ಇನ್ನು ದುಡಿದು ತಂದು ಊಟ ಹಾಕಲು ಸಾಧ್ಯವಿಲ್ಲ: ಹೆಂಡತಿ ಮತ್ತು 7 ಅಪ್ರಾಪ್ತ ಮಕ್ಕಳನ್ನು ಕೊಚ್ಚಿ ಕೊಂದ ಪಾಪಿ!

ಪತಿಯೋರ್ವ ತನ್ನ ಪತ್ನಿ ಮತ್ತು ಏಳು ಅಪ್ರಾಪ್ತ ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಭಯಾನಕ ಘಟನೆಯೊಂದು ಪಾಕಿಸ್ತಾನದ ಪಂಜಾಬ್ ನಲ್ಲಿ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಾಹೋರ್ : ಪತಿಯೋರ್ವ ತನ್ನ ಪತ್ನಿ ಮತ್ತು ಏಳು ಅಪ್ರಾಪ್ತ ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಭಯಾನಕ ಘಟನೆಯೊಂದು ಪಾಕಿಸ್ತಾನದ ಪಂಜಾಬ್ ನಲ್ಲಿ ಬೆಳಕಿಗೆ ಬಂದಿದೆ.

ಕೂಲಿ ಕಾರ್ಮಿಕನಾದ ಸಜ್ಜದ್​ ಖೋಖರ್​ ತನ್ನ 42 ವರ್ಷದ ಪತ್ನಿ ಕೌಸರ್​ ಮತ್ತು ಏಳು ಮಕ್ಕಳನ್ನು ಕೊಲೆಗೈದಿದ್ದಾನೆ. 10 ವರ್ಷದೊಳಗಿನ ನಾಲ್ವರು ಪುತ್ರಿಯರು ಮತ್ತು ಮೂವರು ಗಂಡು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ, ಎಲ್ಲರನ್ನು ಸ್ಥಳದಲ್ಲೇ ಕೊಂದು ಹಾಕಿದ್ದಾರೆ. ಪಂಬಾಜ್​ ಪೊಲೀಸರ ಮಹಿತಿಯಂತೆ, ಕೂಲಿ ಕಾರ್ಮಿಕ ಮಾನಸಿಕವಾಗಿ ತೊಂದರೆಗೀಡಾಗಿದ್ದಾನೆ. ಆತ ಆಗಾಗ ತನ್ನ ಹೆಂಡತಿ ಜೊತೆಗೆ ಜಗಳ ಮಾಡುತ್ತಿದ್ದನು. ಸದ್ಯ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಪತ್ನಿಯ ಕುಟುಂಬದವರು ಆತನ ಮೇಲೆ ಕೇಸ್​ ನೀಡಿದ್ದಾರೆ.

ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನ್ನ ಮಕ್ಕಳಿಗೆ ಇನ್ನು ಮುಂದೆ ಆಹಾರ ನೀಡಲು ಸಾಧ್ಯವಾಗದ ಕಾರಣ ಈ ಕೃತ್ಯ ಎಸಗಿರುವುದಾಗಿ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರು ಹತ್ಯೆ ಬಗ್ಗೆ ತಮ್ಮ ಸಂತಾಪ ಸೂಚಿಸಿದ್ದು ಪೊಲೀಸ್ ಮಹಾನಿರೀಕ್ಷಕರಿಂದ ವರದಿಯನ್ನು ಕೇಳಿದ್ದಾರೆ.

ಸಾಂದರ್ಭಿಕ ಚಿತ್ರ
ಯುಪಿ: ಗ್ಯಾಂಗ್ ಸ್ಟರ್ ಮುಖ್ತಾರ್ ಅನ್ಸಾರಿ ಸಾವು 'ಯೋಜಿತ ಕೊಲೆ' ಕುಟುಂಬಸ್ಥರ ಆರೋಪ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com