ಹೌತಿ ಬಂಡುಕೋರರಿಗೆ ಇರಾನ್ ನೀಡುತ್ತಿದ್ದ ಶಸ್ತ್ರಾಸ್ತ್ರ ತಡೆಗೆ ಹೋಗಿದ್ದ ನೇವಿ ಸೀಲ್ ಯೋಧರ ನಾಪತ್ತೆ!

ಕೆಂಪುಸಮುದ್ರದಲ್ಲಿ ಅಮೆರಿಕ ನೇತೃತ್ವದ ಮಿತ್ರರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸಿರುವ ಹೌತಿ ಬಂಡುಕೋರರ ವಿರುದ್ಧ ಕಾರ್ಯಾಚರಣೆಗೆ ನಿಯೋಜನೆಯಾಗಿದ್ದ ಅಮೆರಿಕದ ಇಬ್ಬರು ನೇವಿ ಸೀಲ್ ಯೋಧರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
2 ಅಮೆರಿಕ ನೇವಿ ಸೀಲ್ ಯೋಧರ ನಾಪತ್ತೆ (ಸಂಗ್ರಹ ಚಿತ್ರ)
2 ಅಮೆರಿಕ ನೇವಿ ಸೀಲ್ ಯೋಧರ ನಾಪತ್ತೆ (ಸಂಗ್ರಹ ಚಿತ್ರ)

ಟೆಹ್ರಾನ್: ಕೆಂಪುಸಮುದ್ರದಲ್ಲಿ ಅಮೆರಿಕ ನೇತೃತ್ವದ ಮಿತ್ರರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸಿರುವ ಹೌತಿ ಬಂಡುಕೋರರ ವಿರುದ್ಧ ಕಾರ್ಯಾಚರಣೆಗೆ ನಿಯೋಜನೆಯಾಗಿದ್ದ ಅಮೆರಿಕದ ಇಬ್ಬರು ನೇವಿ ಸೀಲ್ ಯೋಧರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇರಾನ್‌ನಿಂದ ಹೌತಿ ಬಂಡುಕೋರರಿಗೆ ಮಾರಕ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ನಿಲ್ಲಿಸಲು ರಾತ್ರಿಯ ರಹಸ್ಯ ಕಾರ್ಯಾಚರಣೆಗಾಗಿ ತೆರಳಿದ್ದ ಅಮೆರಿಕದ ನೇವಿ ಸೀಲ್ (ನೌಕಪಡೆಯ ನುರಿತ ಯೋಧರು) ಕಮಾಂಡೋಗಳು ಕಾರ್ಯಾಚರಣೆ ವೇಳೆ ನಾಪತ್ತೆಯಾಗಿದ್ದಾರೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ.

ಈ ಹಿಂದೆ ಶಂಕಿತ ಹಡಗಿನ ಮೇಲೆ ಕಾರ್ಯಾಚರಣೆ ನಡೆಸಿದ್ದ ನೇವಿ ಸೀಲ್ ಯೋಧರು ಅದರ ಮೇಲೆ ದಾಳಿ ಮಾಡಿ 14 ಸಿಬ್ಬಂದಿಯನ್ನು ಸೆರೆಹಿಡಿದು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಮತ್ತು ರಕ್ಷಣಾ ಉಪಕರಣಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಇದೇ ಕಾರ್ಯಾಚರಣೆಯಲ್ಲಿ ಇರಾನ್ ನಿರ್ಮಿತ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿ ಘಟಕಗಳು, ಪ್ರೊಪಲ್ಷನ್, ಮಾರ್ಗದರ್ಶಕ ಡಿವೈಸ್ ಗಳು ಮತ್ತು ಸಿಡಿತಲೆಗಳನ್ನು ಸೇನೆ ವಶಪಡಿಸಿಕೊಂಡಿತ್ತು. 

ಅಂತೆಯೇ ಹೌತಿ ಉಗ್ರರರ ಬಳಿ ಇದ್ದ ಮಧ್ಯಮ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು (MRBMs) ಮತ್ತು ಆಂಟಿ-ಶಿಪ್ ಕ್ರೂಸ್ ಕ್ಷಿಪಣಿಗಳು (ASCMs), ಹಾಗೆಯೇ ವಾಯು ರಕ್ಷಣಾ ಸಂಬಂಧಿತ ಘಟಕಗಳನ್ನೂ ಸೀಜ್ ಮಾಡಿತ್ತು. ಈ ಕಾರ್ಯಾಚರಣೆಯಲ್ಲಿ ಸೀಜ್ ಮಾಡಲಾಗಿದ್ದ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡೇ ಉಗ್ರರು ಕೆಂಪುಸಮುದ್ರದಲ್ಲಿ ಸಾಗುವ ಹಡಗುಗಳ ಮೇಲೆ ದಾಳಿಗೆ ಸಂಚು ರೂಪಿಸಿದ್ದರು ಎಂದು ಸೇನೆ ಹೇಳಿದೆ. ಅಂತೆಯೇ ಇದೇ ರೀತಿಯ ಮತ್ತೊಂದು ಕಾರ್ಯಾಚರಣೆಯಲ್ಲಿ ಅಮೆರಿಕ ನೌಕಾಪಡೆ ಎರಡು ಶಂಕಿತ ಹೌತಿ ಉಗ್ರರ ಬೋಟ್ ಗಳ ಮೇಲೆ ದಾಳಿ ಮಾಡಿ ಅವುಗಳನ್ನು ಧ್ವಂಸ ಮಾಡಿತ್ತು. 

ಶಸ್ತ್ರಾಸ್ತ್ರ ಸೀಜ್ ಗೆ ವಿಶೇಷ ಕಾರ್ಯಾಚರಣೆ
ಹೌತಿ ಉಗ್ರರಿಗೆ ಇರಾನ್ ಸಕಲ ನೆರವು ನೀಡುತ್ತಿದ್ದು, ಇದೇ ಆರೋಪದ ಮೇರೆಗೆ ಖಚಿತ ಮಾಹಿತಿ ಮೇರೆಗೆ ಇತ್ತೀಚೆಗೆ ಯುಎಸ್ ನೇವಿ ಸೀಲ್ ಪಡೆ ಹೌತಿ ಬಂಡುಕೋರರ ವಿರುದ್ಧ ಕವರ್ಟ್ ಆಪರೇಷನ್ ಆರಂಭಿಸಿತ್ತು. ಈ ಕಾರ್ಯಾಚರಣೆಯಲ್ಲಿ ಇರಾನ್ ನಿಂದ ಹೌತಿ ಬಂಡುಕೋರರಿಗೆ ಪೂರೈಕೆಯಾಗುವ ಶಸ್ತ್ರಾಸ್ತ್ರಗಳನ್ನು ಸೀಜ್ ಮಾಡುವ ಗುರಿಯನ್ನು ನೇವಿ ಸೀಲ್ ಯೋಧರಿಗೆ ನೀಡಲಾಗಿತ್ತು. ಅದರಂತೆ ಸುಮಾರು 14 ನೇವಿ ಸೀಲ್ ಯೋಧರನ್ನು ಈ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು.

ಅಮೆರಿಕ ನೌಕಾಪಡೆಯ ನೇವಿ ಸೀಲ್‌ ಯೋಧರು ಹೆಲಿಕಾಪ್ಟರ್‌ಗಳು ಮತ್ತು ಮಾನವರಹಿತ ವೈಮಾನಿಕ ವಾಹನಗಳ (UAV) ಬೆಂಬಲದೊಂದಿಗೆ ಸೊಮಾಲಿಯಾದ ಕರಾವಳಿಯ ಬಳಿ ಅರೇಬಿಯನ್ ಸಮುದ್ರದಲ್ಲಿನ ಅಂತರರಾಷ್ಟ್ರೀಯ ನೀರಿನಲ್ಲಿ ಸಾಗುತ್ತಿದ್ದ ಹಡಗಿನ ಮೇಲೆ ಯಶಸ್ವಿಯಾಗಿ ಇಳಿದಿದ್ದರು. 

ಆದರೆ ಆ ಬಳಿಕ ಇಬ್ಬರು ನೇವಿ ಸೀಲ್ ಯೋಧರು ನಾಪತ್ತೆಯಾಗಿದ್ದಾರೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ US CENTCOM ಕಮಾಂಡ್ 'ನಾವು ಕಾಣೆಯಾದ ನಮ್ಮ ತಂಡದ ಸಹ ಯೋಧರಿಗಾಗಿ ಸಮಗ್ರ ಹುಡುಕಾಟವನ್ನು ನಡೆಸುತ್ತಿದ್ದೇವೆ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com