ಶೀಘ್ರದಲ್ಲೇ ಗೂಗಲ್ ಪೇ ಸೇವೆ ಸ್ಥಗಿತ; ಕಾರಣ ಏನು ಗೊತ್ತಾ?

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ (Paytm Payments Bank) ಸ್ಥಗಿತದ ಕುರಿತು ಆರ್ ಬಿಐ ಹೊರಡಿಸಿರುವ ಆದೇಶದ ಸುದ್ದಿ ಹಸಿರಾಗಿರುವಂತೆಯೇ ಇದೀಗ ಅಂತಹುದೇ ಮತ್ತೊಂದು ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಶೀಘ್ರದಲ್ಲೇ ಗೂಗಲ್ ಪೇ ಸೇವೆ ಸ್ಥಗಿತ; ಕಾರಣ ಏನು ಗೊತ್ತಾ?
Updated on

ನವದೆಹಲಿ: ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ (Paytm Payments Bank) ಸ್ಥಗಿತದ ಕುರಿತು ಆರ್ ಬಿಐ ಹೊರಡಿಸಿರುವ ಆದೇಶದ ಸುದ್ದಿ ಹಸಿರಾಗಿರುವಂತೆಯೇ ಇದೀಗ ಅಂತಹುದೇ ಮತ್ತೊಂದು ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಹೌದು.. ಅಂತಾರಾಷ್ಟ್ರೀಯ ಮಟ್ಟದ ಟೆಕ್ ದೈತ್ಯ ಗೂಗಲ್ ಸಂಸ್ಥೆಯ ಗೂಗಲ್ ಪೇ ಆ್ಯಪ್ ತನ್ನ ಸೇವೆ ಸ್ಥಗಿತಗೊಳಿಸಲಿದೆ. ಹೌದು..ಅಮೆರಿಕದಲ್ಲಿ ಗೂಗಲ್ ಪೇ ಸೇವೆ ಸ್ಥಗಿತಗೊಳ್ಳುತ್ತಿದ್ದು, 2024ರ ಜೂನ್‌ 4ರಿಂದಲೇ ಅಮೆರಿಕದಲ್ಲಿ ಗೂಗಲ್‌ ಪೇ ಆ್ಯಪ್ ಕಾರ್ಯಾಚರಣೆಯು ಸ್ಥಗಿತಗೊಳ್ಳಲಿದೆ ಎಂದು ಕಂಪನಿಯೇ ಮಾಹಿತಿ ನೀಡಿದೆ.

ಶೀಘ್ರದಲ್ಲೇ ಗೂಗಲ್ ಪೇ ಸೇವೆ ಸ್ಥಗಿತ; ಕಾರಣ ಏನು ಗೊತ್ತಾ?
ವರ್ಷವಿಡೀ ಉದ್ಯೋಗ ಕಡಿತ ಮುಂದುವರೆಯುವ ಸಾಧ್ಯತೆ: ನೌಕರರಿಗೆ ಗೂಗಲ್ ಸಿಇಒ

ಭಾರತಕ್ಕಿಲ್ಲ ತೊಂದರೆ

ಅಮೆರಿಕದಲ್ಲಿ (USA) ಮಾತ್ರ ಸ್ಥಗಿತವಾಗುವ ಹಿನ್ನಲೆಯಲ್ಲಿ ಭಾರತೀಯರಿಗೆ (Indians) ಯಾವುದೇ ತೊಂದರೆ ಎಂದು ತಿಳಿದುಬಂದಿದೆ. ಭಾರತದಲ್ಲಿ ಗೂಗಲ್‌ ಪೇ ಆ್ಯಪ್ ಕಾರ್ಯಾಚರಣೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗುವುದಿಲ್ಲ ಎಂದು ಕಂಪನಿಯೇ ಸ್ಪಷ್ಟನೆ ನೀಡಿದೆ. “ಭಾರತ ಹಾಗೂ ಸಿಂಗಾಪುರದಲ್ಲಿ ಕೋಟ್ಯಂತರ ಜನ ಗೂಗಲ್‌ ಪೇ ಆ್ಯಪ್ ಬಳಸುತ್ತಿದ್ದಾರೆ. ಹಾಗಾಗಿ, ಎರಡೂ ದೇಶಗಳಲ್ಲಿ ಆ್ಯಪ್ ಕಾರ್ಯಾಚರಣೆ ಮುಂದುವರಿಯಲಿದೆ. ಜನರು ಎಂದಿನಂತೆ ಗೂಗಲ್‌ ಪೇ ಮೂಲಕ ಹಣ ಪಾವತಿ, ವರ್ಗಾವಣೆ ಮಾಡಬಹುದಾಗಿದೆ. ಈ ಸೇವೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗುವುದಿಲ್ಲ” ಎಂದು ಕಂಪನಿ ತಿಳಿಸಿದೆ.

ಗೂಗಲ್ ನಿಂದ ವ್ಯಾಲೆಟ್ ಸೇವೆ ಆರಂಭ

ಅಮೆರಿಕದಲ್ಲಿ ಗೂಗಲ್‌ ವ್ಯಾಲೆಟ್‌ ಪ್ಲಾಟ್‌ಫಾರ್ಮ್‌ ಲಭ್ಯವಾಗಲಿದ್ದು, ಜನರು ಅದರ ಮೂಲಕವೇ ವಹಿವಾಟು ನಡೆಸಬಹುದಾಗಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ. ಗೂಗಲ್‌ ವ್ಯಾಲೆಟ್‌ ಮೂಲಕವೂ ಅಮೆರಿಕದಲ್ಲಿ ಗ್ರಾಹಕರು ಹಣ ವರ್ಗಾವಣೆ, ಕ್ರೆಡಿಟ್‌ ಕಾರ್ಡ್‌ ಅಟ್ಯಾಚ್‌ ಸೇರಿ ಹಲವು ಸೌಲಭ್ಯಗಳಿವೆ.

ಶೀಘ್ರದಲ್ಲೇ ಗೂಗಲ್ ಪೇ ಸೇವೆ ಸ್ಥಗಿತ; ಕಾರಣ ಏನು ಗೊತ್ತಾ?
ವಿದೇಶಗಳಲ್ಲಿ ಯುಪಿಐ ವಿಸ್ತರಿಸಲು ಗೂಗಲ್ ಪೇ- ಎನ್ ಪಿ ಸಿಐ ಪಾಲುದಾರಿಕೆ

ಗೂಗಲ್‌ ಪೇ ಏಕೆ ಸ್ಥಗಿತ?

ಗೂಗಲ್‌ ಪೇ ಆ್ಯಪ್ ಕಾರ್ಯಾಚರಣೆಯಲ್ಲಿ ಇನ್ನಷ್ಟು ಸರಳ ಫೀಚರ್‌ಗಳನ್ನು ಅಳವಡಿಸುವ ದಿಸೆಯಲ್ಲಿ ಗೂಗಲ್‌ ಪೇ ಆ್ಯಪ್ ಸ್ಥಗಿತಗೊಳಿಸಲಾಗುತ್ತಿದೆ ಎಂದು ಕಂಪನಿ ಮಾಹಿತಿ ನೀಡಿದೆ. ಗೂಗಲ್‌ ಪೇ ಆ್ಯಪ್ ಸ್ಥಗಿತವಾದರೂ, ಈಗ ಗ್ರಾಹಕರು ಗೂಗಲ್‌ ವ್ಯಾಲೆಟ್‌ ಮೂಲಕ ವಹಿವಾಟು ನಡೆಸಬಹುದಾಗಿದೆ ಎಂದು ತಿಳಿಸಿದೆ. ಗೂಗಲ್‌ ವ್ಯಾಲೆಟ್‌ಗೆ ಗೂಗಲ್‌ ಪೇ ಫೀಚರ್‌ಗಳನ್ನು ಮೈಗ್ರೇಟ್‌ (ವರ್ಗಾವಣೆ) ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇಲ್ಲವೇ ಹೊಸ ಆ್ಯಪ್ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com