ಭಾರತ-ಅಮೆರಿಕ ಜನರು ಹತ್ತಿರವಾಗುತ್ತಿದ್ದಾರೆ, ಅಮೆರಿಕದ ಯುವಕರು 'ನಾಟು ನಾಟು' ಗೀತೆಗೆ ಡ್ಯಾನ್ಸ್ ಮಾಡುತ್ತಾರೆ: ಪಿಎಂ ಮೋದಿ
ಬಾಹುಬಲಿ ಖ್ಯಾತಿಯ ಎಸ್ ಎಸ್ ರಾಜಮೌಳಿ ನಿರ್ದೇಶನದ ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿಆರ್ ಹೆಜ್ಜೆ ಹಾಕಿ ಕುಣಿದ 'ಆರ್ ಆರ್ ಆರ್' ಸಿನಿಮಾದ 'ನಾಟು ನಾಟು' ಹಾಡು ಆಸ್ಕರ್ ಪ್ರಶಸ್ತಿ ಗೆದ್ದ ಮೇಲಂತೂ ಜಾಗತಿಕ ಮಟ್ಟದಲ್ಲಿ ಬಹಳ ಜನಪ್ರಿಯವಾಯಿತು. ಅದರ ಸ್ಟೆಪ್ ಗೆ ಮನಸೋಲದವರಿಲ್ಲ.
Published: 23rd June 2023 09:52 AM | Last Updated: 23rd June 2023 02:36 PM | A+A A-

ಯುಎಸ್ ಕಾಂಗ್ರೆಸ್ ಜಂಟಿ ಅಧಿವೇಶನ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ವಾಷಿಂಗ್ಟನ್ ಡಿ ಸಿ(ಯುಎಸ್): ಬಾಹುಬಲಿ ಖ್ಯಾತಿಯ ಎಸ್ ಎಸ್ ರಾಜಮೌಳಿ ನಿರ್ದೇಶನದ ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿಆರ್ ಹೆಜ್ಜೆ ಹಾಕಿ ಕುಣಿದ 'ಆರ್ ಆರ್ ಆರ್' ಸಿನಿಮಾದ 'ನಾಟು ನಾಟು' ಹಾಡು ಆಸ್ಕರ್ ಪ್ರಶಸ್ತಿ ಗೆದ್ದ ಮೇಲಂತೂ ಜಾಗತಿಕ ಮಟ್ಟದಲ್ಲಿ ಬಹಳ ಜನಪ್ರಿಯವಾಯಿತು. ಅದರ ಸ್ಟೆಪ್ ಗೆ ಮನಸೋಲದವರಿಲ್ಲ.
ಅಮೆರಿಕ ಪ್ರವಾಸ ಕೈಗೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತೀಯ ಕಾಲಮಾನ ಪ್ರಕಾರ ಕಳೆದ ರಾತ್ರಿ ನಿನ್ನೆ ಅಲ್ಲಿನ ಆಡಳಿತ ಶಕ್ತಿಕೇಂದ್ರ ಶ್ವೇತಭವನದಲ್ಲಿ ನಡೆದ ಔತಣಕೂಟದಲ್ಲಿ ನಾಟು ನಾಟು ಗೀತೆಯ ಬಗ್ಗೆ ವಿಶೇಷ ಭಾಷಣದಲ್ಲಿ ಪ್ರಸ್ತಾಪಿಸಿದರು.
ದಿನಗಳೆದಂತೆ ಭಾರತೀಯರು ಮತ್ತು ಅಮೆರಿಕನ್ನರು ಹತ್ತಿರವಾಗುತ್ತಿದ್ದಾರೆ. ಪರಸ್ಪರ ನಮ್ಮ ಹೆಸರುಗಳನ್ನು ಸರಿಯಾಗಿ ಉಚ್ಛರಿಸುತ್ತಿದ್ದೇವೆ. ನಮ್ಮ ಭಾಷೆ, ಉಚ್ಛಾರಗಳನ್ನು ಒಬ್ಬರಿಗೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಿದ್ದೇವೆ. ಹಾಲೋವಿನ್ ನಲ್ಲಿ ಭಾರತದ ಮಕ್ಕಳು ಸ್ಪೈಡರ್ ಮ್ಯಾನ್ ಗಳಾಗುತ್ತಿದ್ದಾರೆ. ಅಮೆರಿಕದ ಯುವಜನತೆ ಭಾರತದ ನಾಟು ನಾಟು ಗೀತೆಗೆ ಹೆಜ್ಜೆ ಹಾಕುತ್ತಾರೆ ಎಂದು ಪ್ರಧಾನಿ ಹೇಳಿದರು.
ಉತ್ತಮ ಆರೋಗ್ಯ, ಸಮೃದ್ಧಿ ಮತ್ತು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಕ್ಕೆ ಸಂತೋಷದ ಅನ್ವೇಷಣೆಗಾಗಿ ಮತ್ತು ಭಾರತ ಮತ್ತು ಯುಎಸ್ ನಡುವಿನ ಸ್ನೇಹದ ಶಾಶ್ವತ ಬಂಧ ಮತ್ತಷ್ಟು ಬೆಳೆಯಲಿದೆ ಎಂದರು.
ಇದನ್ನೂ ಓದಿ: ಭಾರತದ ಡಿಎನ್ಎ ನಲ್ಲೇ ಪ್ರಜಾಪ್ರಭುತ್ವವಿದೆ, ತಾರತಮ್ಯದ ಪ್ರಶ್ನೆಯೇ ಇಲ್ಲ: ಶ್ವೇತ ಭವನದಲ್ಲಿ ಪತ್ರಕರ್ತರ ಪ್ರಶ್ನೆಗೆ ಮೋದಿ
ಅಮೆರಿಕನ್ನರು ಬೇಸ್‌ಬಾಲ್ ನ್ನು ಪ್ರೀತಿಸುತ್ತಾರೆ, ಕ್ರಿಕೆಟ್ ಯುಎಸ್‌ನಲ್ಲಿ ಜನಪ್ರಿಯವಾಗುತ್ತಿದೆ. ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಅಮೇರಿಕನ್ ತಂಡವು ಅತ್ಯುತ್ತಮವಾಗಿ ಪ್ರಯತ್ನಿಸುತ್ತಿದೆ. ನಾನು ಅವರಿಗೆ ಅದೃಷ್ಟ ಮತ್ತು ಯಶಸ್ಸನ್ನು ಬಯಸುತ್ತೇನೆ ಎಂದು ಪ್ರಧಾನಿ ಹೇಳಿದರು.
ಅನಿವಾಸಿ ಭಾರತೀಯರು: ಭಾರತೀಯ ಅಮೆರಿಕನ್ನರು ಅಮೇರಿಕಾದಲ್ಲಿ ಬಹಳ ದೂರ ಸಾಗಿದ್ದಾರೆ. ಅವರು ಭಾರತದ ಮೌಲ್ಯಗಳು, ಪ್ರಜಾಪ್ರಭುತ್ವ ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುತ್ತಾರೆ. ಅಮೆರಿಕದಲ್ಲಿ ಗೌರವಾನ್ವಿತ ಸ್ಥಾನವನ್ನು ಕಂಡುಕೊಂಡಿದ್ದಾರೆ. ಅಮೆರಿಕದ ಅಂತರ್ಗತ ಸಮಾಜ ಮತ್ತು ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಭಾರತೀಯ ಅಮೆರಿಕನ್ನರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.
ಇಂದಿನ ಔತಣಕೂಟ ಎರಡೂ ದೇಶಗಳ ಜನರ ಭಾಗವಹಿಸುವಿಕೆಯಿಂದ ಅತಿ ಮಹತ್ವದ ಗಳಿಗೆಯಾಗಿದೆ. ಕಳೆದ ಬಾರಿ ಕ್ವಾಡ್ ಶೃಂಗಸಭೆಗೆ ಜಪಾನ್ ನಲ್ಲಿ ಭೇಟಿ ಮಾಡಿದಾಗ ನೀವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಹೇಳಿದ್ದಿರಿ. ಈಗ ನೀವು ಆ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ಇಂದು ರಾತ್ರಿ ಔತಣಕೂಟಕ್ಕೆ ಬರುವವರು ಎಲ್ಲದಕ್ಕೂ ಸಲ್ಲುವವರು ಎಂದು ನಾನು ಭಾವಿಸುತ್ತೇನೆ ಎಂದರು.
ಆಸ್ಪತ್ರೆಗಳು ಅಥವಾ ಹೋಟೆಲ್‌ಗಳು, ವಿಶ್ವವಿದ್ಯಾಲಯಗಳು ಅಥವಾ ಸಂಶೋಧನಾ ಪ್ರಯೋಗಾಲಯಗಳು, ಗ್ಯಾಸ್ ಸ್ಟೇಷನ್‌ಗಳು ಅಥವಾ ಲಾಜಿಸ್ಟಿಕ್ಸ್ ಮ್ಯಾನೇಜ್‌ಮೆಂಟ್ ಆಗಿರಲಿ ಅವರು ಎಲ್ಲೆಡೆ ತಮ್ಮ ಛಾಪು ಮೂಡಿಸುತ್ತಿದ್ದಾರೆ ಎಂದರು. ಮೋದಿಯವರು ಹಿಂದಿಯಲ್ಲಿ ಮಾಡಿದ ಭಾಷಣವನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಲಾಯಿತು.
ಇದನ್ನೂ ಓದಿ: 'ನಾನು ಮೋದಿಯವರ ಬಹಳ ದೊಡ್ಡ ಅಭಿಮಾನಿ, ಭಾರತದ ಭವಿಷ್ಯ ಉಜ್ವಲವಾಗಿದೆ': ಟೆಸ್ಲಾ ಸಿಇಒ ಎಲೋನ್ ಮಸ್ಕ್
ಅಧ್ಯಕ್ಷ ಬಿಡೆನ್ ತಮ್ಮ ಹೇಳಿಕೆಯಲ್ಲಿ ಭಾರತ ಮತ್ತು ಯುಎಸ್ ನಡುವಿನ ಬಾಂಧವ್ಯವು ಅಮೆರಿಕದ ಆರಂಭಿಕ ದಿನಗಳಿಂದಲೂ ವಿಸ್ತರಿಸಿಕೊಂಡು ಬಂದಿದೆ. 1792 ರಲ್ಲಿ, ನಮ್ಮ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಅವರು ಕೊಲ್ಕತ್ತಾದಲ್ಲಿ ವಾಣಿಜ್ಯ ಮತ್ತು ಸಂಸ್ಕೃತಿಯ ಕೇಂದ್ರವಾಗಿ ಮೊದಲ ರಾಯಭಾರ ಕಚೇರಿ ಸ್ಥಾಪಿಸಿದ್ದರು ಎಂದರು.
PM Shri @narendramodi’s remarks at the State Dinner hosted by the @POTUS @JoeBiden. pic.twitter.com/pTMwGQf9mQ
— BJP (@BJP4India) June 23, 2023
ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳು ತಲೆಮಾರಿನ ನಂತರ ಪೀಳಿಗೆಯನ್ನು ಹೊಸ ರೂಪಾಂತರಿಸಲು ಮತ್ತು ಪ್ರತಿಬಿಂಬಿಸಲು ಕಾರಣಗಳಿವೆ ಎಂದು ಬೈಡನ್ ಹೇಳಿದರು.
ನನ್ನ ಭಾರತ ಭೇಟಿಯಲ್ಲಿ ನಾನು ನೋಡುತ್ತೇನೆ. ಕಲೆ, ಶಿಕ್ಷಣ, ಮಾಧ್ಯಮ, ಕಾನೂನು, ವೈದ್ಯಕೀಯ, ವಿಜ್ಞಾನ ಮತ್ತು ಪ್ರತಿಯೊಂದು ಗಾತ್ರದ ವ್ಯವಹಾರಗಳಲ್ಲಿ, ಸ್ಪೆಲ್ಲಿಂಗ್ ಬೀ ಚಾಂಪಿಯನ್‌ಗಳಲ್ಲಿ, ಕ್ರಿಕೆಟ್ ಕ್ಲಬ್‌ಗಳಲ್ಲಿ ಇಲ್ಲಿ ಭಾರತೀಯರು ಛಾಪು ಮೂಡಿಸುತ್ತಿದ್ದಾರೆ. ನನ್ನ ತವರು ರಾಜ್ಯವಾದ ಡೆಲವೇರ್ ಮತ್ತು ಸಂಸತ್ತಿನಲ್ಲಿ ದಾಖಲೆ ಸಂಖ್ಯೆಯ ಭಾರತೀಯ ಅಮೆರಿಕನ್ನರು ಸೇರಿದಂತೆ ಇಂದು ಔತಣಕೂಟದಲ್ಲಿ ಸೇರಿದ್ದಾರೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದರು.
ಶ್ವೇತಭವನದ ಸೌತ್ ಲಾನ್ ನಲ್ಲಿ ಏರ್ಪಡಿಸಿದ್ದ ಔತಣಕೂಟಕ್ಕೆ ಸುಮಾರು 400 ಮಂದಿ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಭಾರತದಿಂದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಅವರಿಗೆ ಆಹ್ವಾನವಿದ್ದು ಅವರು ಔತಣಕೂಟಕ್ಕೆ ಹಾಜರಾಗಿದ್ದರು.
'It's a historic visit for both the countries': says Mukesh Ambani at the State Dinner hosted for Prime Minister @narendramodi.#ModiUSVisit2023 #IndiaUSAPartnership #USWelcomesModi pic.twitter.com/wJSgPtDzFt
— DD News (@DDNewslive) June 22, 2023
ಅಮೆರಿಕದಲ್ಲಿರುವ ಗೂಗಲ್ ಸಿಇಒ ಸುಂದರ್ ಪಿಚ್ಛೈ ಮತ್ತು ಆಪಲ್ ಸಿಇಒ ಟಿಮ್ ಕೂಕ್ ಅವರು ಸಹ ಔತಣಕೂಟದಲ್ಲಿ ಉಪಸ್ಥಿತರಿದ್ದರು.