ಮಲೇಷ್ಯಾ ಮುಸ್ಲಿಂ ಮಹಿಳೆಯರ ಪ್ರತಿಭಟನೆ (ಸಂಗ್ರಹ ಚಿತ್ರ)
ಮಲೇಷ್ಯಾ ಮುಸ್ಲಿಂ ಮಹಿಳೆಯರ ಪ್ರತಿಭಟನೆ (ಸಂಗ್ರಹ ಚಿತ್ರ)

ಅಸಹಜ ಲೈಂಗಿಕ ಕ್ರಿಯೆ, ರಕ್ತಸಂಬಂಧಿಗಳ ನಡುವೆ ಸಂಭೋಗ ಸೇರಿ 16 ಅಪರಾಧಗಳ ಷರಿಯಾ ಕಾನೂನು ರದ್ದು: ಮಲೇಷ್ಯಾ ಸುಪ್ರೀಂ ಕೋರ್ಟ್!

ಲೈಂಗಿಕ ಕಿರುಕುಳ, ಅಸಹಜ ಲೈಂಗಿಕ ಕ್ರಿಯೆ, ರಕ್ತಸಂಬಂಧಿಗಳ ನಡುವೆ ಸಂಭೋಗ ಸೇರಿದಂತೆ ಕೆಲಾಂಟನ್ ರಾಜ್ಯದ 16 ಷರಿಯಾ ಕಾನೂನುಗಳನ್ನು ಮಲೇಷ್ಯಾ ಸುಪ್ರೀಂ ಕೋರ್ಟ್ ಶುಕ್ರವಾರ ರದ್ದು ಮಾಡಿದೆ.

ಕೌಲಾಲಂಪುರ: ಲೈಂಗಿಕ ಕಿರುಕುಳ, ಅಸಹಜ ಲೈಂಗಿಕ ಕ್ರಿಯೆ, ರಕ್ತಸಂಬಂಧಿಗಳ ನಡುವೆ ಸಂಭೋಗ ಸೇರಿದಂತೆ ಕೆಲಾಂಟನ್ ರಾಜ್ಯದ 16 ಷರಿಯಾ ಕಾನೂನುಗಳನ್ನು ಮಲೇಷ್ಯಾ ಸುಪ್ರೀಂ ಕೋರ್ಟ್ ಶುಕ್ರವಾರ ರದ್ದು ಮಾಡಿದೆ.

ಮಲೇಷ್ಯಾದ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಷರಿಯಾ-ಆಧಾರಿತ ಕ್ರಿಮಿನಲ್ ಕಾನೂನುಗಳನ್ನು ರದ್ದುಗೊಳಿಸಿದ್ದು, ಸೊಡೊಮಿ (Sodomy-sexual intercourse involving anal or oral copulation) (ಗುದ ಅಥವಾ ಮೌಖಿಕ ಸಂಯೋಗವನ್ನು ಒಳಗೊಂಡ ಲೈಂಗಿಕ ಸಂಭೋಗ), ಲೈಂಗಿಕ ಕಿರುಕುಳ (sexual harassment), ಇನ್ಸೆಸ್ಟ್ (Incest-sexual relations between people classed as being too closely related to marry each other) (ರಕ್ತಸಂಬಂಧಿಗಳ ನಡುವೆ ಸಂಭೋಗ), ಕ್ರಾಸ್-ಡ್ರೆಸ್ಸಿಂಗ್ (ಸಾಂಪ್ರದಾಯಿಕವಾಗಿ ಅಥವಾ ರೂಢಿಗತವಾಗಿ ವಿಭಿನ್ನ ಲಿಂಗದೊಂದಿಗೆ ಸಂಬಂಧಿಸಿದ ಬಟ್ಟೆಗಳನ್ನು ಧರಿಸುವುದು) ಮತ್ತು ಧಾರ್ಮಿಕ ಪೂಜಾ ಸ್ಥಳಗಳನ್ನು ನಾಶಪಡಿಸುವುದು ಅಥವಾ ಅಪವಿತ್ರಗೊಳಿಸುವ (destroying or defiling places of worship) ಅಪರಾಧಗಳ ಕುರಿತ ಶಿಕ್ಷೆಗಳ ಷರಿಯಾ ಕಾನೂನುಗಳನ್ನು ಮಲೇಷ್ಯಾ ಕೋರ್ಟ್ ಶುಕ್ರವಾರ ರದ್ದು ಮಾಡಿದೆ.

ಒಂಬತ್ತು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು 8:1ರ ಬಹುಮತದ ತೀರ್ಪು ಪ್ರಕಟಿಸಿದ್ದು, 8-1 ತೀರ್ಪಿನಲ್ಲಿ, ಒಂಬತ್ತು ಸದಸ್ಯರ ಫೆಡರಲ್ ಕೋರ್ಟ್ ಪ್ಯಾನೆಲ್ ಕೆಲಾಂಟನ್ ರಾಜ್ಯ ಸರ್ಕಾರವು ರಚಿಸಿದ 16 ಕಾನೂನುಗಳನ್ನು ಅಮಾನ್ಯಗೊಳಿಸಿತು. ಅಲ್ಲದೆ ಮಲೇಷ್ಯಾದ ಒಕ್ಕೂಟಕ್ಕೆ ಅನ್ವಯವಾಗುವ ಕಾಯ್ದೆ ಇರುವಾಗ ರಾಜ್ಯವು ಆ ವಿಷಯಗಳ ಮೇಲೆ ಇಸ್ಲಾಮಿಕ್ ಕಾನೂನುಗಳನ್ನು ರೂಪಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಕೆಲಾಂಟಾನ್ ರಾಜ್ಯದಲ್ಲಿ ವಿಪಕ್ಷ ನೇತೃತ್ವದ ಸರ್ಕಾರವು ರೂಪಿಸಿದ್ದ 16 ಕಾನೂನುಗಳನ್ನು ಈ ಪೀಠವು ಅಮಾನ್ಯಗೊಳಿಸಿದೆ. ಲೈಂಗಿಕ ಕಿರುಕುಳ, ಅಸಹಜ ಲೈಂಗಿಕ ಕ್ರಿಯೆ, ರಕ್ತಸಂಬಂಧಿಗಳ ನಡುವೆ ಸಂಭೋಗ ನಡೆಸುವವರಿಗೆ ಶಿಕ್ಷೆ ವಿಧಿಸಲು ಷರಿಯಾ ಕಾನೂನು ರೂಪಿಸಿತ್ತು.

ಏನಿದು ಪ್ರಕರಣ?
ಶೇ 97ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿರುವ ಗ್ರಾಮೀಣ ಈಶಾನ್ಯ ರಾಜ್ಯವಾದ ಕೆಲಾಂಟನ್‌ನ ಇಬ್ಬರು ಮುಸ್ಲಿಂ ಮಹಿಳೆಯರು 2020ರಲ್ಲಿ ಷರಿಯಾ ಕಾನೂನುಗಳನ್ನು ಪ್ರಶ್ನಿಸಿ ಕೋರ್ಟ್‌ ಮೊರೆ ಹೋಗಿದ್ದರು. ಸಂಪ್ರದಾಯವಾದಿ ಪ್ಯಾನ್-ಮಲೇಶಿಯನ್ ಇಸ್ಲಾಮಿಕ್ ಪಾರ್ಟಿ, ಅಥವಾ PAS, 1990 ರಿಂದ ಈ ರಾಜ್ಯವನ್ನು ಆಳುತ್ತಿದೆ.

ಮಲೇಷ್ಯಾವು ಎರಡು ರೀತಿಯ ಕಾನೂನು ವ್ಯವಸ್ಥೆಗಳನ್ನು ಹೊಂದಿದ್ದು, ಷರಿಯಾವು ನಾಗರಿಕ ಕಾನೂನುಗಳ ಜೊತೆಗೆ ಮುಸ್ಲಿಮರ ವೈಯಕ್ತಿಕ ಮತ್ತು ಕೌಟುಂಬಿಕ ವಿಷಯಗಳನ್ನು ಒಳಗೊಂಡಿದೆ. ಸರ್ಕಾರಿ ಕಾನೂನುಗಳು ಮತ್ತು ಶರಿಯಾ - ಇಸ್ಲಾಮಿಕ್ ಕಾನೂನು ಕುರಾನ್ ಮತ್ತು ಹದೀಸ್ ಎಂದು ಕರೆಯಲ್ಪಡುವ ಒಂದು ಗ್ರಂಥಗಳ ಮೇಲೆ ಆಧಾರಿತವಾಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 75ರಷ್ಟಿರುವ ಮಲೆಯಾ ಜನಾಂಗದವರಿಗೆ ಪ್ರತ್ಯೇಕ ಕಾನೂನು ಇದೆ. ಇಲ್ಲಿ ಚೀನಾ ಮತ್ತು ಭಾರತೀಯ ಮೂಲದವರು ಅಲ್ಪಸಂಖ್ಯಾತರಾಗಿದ್ದು, ಇವರಿಗೆ ಬೇರೆ ಕಾನೂನು ಇದೆ ಎಂದು ಹೇಳಲಾಗಿದೆ.

ಮೂಲಭೂತವಾದಿಗಳ ಆಕ್ರೋಶ
ಇನ್ನು ಮಲೇಷ್ಯಾ ಸುಪ್ರೀಂ ಕೋರ್ಟ್ ನಡೆಯನ್ನು ಮೂಲಭೂತವಾದಿಗಳು ವಿರೋಧಿಸಿದ್ದು, ಇದು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರದಾದ್ಯಂತ ಧಾರ್ಮಿಕ ನ್ಯಾಯಾಲಯಗಳನ್ನು ದುರ್ಬಲಗೊಳಿಸಬಹುದು ಎಂದು ಅತಂಕ ವ್ಯಕ್ತಪಡಿಸಿದ್ದಾರೆ. ನೂರಾರು ಪ್ಯಾನ್-ಮಲೇಶಿಯನ್ ಇಸ್ಲಾಮಿಕ್ ಪಕ್ಷದ ಬೆಂಬಲಿಗರು ಸರ್ವೋಚ್ಛ ನ್ಯಾಯಾಲಯದ ಹೊರಗೆ ಷರಿಯಾ ರಕ್ಷಣೆಗಾಗಿ ಕರೆ ನೀಡಿ ಪ್ರತಿಭಟನೆ ನಡೆಸಿದರು.

“ನಾವು ಕೋರ್ಟ್ ತೀರ್ಪಿನಿಂದಾಗಿ ಇಂದು ತುಂಬಾ ದುಃಖಿತರಾಗಿದ್ದೇವೆ. ಇಸ್ಲಾಮಿಕ್ ಷರಿಯಾ ಕಾನೂನುಗಳಿಗೆ ಇದು ಕರಾಳ ಶುಕ್ರವಾರವಾಗಿದೆ ಎಂದು ಪಿಎಎಸ್ ಪ್ರಧಾನ ಕಾರ್ಯದರ್ಶಿ ತಕಿಯುದ್ದೀನ್ ಹಸನ್ ಸುದ್ದಿಗಾರರಿಗೆ ತಿಳಿಸಿದರು. "ಒಂದು ಪ್ರದೇಶದಲ್ಲಿ ಷರಿಯಾ ಕಾನೂನುಗಳು ಅಮಾನ್ಯವಾದಾಗ, ಇತರ ರಾಜ್ಯಗಳಲ್ಲಿನ ಷರಿಯಾ ಕಾನೂನುಗಳು ಕೂಡ ಈಗ ಅದೇ ಅಪಾಯವನ್ನು ಎದುರಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

Related Stories

No stories found.

Advertisement

X
Kannada Prabha
www.kannadaprabha.com