ಸೊಮಾಲಿಯಾ: ಅಮೆರಿಕ ಸೇನೆ ಭರ್ಜರಿ ಕಾರ್ಯಾಚರಣೆ, ಐಸಿಸ್ ನಾಯಕ ಬಿಲಾಲ್ ಸೇರಿ 10 ಉಗ್ರರು ಹತ
ಸೊಮಾಲಿಯಾದಲ್ಲಿ ಅಮೆರಿಕ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಐಸಿಸ್ ನಾಯಕ ಬಿಲಾಲ್ ಸೇರಿದಂತೆ 10 ಭಯೋತ್ಪಾದಕರನ್ನು ಸೇನೆ ಕೊಂದು ಹಾಕಿದೆ ಎಂದು ಶುಕ್ರವಾರ ಅಮೆರಿಕ ಸರ್ಕಾರ ಖಚಿತಪಡಿಸಿದೆ.
Published: 27th January 2023 08:46 AM | Last Updated: 27th January 2023 08:46 AM | A+A A-

ಸೊಮಾಲಿಯಾದಲ್ಲಿ ಅಮೆರಿಕ ಸೇನೆ ಕಾರ್ಯಾಚರಣೆ (ಸಾಂದರ್ಭಿಕ ಚಿತ್ರ)
ನವದೆಹಲಿ: ಸೊಮಾಲಿಯಾದಲ್ಲಿ ಅಮೆರಿಕ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಐಸಿಸ್ ನಾಯಕ ಬಿಲಾಲ್ ಸೇರಿದಂತೆ 10 ಭಯೋತ್ಪಾದಕರನ್ನು ಸೇನೆ ಕೊಂದು ಹಾಕಿದೆ ಎಂದು ಶುಕ್ರವಾರ ಅಮೆರಿಕ ಸರ್ಕಾರ ಖಚಿತಪಡಿಸಿದೆ.
ಉತ್ತರ ಸೊಮಾಲಿಯಾದಲ್ಲಿನ ಪರ್ವತದ ಗುಹೆ ಕಣಿವೆ ಪ್ರದೇಶದಲ್ಲಿ, ಬಿಲಾಲ್ ಅಲ್-ಸುಡಾನಿಯ ಐಸಿಸ್ ಅಡಗುತಾಣದ ಮೇಲೆ ಈ ದಾಳಿಯಾಗಿದ್ದು, ಈ ವೇಳೆ ಬಿಲಾಲ್ ಸೇರಿದಂತೆ ಕನಿಷ್ಠ 10 ಮಂದಿ ಉಗ್ರರು ಹತರಾಗಿದ್ದಾರೆ. ಬಿಲಾಲ್ ಆಫ್ರಿಕಾದಾದ್ಯಂತ ತನ್ನ ಉಗ್ರ ಚಟುವಟಿಕೆಗಳನ್ನು ಯೋಜಿಸುತ್ತಿದ್ದ. ಇದೀಗ ಉಗ್ರ ಸಂಘಟನೆಯ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕಾದಲ್ಲಿ ಪೊಲೀಸ್ ವಾಹನ ಡಿಕ್ಕಿ ಹೊಡೆದು ಭಾರತೀಯ ಮೂಲದ ವಿದ್ಯಾರ್ಥಿನಿ ದುರ್ಮರಣ
ಅಮೆರಿಕ ಸೇನಾ ಪಡೆಗಳು ಉತ್ತರ ಸೊಮಾಲಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಬಿಲಾಲ್ ಅಲ್-ಸುಡಾನಿ ಮತ್ತು ಅವನ ಸುಮಾರು 10 ಸಹಚರರನ್ನು ಕೊಂದಿವೆ. ಬಿಡೆನ್ ಆಡಳಿತದ ಇಬ್ಬರು ಹಿರಿಯ ಅಧಿಕಾರಿಗಳು ಗುರುವಾರ ತಡರಾತ್ರಿ ಈ ಮಾಹಿತಿ ನೀಡಿದ್ದಾರೆ. ಈ ಸೇನಾ ಕಾರ್ಯಾಚರಣೆಗೆ ಈ ವಾರ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇನಾಪಡೆಗಳ ಆಗಮನದ ಬೆನ್ನಲ್ಲೇ ಕಾಲ್ಕೀಳುತ್ತಿದ್ದ ಉಗ್ರರು
ಉತ್ತರ ಸೊಮಾಲಿಯಾದಲ್ಲಿನ ಪರ್ವತದ ಗುಹೆ ಕಣಿವೆಯಲ್ಲಿ ಸೇನಾಪಡೆಗಳು ನುಗ್ಗುತ್ತಿದ್ದಂತೆಯೇ ಉಗ್ಗರು ಅಲ್ಲಿಂದ ಕಾಲ್ಕೀಳಲು ಯತ್ನಿಸಿದರು. ಆದರೆ ಉಗ್ರರು ತಪ್ಪಿಸಿಕೊಳ್ಳಲು ಅನುವು ಮಾಡಿಕೊಡದ ಸೇನೆ ಪ್ರದೇಶವನ್ನು ಸುತ್ತುವರೆದು ಕಾರ್ಯಾಚರಣೆ ನಡೆಸಿದೆ. ಈ ವೇಳೆ ಐಸಿಸಿ ಪ್ರಮುಖ ನಾಯಕ ಬಿಲಾಲ್ ಅಲ್-ಸುಡಾನಿ ಸೇರಿ 10 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೊಲ್ಲಲ್ಪಟ್ಟರು ಎಂದು ದೃಢಪಡಿಸಿದರು.
ಇದನ್ನೂ ಓದಿ: ರಷ್ಯಾ ಯುದ್ಧ: ಉಕ್ರೇನ್ ಗೆ ಅಮೆರಿಕದಿಂದ ಸುಧಾರಿತ 31 ಅಬ್ರಮ್ಸ್ ಟ್ಯಾಂಕರ್ ಗಳ ರವಾನೆ!
ಜನವರಿ 25 ರಂದು, ಅಮೆರಿಕ ಅಧ್ಯಕ್ಷರ ಆದೇಶದ ಮೇರೆಗೆ, ಅಮೆರಿಕ ಪಡೆಗಳು ಉತ್ತರ ಸೊಮಾಲಿಯಾದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು, ಇದು ಬಿಲಾಲ್ ಅಲ್-ಸುಡಾನಿ ಸೇರಿದಂತೆ ಹಲವಾರು ಇಸ್ಲಾಮಿಕ್ ಸ್ಟೇಟ್ ಸದಸ್ಯರನ್ನು ಕೊಲ್ಲಲು ಕಾರಣವಾಯಿತು. ಅಲ್-ಸುಡಾನಿ ಆಫ್ರಿಕಾದಲ್ಲಿ ISIS ನ ಬೆಳೆಯುತ್ತಿರುವ ಉಪಸ್ಥಿತಿಯನ್ನು ಪೋಷಿಸುವ ಜವಾಬ್ದಾರಿಯನ್ನು ಹೊಂದಿದ್ದ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಪ್ರಪಂಚದಾದ್ಯಂತ ಗುಂಪಿನ ಕಾರ್ಯಾಚರಣೆಗಳಿಗೆ ಆರ್ಥಿಕ ಸಹಾಯ ನೀಡ ತೊಡಗಿದ್ದ ಎನ್ನಲಾಗಿದೆ.
ನಾಗರಿಕ ಹಾನಿ ಇಲ್ಲ
ಕಾರ್ಯಾಚರಣೆಯಲ್ಲಿ ಯಾವುದೇ ನಾಗರಿಕರಿಗೆ ಹಾನಿಯಾಗಿಲ್ಲ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಸ್ಪಷ್ಟಪಡಿಸಿದ್ದು, ಈ ಯಶಸ್ವಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಅವರ ಬೆಂಬಲಕ್ಕಾಗಿ ನಮ್ಮ ಅಸಾಧಾರಣ ಸೇವಾ ಸದಸ್ಯರಿಗೆ ಹಾಗೂ ನಮ್ಮ ಗುಪ್ತಚರ ಸದಸ್ಯರು ಮತ್ತು ಇತರ ಪರಸ್ಪರ ಪಾಲುದಾರರಿಗೆ ನಾವು ಕೃತಜ್ಞರಾಗಿರುತ್ತೇವೆ. ಅಧಿಕೃತ ಸೇನಾ ಮೂಲಗಳ ಪ್ರಕಾರ, US ಪಡೆಗಳು ಅಲ್-ಸುಡಾನಿಯನ್ನು ವಶಪಡಿಸಿಕೊಳ್ಳಲು ಸಿದ್ಧವಾಗಿದ್ದವು, ಆದರೆ ಅಂತಿಮವಾಗಿ ಆತ ಶರಣಾಗದೇ ದಾಳಿಗೆ ಮುಂದಾಗಿದ್ದರಿಂದ ಆತನನ್ನು ಕೊಲ್ಲಲಾಯಿತು ಎಂದು ಅವರು ಹೇಳಿದ್ದಾರೆ.