
ಟೆಲ್ ಅವೀವ್: ಹೆಜ್ಬುಲ್ಲಾ ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಇಸ್ರೇಲ್ ಸೇನೆ ಹೆಜ್ಬುಲ್ಲಾ ಉಗ್ರರ ಸಾವಿರಾರು ರಾಕೆಟ್ ಲಾಂಚರ್‌ಗಳ ಘಟಕಗಳನ್ನು ನಾಶಪಡಿಸಿದೆ ಎಂದು ಇಸ್ರೇಲ್ ಡಿಫೆನ್ಸ್ ಫೋರ್ಸ್ ಮಾಹಿತಿ ನೀಡಿದೆ.
ದಕ್ಷಿಣ ಲೆಬನಾನ್ ಮೇಲೆ ಹೆಜ್ಬುಲ್ಲಾ ಉಗ್ರರ ನೆಲೆಗಳನ್ನು ಗುರಿಯಾಗಿಸಿ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ನ ಮಿಲಿಟರಿ ತಿಳಿಸಿದೆ.
ದಕ್ಷಿಣ ಲೆಬನಾನ್‌ನಲ್ಲಿ ನೆಲೆಗೊಂಡಿದ್ದ ಇರಾನ್ ಬೆಂಬಲಿತ ಹಿಜ್ಬುಲ್ಲಾದ ಸಾವಿರಾರು ರಾಕೆಟ್ ಲಾಂಚರ್‌ಗಳನ್ನು ಇಸ್ರೇಲ್‌ನ ನೂರಾರು ಐಎಎಫ್ ಫೈಟರ್ ಜೆಟ್‌ಗಳು ನಾಶಗೊಳಿಸಿದೆ. ಉತ್ತರ ಹಾಗೂ ಕೇಂದ್ರ ಇಸ್ರೇಲ್ ಗುರಿಯಾಗಿಸಿಡಲಾಗಿದ್ದ ರಾಕೆಟ್ ಲಾಂಚರ್‌ಗಳನ್ನು ಧ್ವಂಸ ಮಾಡಲಾಗಿದೆ.
ಸುಮಾರು 100 ಇಸ್ರೇಲಿ ಏರ್ ಫೋರ್ಸ್ ಫೈಟರ್ ಜೆಟ್‌ಗಳು ಸಾವಿರಾರು ಹೆಜ್ಬೊಲ್ಲಾ ರಾಕೆಟ್ ಲಾಂಚರ್ ಬ್ಯಾರೆಲ್‌ಗಳನ್ನು ಹೊಡೆದು ನಾಶಪಡಿಸಿವೆ. 40 ಕ್ಕೂ ಹೆಚ್ಚು ಹೆಜ್ಬೊಲ್ಲಾ ರಾಕೆಟ್ ಲಾಂಚರ್ ವ್ಯವಸ್ಥೆಗಳನ್ನು ಹೊಡೆದುರುಳಿಸಲಾಗಿದೆ.
ಹಿಜ್ಬುಲ್ಲಾ ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿ 48 ತಾಸಿನ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.
ದೇಶದ ರಕ್ಷಣೆಗೆ ಏನು ಬೇಕಾದರೂ ಮಾಡಲು ಸಿದ್ಧ: ನೆತನ್ಯಾಹು
ಏತನ್ಮಧ್ಯೆ ಹೆಜ್ಬುಲ್ಲಾ ಉಗ್ರರ ಹಾವಳಿ ಕುರಿತು ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, "ನಮ್ಮ ನಾಗರಿಕರನ್ನು ಮತ್ತು ಇಸ್ರೇಲ್ ರಾಜ್ಯವನ್ನು ರಕ್ಷಿಸಲು ನಾವು ಏನು ಬೇಕಾದರೂ ಮಾಡುತ್ತೇವೆ" ಎಂದು ಘೋಷಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನೆತನ್ಯಾಹು, 'ದೇಶದ ಜನರ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ. ಯಾರೇ ನಮಗೆ ಹಾನಿ ಮಾಡಿದರೂ ಅವರ ವಿರುದ್ಧ ಪ್ರತಿದಾಳಿ ನಡೆಸಲಿದ್ದೇವೆ. ದೇಶ ರಕ್ಷಣೆಗಾಗಿ ಎಲ್ಲವನ್ನೂ ಮಾಡಲಿದ್ದೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ಹೇಳಿದ್ದಾರೆ.
Advertisement