ವಿಮಾನ ದುರಂತ: ಇಬ್ಬರು ಪುತ್ರಿಯರ ಜೊತೆ ಖ್ಯಾತ ಹಾಲಿವುಡ್ ನಟ ಸಾವು!

ಜರ್ಮನ್ ಸಂಜಾತ ಹಾಲಿವುಡ್ ನಟ ಕ್ರಿಸ್ಟಿಯನ್ ಆಲಿವರ್ ಮತ್ತು ಅವರ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಪ್ರಯಾಣಿಸುತ್ತಿದ್ದ ಸಣ್ಣ ವಿಮಾನವು ಟೇಕ್ ಆಫ್ ಆದ ನಂತರ ಕೆರಿಬಿಯನ್ ಸಮುದ್ರಕ್ಕೆ ಅಪ್ಪಳಿಸಿತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಕ್ರಿಸ್ಟಿಯನ್ ಆಲಿವರ್
ಕ್ರಿಸ್ಟಿಯನ್ ಆಲಿವರ್
Updated on

ಲಾಸ್ ಎಂಜಲೀಸ್: ಖ್ಯಾತ ಹಾಲಿವುಡ್ ನಟ ಕ್ರಿಶ್ಚಿಯನ್ ಆಲಿವರ್ ಮತ್ತು ಅವರ ಇಬ್ಬರು ಪುತ್ರಿಯರು ಖಾಸಗಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಜರ್ಮನ್ ಸಂಜಾತ ಹಾಲಿವುಡ್ ನಟ ಕ್ರಿಸ್ಟಿಯನ್ ಆಲಿವರ್ ಮತ್ತು ಅವರ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಪ್ರಯಾಣಿಸುತ್ತಿದ್ದ ಸಣ್ಣ ವಿಮಾನವು ಟೇಕ್ ಆಫ್ ಆದ ನಂತರ ಕೆರಿಬಿಯನ್ ಸಮುದ್ರಕ್ಕೆ ಅಪ್ಪಳಿಸಿತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಕ್ರಿಶ್ಚಿಯ ಆಲಿವರ್ (51), ಅವರ ಪುತ್ರಿಯರಾದ ಮಡಿತಾ (10), ಅನ್ನಿಕ್ (12) ಮತ್ತು ಪೈಲಟ್ ರಾಬರ್ಟ್ ಸ್ಯಾಚ್ಸ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಗುರುವಾರ ರಾಯಲ್ ಸೇಂಟ್ ವಿನ್ಸೆಂಟ್, ಗ್ರೆನಡೈನ್ಸ್ ಪೊಲೀಸ್ ಫೋರ್ಸ್‌ನ ಖಾಸಗಿ ಒಡೆತನದ ವಿಮಾನವನ್ನು ಒಳಗೊಂಡ ಖಾಸಗಿ ವಿಮಾನ ಅಪಘಾತದಲ್ಲಿ ನಿಧನರಾದರು. ಕೆರಿಬಿಯನ್ ಸಮುದ್ರದಲ್ಲಿ ಮೀನುಗಾರರು ಮತ್ತು ಕೋಸ್ಟ್ ಗಾರ್ಡ್ ತಕ್ಷಣ ಸ್ಥಳಕ್ಕೆ ತೆರಳಿ ನಾಲ್ಕು ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಗ್ರೆನಡೈನ್ಸ್‌ನ ಸಣ್ಣ ದ್ವೀಪವಾದ ಬೆಕ್ವಿಯಾದಿಂದ ಸೇಂಟ್ ಲೂಸಿಯಾಕ್ಕೆ ತೆರಳುತ್ತಿದ್ದ ವಿಮಾನವು ಗುರುವಾರ ಮಧ್ಯಾಹ್ನದ ನಂತರ ಸಮುದ್ರಕ್ಕೆ ಪತನಗೊಂಡಿದೆ. ಆಲಿವರ್ ಅವರ ಕುಟುಂಬ ಪ್ರವಾಸಕ್ಕೆ ಹೋಗುತ್ತಿದ್ದಾಗ ವಿಮಾನ ಅಪಘಾತ ಸಂಭವಿಸಿದೆ.

ಅವರ ಫ್ಯಾಮಿಲಿ ವೆಕೇಷನ್​ನಲ್ಲಿದ್ದಂತೆ ಕಂಡುಬಂದಿದೆ. ಆಲಿವರ್ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ದಿನಗಳ ಹಿಂದೆ ಬೀಚ್‌ನ ಚಿತ್ರವನ್ನು ಪೋಸ್ಟ್ ಮಾಡಿದರು. ಸ್ವರ್ಗದಲ್ಲಿರುವ ಎಲ್ಲಿಂದಲೋ ಶುಭಾಶಯಗಳು. 2024 ಇಲ್ಲಿ ನಾವು ಬಂದಿದ್ದೇವೆ ಎಂದು ಕ್ಯಾಪ್ಶನ್ ಬರೆದಿದ್ದರು.

ಆಲಿವರ್, ಕ್ರಿಶ್ಚಿಯನ್ ಕ್ಲೆಪ್ಸರ್‌ನಲ್ಲಿ ಜನಿಸಿದರು, ಟಾಮ್ ಕ್ರೂಸ್ ಚಲನಚಿತ್ರ ವಾಲ್ಕಿರಿ ಯಲ್ಲಿನ ಒಂದು ಸಣ್ಣ ಭಾಗ ಸೇರಿದಂತೆ ಅವರ ಹೆಸರಿಗೆ 60 ಕ್ಕೂ ಹೆಚ್ಚು ಸಿನಿಮಾ ಮತ್ತು ಟಿವಿ ಸಿರೀಸ್ ಕ್ರೆಡಿಟ್‌ಗಳನ್ನು ಹೊಂದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com