ಮೇ 31 ರಿಂದ ಜೂನ್ 3 ರವರೆಗೆ ನೇಪಾಳ ಪ್ರಧಾನಿ ಪ್ರಚಂಡ ಭಾರತಕ್ಕೆ ಭೇಟಿ
ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ಅವರು ಮೇ 31 ರಿಂದ ನಾಲ್ಕು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಕಠ್ಮಂಡುವಿನಲ್ಲಿ ವಿದೇಶಾಂಗ ಸಚಿವಾಲಯದ...
Published: 27th May 2023 12:04 AM | Last Updated: 27th May 2023 02:40 PM | A+A A-

ಪುಷ್ಪ ಕಮಲ್ ದಹಾಲ್
ಕಠ್ಮಂಡು: ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ಅವರು ಮೇ 31 ರಿಂದ ನಾಲ್ಕು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಕಠ್ಮಂಡುವಿನಲ್ಲಿ ವಿದೇಶಾಂಗ ಸಚಿವಾಲಯದ ಮೂಲಗಳು ಶುಕ್ರವಾರ ತಿಳಿಸಿವೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೂರನೇ ಬಾರಿಗೆ ನೇಪಾಳ ಪ್ರಧಾನಿ ಹುದ್ದೆ ಅಲಂಕರಿಸಿದ ನಂತರ ಪ್ರಚಂಡ ಅವರ ಮೊದಲ ವಿದೇಶಿ ಭೇಟಿ ಇದಾಗಿದೆ.
ಪ್ರಧಾನಿ ಪ್ರಚಂಡ ಅವರು ಮೇ 31 ರಿಂದ ಜೂನ್ 3 ರವರೆಗೆ ಭಾರತಕ್ಕೆ ಭೇಟಿ ನಡೆಯಲಿದ್ದಾರೆ ಎಂದು ಕಠ್ಮಂಡುವಿನಲ್ಲಿ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಇದನ್ನು ಓದಿ: ನೇಪಾಳ ನೂತನ ಅಧ್ಯಕ್ಷರಾಗಿ ರಾಮಚಂದ್ರ ಪೌಡೆಲ್ ಆಯ್ಕೆ
ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರ ಭಾರತ ಭೇಟಿಯ ಕುರಿತು ವಿದೇಶಾಂಗ ಸಚಿವಾಲಯ ಶನಿವಾರ ಅಧಿಕೃತ ಘೋಷಣೆ ಮಾಡಲಿದೆ.
ಈ ಭೇಟಿಯು ಮೇ 31 ರಿಂದ ಜೂನ್ 3 ರವರೆಗೆ ನಡೆಯಲಿದೆ ಮತ್ತು ಅವರು ದ್ವಿಪಕ್ಷೀಯ ಸಂಬಂಧಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಉನ್ನತ ಮಟ್ಟದ ನಾಯಕರೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವ ಎನ್‌ಪಿ ಸೌದ್ ಅವರ ಸಹಾಯಕ ಅಧಿಕಾರಿ ತಿಳಿಸಿದ್ದಾರೆ.