

ವಾಷಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ-ಅಮೆರಿಕನ್ ಹರ್ಮೀತ್ ಕೆ ಧಿಲ್ಲೊನ್ ಅವರನ್ನು ನ್ಯಾಯಾಂಗ ಇಲಾಖೆಯ ನಾಗರಿಕ ಹಕ್ಕುಗಳ ಸಹಾಯಕ ಅಟಾರ್ನಿ ಜನರಲ್ ಆಗಿ ನೇಮಕ ಮಾಡಿದ್ದಾರೆ.
"ಹರ್ಮೀತ್ ಕೆ.ಧಿಲ್ಲೊನ್ ಅವರನ್ನು ಅಮೆರಿಕ ನ್ಯಾಯಾಂಗ ಇಲಾಖೆಯ ನಾಗರಿಕ ಹಕ್ಕುಗಳ ಸಹಾಯಕ ಅಟಾರ್ನಿ ಜನರಲ್ ಆಗಿ ನೇಮಕ ಮಾಡಲು ನನಗೆ ತುಂಬಾ ಸಂತೋಷವಾಗುತ್ತಿದೆ" ಎಂದು ಟ್ರಂಪ್ ಸೋಮವಾರ ತಮ್ಮ ಮಾಲೀಕತ್ವದ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಿಖ್ ಸಮುದಾಯಕ್ಕೆ ಸೇರಿದ ಚಂಡೀಗಢ ಮೂಲದ ಧಿಲ್ಲೊನ್ ಅವರು, ಡಾರ್ಟ್ಮೌತ್ ಕಾಲೇಜ್ ನಿಂದ ಪದವಿ ಮತ್ತು ವರ್ಜೀನಿಯಾ ಲಾ ಸ್ಕೂಲ್ ನಿಂದ ಕಾನೂನು ಪದವಿ ಪಡೆದಿದ್ದಾರೆ. ಅಮೆರಿಕದ ನಾಲ್ಕನೇ ಸರ್ಕ್ಯೂಟ್ ಕೋರ್ಟ್ ಆಫ್ ಅಪೀಲ್ಸ್ನಲ್ಲಿ ನ್ಯಾಯಿಕ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
"ತಮ್ಮ ವೃತ್ತಿಜೀವನದುದ್ದಕ್ಕೂ, ಹರ್ಮೀತ್ ಧಿಲ್ಲೊನ್ ಅವರು ನಾಗರಿಕ ಹಕ್ಕುಗಳ ರಕ್ಷಣೆ, ವಾಕ್ ಸ್ವಾತಂತ್ರ್ಯ, ಉದ್ದೋಗದ ಸ್ಥಳದಲ್ಲಿ ತಾರತಮ್ಯ ನಿವಾರಣೆಗಾಗಿ ಹೋರಾಟ ನಡೆಸಿದ್ದರು.