ಭಾರತ ಮೂಲದ ಕಂಪನಿಗಳಿಗೆ ಅಮೆರಿಕ ನಿರ್ಬಂಧ
ಭಾರತ ಮೂಲದ ಕಂಪನಿಗಳಿಗೆ ಅಮೆರಿಕ ನಿರ್ಬಂಧ

US Sanction: ಇರಾನ್ ಜೊತೆ ವಹಿವಾಟು ಆರೋಪ, ಭಾರತ ಮೂಲದ 3 ಕಂಪನಿ ಸೇರಿದಂತೆ 12ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅಮೆರಿಕ ನಿರ್ಬಂಧ

ಇರಾನ್ ಜೊತೆ ವಹಿವಾಟು ಹೊಂದಿರುವ ಆರೋಪದ ಮೇರೆಗೆ ಭಾರತ ಮೂಲದ 3 ಕಂಪನಿಗಳು ಸೇರಿದಂತೆ 12ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅಮೆರಿಕ ನಿರ್ಬಂಧ ಹೇರಿದೆ.

ವಾಷಿಂಗ್ಟನ್: ಇರಾನ್ ಜೊತೆ ವಹಿವಾಟು ಹೊಂದಿರುವ ಆರೋಪದ ಮೇರೆಗೆ ಭಾರತ ಮೂಲದ 3 ಕಂಪನಿಗಳು ಸೇರಿದಂತೆ 12ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅಮೆರಿಕ ನಿರ್ಬಂಧ ಹೇರಿದೆ.

ಇರಾನಿಯನ್‌ ಸೇನೆ ಜೊತೆ ಅಕ್ರಮ ವ್ಯಾಪಾರ ವಹಿವಾಟು ಹೊಂದಿರುವ 12ಕ್ಕೂ ಅಧಿಕ ಕಂಪನಿಗಳು, ಹಡುಗುಗಳು ಮತ್ತು ಉದ್ಯಮಿಗಳ ಮೇಲೆ ಅಮೆರಿಕ ನಿರ್ಬಂಧ (US imposes sanctions) ವಿಧಿಸಿದ್ದು, ಇದರಲ್ಲಿ ಭಾರತ ಮೂರು ಕಂಪನಿಗಳು(Indian based firms) ಸೇರಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭಾರತ ಮೂಲದ ಕಂಪನಿಗಳಿಗೆ ಅಮೆರಿಕ ನಿರ್ಬಂಧ
ಇರಾನ್ ಜೊತೆಗಿನ ವ್ಯಾಪಾರ ಒಪ್ಪಂದ ಕುರಿತು ಪಾಕ್‌ಗೆ ಅಮೆರಿಕ ಎಚ್ಚರಿಕೆ

ರಷ್ಯಾ-ಉಕ್ರೇನ್‌ ಯುದ್ಧ(Russia Ukraine war) ಸಂದರ್ಭದಲ್ಲಿ ಈ ಕಂಪನಿಗಳು, ಹಡಗುಗಳು ಮತ್ತು ವ್ಯಕ್ತಿಗಳು ಇರಾನ್‌ನ ಮಾನವ ರಹಿತ ವೈಮಾನಿಕ ವಾಹನ- ಡ್ರೋನ್‌(UAVs) ಗಳನ್ನು ರಷ್ಯಾಗೆ ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದು ಅಮೆರಿಕದ ಆರೋಪಿಸಿದೆ.

ಇರಾನ್‌ನ ಸಾಗರೋತ್ತರ ವ್ಯಾಪಾರ ವಹಿವಾಟು ನೋಡಿಕೊಳ್ಳುತ್ತಿರುವ ಕಂಪನಿಗಳಲ್ಲಿ ಸಹರಾ ಥಂಡರ್‌ ಪ್ರಮುಖವಾಗಿದ್ದು, ಈ ಕಂಪನಿಗೆ ಭಾರತೀಯ ಮೂಲದ ಮೂರು ಕಂಪನಿಗಳು ಸಹಾಯ ನೀಡುತ್ತಿವೆ. ಹೀಗಾಗಿ ಭಾರತೀಯ ಮೂಲದ ಜೆನ್‌ ಶಿಪ್ಪಿಂಗ್‌, ಪೋರ್ಟ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ ಮತ್ತು ಸೀ ಆರ್ಟ್‌ ಶಿಪ್‌ ಮ್ಯಾನೇಜ್‌ಮೆಂಟ್‌(OPC) ಪ್ರೈವೆಟ್‌ ಲಿಮಿಟೆಡ್‌ಗೆ ಅಮೆರಿಕ ನಿರ್ಬಂಧ ವಿಧಿಸಿದೆ.

ಅಮೆರಿಕ ವಾದವೇನು?

ಅಮೆರಿಕ ಟ್ರೆಷರ್ ಡಿಪಾರ್ಟ್ ಮೆಂಟ್ ಮೂಲಗಳು ತಿಳಿಸಿರುವಂತೆ, 'ಸಹಾರಾ ಥಂಡರ್‌ ಕಂಪನಿ ಇರಾನ್‌ ಸೇನೆಯ ಪರವಾಗಿ ಇರಾನಿಯನ್‌ ಸರಕುಗಳನ್ನು ಚೀನಾ, ರಷ್ಯಾ ಮತ್ತು ವೆನೆಜುವೆಲಾಗಳಿಗೆ ಸಾಗಾಟ ಮಾಡುತ್ತಿದೆ.

ಇದೀಗ ಈ ಕಂಪನಿ ಯುಎಇ ಮೂಲದ ಸೇಫ್ ಸೀಸ್ ಶಿಪ್ ಮ್ಯಾನೇಜ್‌ಮೆಂಟ್ FJEನ ಕುಕ್ ಐಲ್ಯಾಂಡ್ಸ್-ಫ್ಲ್ಯಾಗ್ಡ್ ನೌಕೆ CHEM (IMO 9240914) ಗಾಗಿ ಭಾರತ ಮೂಲದ ಝೆನ್ ಶಿಪ್ಪಿಂಗ್ ಮತ್ತು ಪೋರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ.

ಭಾರತ ಮೂಲದ ಸೀ ಆರ್ಟ್ ಶಿಪ್ ಮ್ಯಾನೇಜ್‌ಮೆಂಟ್ (OPC) ಪ್ರೈವೇಟ್ ಲಿಮಿಟೆಡ್ ಮತ್ತು ಯುಎಇ ಮೂಲದ ಕಂಪನಿ ಟ್ರಾನ್ಸ್ ಗಲ್ಫ್ ಏಜೆನ್ಸಿ LLC ಸಹಾರಾ ಥಂಡರ್‌ಗೆ ಬೆಂಬಲವಾಗಿ ಹಡಗು ನಿರ್ವಹಣಾ ಸೇವೆಗಳನ್ನು ಒದಗಿಸಲು ಒಟ್ಟಾಗಿ ಕೆಲಸ ಮಾಡಿದೆ ಎಂದು ಅಮೆರಿಕ ಹೇಳಿದೆ.

ಭಾರತ ಮೂಲದ ಕಂಪನಿಗಳಿಗೆ ಅಮೆರಿಕ ನಿರ್ಬಂಧ
Iran attacks Israel: ಇಸ್ರೇಲ್ ರಕ್ಷಣೆಗೆ ಬದ್ಧ- ಇರಾನ್ ಗೆ ಅಮೆರಿಕ ಎಚ್ಚರಿಕೆ; G-7 ನಾಯಕರ ಸಭೆಗೆ ಆಗ್ರಹ

ಸಹಾರಾ ಥಂಡರ್ ಇರಾನ್‌ನ ವಾಣಿಜ್ಯ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವ ಪ್ರಮುಖ ಕಂಪನಿಯಾಗಿದ್ದು, ಸಹಾರಾ ಥಂಡರ್ ನೊಂದಿಗೆ ಝೆನ್ ಶಿಪ್ಪಿಂಗ್, ಪೋರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಮತ್ತು ಸೀ ಆರ್ಟ್ ಶಿಪ್ ಮ್ಯಾನೇಜ್ಮೆಂಟ್ (OPC) ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳೂ ಕೂಡ ಸಹಭಾಗಿತ್ವ ಹೊಂದಿವೆ.

ಸಹಾರಾ ಥಂಡರ್ ಇರಾನ್‌ನ ರಕ್ಷಣಾ ಸಚಿವಾಲಯ ಮತ್ತು ಸಶಸ್ತ್ರ ಪಡೆಗಳ ಲಾಜಿಸ್ಟಿಕ್ಸ್ (MODAFL) ಪರವಾಗಿ ಇರಾನಿನ ಸರಕುಗಳ ಮಾರಾಟ ಮತ್ತು ಸಾಗಣೆಯಲ್ಲಿ ತೊಡಗಿರುವ ವಿಶಾಲವಾದ ಹಡಗು ಜಾಲವನ್ನು ಅವಲಂಬಿಸಿದೆ ಎಂದು ಅಮೆರಿಕ ಆರೋಪಿಸಿದೆ.

ಅಮೆರಿಕಕ್ಕೆ ಇರಾನ್ ಆತಂಕ

ರಷ್ಯಾ-ಉಕ್ರೇನ್‌ ಯುದ್ಧದ ಸಂದರ್ಭದಲ್ಲಿ ಇರಾನ್‌, ರಷ್ಯಾಗೆ ತನ್ನ ಬೆಂಬಲ ಸೂಚಿಸಿತ್ತು. ಅಲ್ಲದೇ ಇದೀಗ ಇಸ್ರೇಲ್‌ ಮೇಲೂ ದಾಳಿ ಮಾಡುವ ಮೂಲಕ ತನ್ನ ಉದ್ದಟತನ ಮೆರೆದಿದೆ. ಡ್ರೋನ್‌, ಯುದ್ಧ ಸಾಮಾಗ್ರಿಗಳು ಉಗ್ರರ ಕೈಗೆ ಸುಲಭವಾಗಿ ಸಿಗುವಂತೆ ಮಾಡುವ ಮೂಲಕ ವಿನಾಶಕಾರಿಯಾಗಿ ಇರಾನ್‌ ಬೆಳೆಯುತ್ತಿದೆ ಎಂದು ಅಮೆರಿಕ ಆತಂಕ ವ್ಯಕ್ತಪಡಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com