
ರಷ್ಯಾದ ಪಾಪ್ ತಾರೆ ನಿಗೂಢ ಸಾವು
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟೀಕಿಸಿ ಹಾಡುಗಳ ಬರೆದು ಹಾಡಿದ್ದ 35 ವರ್ಷದ ಪಾಪ್ ತಾರೆ ಡಿಮಾ ನೋವಾ ನಿಗೂಢ ಸಾವಿಗೀಡಾಗಿದ್ದಾರೆ.
ರಷ್ಯಾದ ಪಾಪ್ ತಾರೆ ದಿಮಾ ನೋವಾ ಹಠಾತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದ್ದು, ನ್ಯೂಸ್‌ವೀಕ್ ಪ್ರಕಾರ, ಡಿಮಾ ಪಾಪ್ ಗುಂಪಿನ ಸಂಸ್ಥಾಪಕರಾಗಿದ್ದರು, ಅವರ ಹಾಡುಗಳು ರಷ್ಯಾದಲ್ಲಿ ಯುದ್ಧ-ವಿರೋಧಿ ಪ್ರತಿಭಟನೆಗಳ ಸಮಯದಲ್ಲಿ ಜನಪ್ರಿಯವಾಗಿದ್ದವು.
ಇದನ್ನೂ ಓದಿ: ಭಾರತೀಯ-ಅಮೇರಿಕನ್ ನಟಿಗೆ ರಾಷ್ಟ್ರೀಯ ಮಾನವೀಯತೆ ಪದಕ ನೀಡಿ ಗೌರವಿಸಿದ ಬೈಡನ್ ಸರ್ಕಾರ
ಕ್ರೀಮ್ ಸೋಡಾ ಗುಂಪಿನ ಸಂಸ್ಥಾಪಕರಾದ ಡಿಮಾ ನೋವಾ ತಮ್ಮ ಹಾಡಿನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ 1.3 ಬಿಲಿಯನ್ ಡಾಲರ್ ಅರಮನೆಯವನ್ನು ಟೀಕಿಸಿದ್ದಾರೆ. ಇದೇ "ಆಕ್ವಾ ಡಿಸ್ಕೋ" ಹಾಡಿನಲ್ಲಿ ಮಾಸ್ಕೋದ ಉಕ್ರೇನ್ ಆಕ್ರಮಣದ ವಿರುದ್ಧ ಪ್ರತಿಭಟಿಸಿ ಆಗಾಗ್ಗೆ ಪ್ರದರ್ಶನ ನೀಡುತ್ತಿದ್ದರು. ಇದಕ್ಕೆ "ಆಕ್ವಾ ಡಿಸ್ಕೋ ಪಾರ್ಟಿ" ಎಂದೇ ಕರೆಯಲಾಗುತ್ತಿತ್ತು. ಮಾಸ್ಕೋದ ಉಕ್ರೇನ್ ಆಕ್ರಮಣದ ವಿರುದ್ಧ ಪ್ರತಿಭಟಿಸಲು ಆಗಾಗ್ಗೆ ಈ ಹಾಡನ್ನು ಹಾಡಲಾಗುತ್ತಿತ್ತು.
ನೀರಿನಲ್ಲಿ ಮುಳುಗಿ ಸಾವು
ಯಾರೋಸ್ಲಾವ್ಲ್ ಪ್ರದೇಶದಲ್ಲಿ ರಷ್ಯಾದ ವೋಲ್ಗಾ ನದಿಯನ್ನು ದಾಟುವಾಗ ಡಿಮಾ ನೋವಾ ಹಿಮ ನದಿಯಲ್ಲಿ ಬಿದ್ದಿದ್ದಾರೆ ಎಂದು ರಷ್ಯಾದ ಸುದ್ದಿ ವೆಬ್‌ಸೈಟ್ ಪೀಪಲ್‌ಟಾಕ್ ವರದಿ ಮಾಡಿದೆ. ಅಪಘಾತದ ಸಮಯದಲ್ಲಿ ಅವರ ಸಹೋದರ ರೋಮಾ ಮತ್ತು ಇಬ್ಬರು ಸ್ನೇಹಿತರು ಜೊತೆಗಿದ್ದರು ಎಂದು ಹೇಳಲಾಗಿದ್ದು, ಪಾಪ್ ಗ್ರೂಪ್ ಕ್ರೀಮ್ ಸೋಡಾ ಇನ್‌ಸ್ಟಾಗ್ರಾಮ್‌ನಲ್ಲಿ ಡಿಮಾ ನೋವಾ ಅವರ ಮರಣವನ್ನು ಪ್ರಕಟಿಸುವ ಪೋಸ್ಟ್ ಅನ್ನು ಹಂಚಿಕೊಂಡಿದೆ.
ಇದನ್ನೂ ಓದಿ: ಆಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪನ: ಉತ್ತರ ಭಾರತದಲ್ಲೂ ನಡುಗಿದ ಭೂಮಿ, ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆ ದಾಖಲು
"ಕಳೆದ ರಾತ್ರಿ ನಮಗೆ ದುರಂತ ಸಂಭವಿಸಿದೆ. ಸ್ನೇಹಿತರನ್ನು ಭೇಟಿ ಮಾಡುತ್ತಿದ್ದ ನಮ್ಮ ದಿಮಾ ನೋವಾ, ವೋಲ್ಗಾ ನದಿಯನ್ನು ದಾಟುತ್ತಿದ್ದರು ಮತ್ತು ಇದ್ದಕ್ಕಿದ್ದಂತೆ ಮಂಜುಗಡ್ಡೆಯಡಿ ಬಿದ್ದಿದ್ದಾರೆ" ಎಂದು ಗುಂಪು ಪೋಸ್ಟ್‌ನಲ್ಲಿ ಬರೆದಿದೆ. ಅದರಲ್ಲಿ, "ತುರ್ತು ಪರಿಸ್ಥಿತಿಗಳ ಸಚಿವಾಲಯವು ಇನ್ನೂ ಅವನ ಸಹೋದರ ರೋಮಾ ಮತ್ತು ಸ್ನೇಹಿತ ಗೋಶಾ ಕಿಸೆಲೆವ್‌ಗಾಗಿ ಹುಡುಕುತ್ತಿದೆ. ಹಿಮದಲ್ಲಿ ಬಿದ್ದಿದ್ದ ಅವರನ್ನು ಇನ್ನೊಬ್ಬ ಸ್ನೇಹಿತ ಅರಿಸ್ಟಾರ್ಕಸ್ ನೆರವಿನಿಂದ ಹೊರತೆಗೆಯಲಾಯಿತು, ಆದರೆ ಜೀವ ಉಳಿಸಲಾಗಲಿಲ್ಲ ಎಂದು ಹೇಳಿದ್ದಾರೆ.