಳಲ್ಲಿ ಬೆಳಿಗ್ಗೆ 5:30 ಕ್ಕೆ ಅವರ ಮನೆಯ ಹೊರಗಿನಿಂದ ಕರೆದೊಯ್ಯಲಾಯಿತು" ಎಂದು ಪಿಟಿಐ ನಾಯಕನ ಸಹೋದರ ಫೈಸಲ್ ಚೌಧರಿ ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ. ಫವಾದ್ ಇರುವ ಸ್ಥಳದ ಬಗ್ಗೆ ಕುಟುಂಬಕ್ಕೆ ತಿಳಿದಿಲ್ಲ ಎಂದೂ ಅವರು ಹೇಳಿದ್ದಾರೆ.
"ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ (ಪ್ರಥಮ ಮಾಹಿತಿ ವರದಿ) ಯಾವುದೇ ವಿವರಗಳನ್ನು ನಮಗೆ ನೀಡಲಾಗುತ್ತಿಲ್ಲ. ಎಫ್‌ಐಆರ್‌ನಲ್ಲಿ, ಖಾನ್ ಅವರ ಮನೆಯ ಹೊರಗೆ ಭಾಷಣದಲ್ಲಿ ಫವಾದ್ ಇಸಿಪಿಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.