ಟೆಲ್ ಅವಿವ್: ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿರುವ ಹೆಜ್ಬುಲ್ಲಾ ಉಗ್ರರರ ಹೆಡೆಮುರಿ ಕಟ್ಟಲು ಮುಂದಾಗಿರುವ ಇಸ್ರೇಲ್ ಸೇನೆ ಲೆಬೆನಾನ್ ಮೇಲೆ ರಾಕೆಟ್ ದಾಳಿ ಆರಂಭಿಸಿದೆ.
ಅಪ್ರಚೋದಿತ ದಾಳಿ ನಡೆಸಿರುವ ಹೆಜ್ಬುಲ್ಲಾ ಉಗ್ರರ ಲೆಬೆನಾನ್ ನೆಲೆಗಳ ಮೇಲೆ ದಿಢೀರ್ ದಾಳಿ ನಡೆಸಿರುವ ಇಸ್ರೇಲ್ ಸೇನೆ ತೀವ್ರ ರಾಕೆಟ್ ದಾಳಿ ನಡೆಸಿದೆ.
ಭಾನುವಾರ ಬೆಳಗ್ಗಿನ ಜಾವದಿಂದಲೇ ಲೆಬನಾನ್ ಮೇಲೆ ದಾಳಿ ಆರಂಭಿಸಿದ್ದು, ಅತ್ತ ಹೆಜ್ಬುಲ್ಲಾ ಉಗ್ರ ಸಂಘಟನೆ ಕೂಡ ಪ್ರತಿ ದಾಳಿ ನಡೆಸುತ್ತಿದೆ. ಪರಿಣಾಮ ಇಸ್ರೇಲ್ ನಲ್ಲಿ ಮುಂದಿನ 48 ಗಂಟೆಗಳ ಕಾಲ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ. ದಾಳಿಯ ಭೀಕರ ವಿಡಿಯೊಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಸ್ರೇಲ್ ವಾಯುಪಡೆಯ ಯುದ್ಥ ಹೆಲಿಕಾಪ್ಟರ್ ಗಳು ಲೆಬನಾನ್ ಮೇಲೆ ರಾಕೆಟ್ ದಾಳಿ ನಡೆಸಿವೆ. ಗಡಿ ದಾಟಿ ಬಂದ ಬಂದೂಕುಧಾರಿಗಳನ್ನು ಹತ್ಯೆ ಗೈದಿದೆ. ಜತೆಗೆ ರಾಕೆಟ್ ದಾಳಿ ಕೂಡ ನಡೆಸಿ ಹಲವು ಕಟ್ಟಡಗಳನ್ನು ನಾಶಪಡಿಸಿದೆ.
ವರದಿಗಳ ಪ್ರಕಾರ 300 ರಾಕೆಟ್ಗಳ ದಾಳಿಯನ್ನು ನಡೆಸಲು ಇಸ್ರೇಲ್ ಮಿಲಿಟರಿ ಪಡೆ ಸಿದ್ಧತೆ ನಡೆಸಿದೆ. ಸದ್ಯ ಯಾವುದೇ ಸಾವು ನೋವುಗಳಾದ ಬಗ್ಗೆ ಮಾಹಿತಿ ಬಂದಿಲ್ಲ. ಲೆಬನಾನ್ ಗಡಿ ಭಾಗದಲ್ಲಿರುವ ನಾಗರಿಕರಿಗೆ ಇಸ್ರೇಲ್ ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆಯನ್ನು ಕೂಡ ನೀಡಿದೆ.
ಹಲವು ಕಟ್ಟಡಗಳು ಈಗಾಗಲೇ ದ್ವಂಸಗೊಂಡಿದೆ. ಅತ್ತ ಹೆಜ್ಬುಲ್ಲಾ ಉಗ್ರರು ಕೂಡ ಲೆಬನಾನ್‌ನಿಂದ ಇಸ್ರೇಲಿ ಪ್ರದೇಶದ ಕಡೆಗೆ 150 ಕ್ಕೂ ಹೆಚ್ಚು ಸ್ಪೋಟಕಗಳನ್ನು ಉಡಾವಣೆ ಮಾಡಿದ್ದು,
ಹೆಜ್ಬುಲ್ಲಾ ಲೆಬನಾನ್‌ನಿಂದ ಇಸ್ರೇಲಿ ಪ್ರದೇಶದ ಕಡೆಗೆ 150 ಕ್ಕೂ ಹೆಚ್ಚು ಸ್ಪೋಟಕಗಳನ್ನು ಉಡಾವಣೆ ಮಾಡಿದ್ದು, ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ. ಮೂರು ದಿನಗಳ ಹಿಂದಷ್ಟೇ ಹೆಜ್ಬುಲ್ಲಾ ಉಗ್ರ ಸಂಘಟನೆ ಇಸ್ರೇಲ್ ತನ್ನ ವಶಕ್ಕೆ ಪಡೆದುಕೊಂಡಿರುವ ಗೋಲನ್ ಹೈಟ್ಸ್ ಮೇಲೆ 50ಕ್ಕೂ ಅಧಿಕ ರಾಕೆಟ್‌ಗಳನ್ನು ಉಡಾಯಿಸಿತ್ತು.
ಕಳೆದ ಒಂದು ವಾರದ ಹಿಂದೆ ಇಸ್ರೇಲ್, ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ (Ismail Haniyeh)ಅವರನ್ನು ಹತ್ಯೆಗೈದಿತ್ತು. ಇದರಿಂದ ಇರಾನ್, ಪ್ರತೀಕಾರ ತೀರಿಸಿಕೊಳ್ಳುವ ಮಾತನ್ನಾಡಿತ್ತು. ಇದರ ಬೆನ್ನಲ್ಲೇ ಮತ್ತೆ ಇಸ್ರೇಲ್ ನಲ್ಲಿ ದಾಳಿ ಆರಂಭವಾಗಿದೆ.
Advertisement