ಗಾಜಾದಲ್ಲಿ ಸೇನಾ ಸಂಘರ್ಷ: ಜೀವ ಹಾನಿ ತಡೆಗೆ ಕ್ರಮ ಕೈಗೊಳ್ಳಿ: ಇಸ್ರೇಲ್‌ಗೆ ವಿಶ್ವಸಂಸ್ಥೆಯ ಉನ್ನತ ಕೋರ್ಟ್‌ ಆದೇಶ

ಗಾಜಾಪಟ್ಟಿಯಲ್ಲಿ ಇಸ್ರೇಲ್ ಸೇನೆ ನಡೆಸುತ್ತಿರುವ ಸೇನಾ ದಾಳಿಯಲ್ಲಿ ಸಂಭವಿಸುತ್ತಿರುವ ಜೀವ ಹಾನಿ ತಡೆಗೆ ಕ್ರಮ ಕೈಗೊಳ್ಳಿ ಎಂದು ಇಸ್ರೇಲ್‌ಗೆ ವಿಶ್ವಸಂಸ್ಥೆಯ ಉನ್ನತ ಕೋರ್ಟ್‌ ಆದೇಶಿಸಿದೆ.
ಇಸ್ರೇಲ್, ಹಮಾಸ್ ಕದನ ವಿರಾಮ ವಿಸ್ತರಣೆ
ಇಸ್ರೇಲ್, ಹಮಾಸ್ ಕದನ ವಿರಾಮ ವಿಸ್ತರಣೆ

ಟೆಲ್ ಅವೀವ್: ಗಾಜಾಪಟ್ಟಿಯಲ್ಲಿ ಇಸ್ರೇಲ್ ಸೇನೆ ನಡೆಸುತ್ತಿರುವ ಸೇನಾ ದಾಳಿಯಲ್ಲಿ ಸಂಭವಿಸುತ್ತಿರುವ ಜೀವ ಹಾನಿ ತಡೆಗೆ ಕ್ರಮ ಕೈಗೊಳ್ಳಿ ಎಂದು ಇಸ್ರೇಲ್‌ಗೆ ವಿಶ್ವಸಂಸ್ಥೆಯ ಉನ್ನತ ಕೋರ್ಟ್‌ ಆದೇಶಿಸಿದೆ.

ಇಸ್ರೇಲ್‌ ಸೇನೆಯಿಂದ ಗಾಜಾದಲ್ಲಿ ನರಮೇಧ ನಡೆದಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದ ದಕ್ಷಿಣ ಆಫ್ರಿಕಾ, ಗಾಜಾದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಇಸ್ರೇಲ್‌ಗೆ ಆದೇಶಿಸಬೇಕು ಎಂದು ಕೋರಿತ್ತು. ಪ್ರಕರಣ ದಾಖಲಿಸಿದ್ದ ದಕ್ಷಿಣ ಆಫ್ರಿಕಾ, 'ಗಾಜಾದಲ್ಲಿ ಪ್ಯಾಲೆಸ್ಟೀನಿಯರ ರಕ್ಷಣೆಗೆ ತುರ್ತು ಕ್ರಮವಹಿಸಬೇಕು ಹಾಗೂ ಸೇನೆ ಕಾರ್ಯಾಚರಣೆ ಸ್ಥಗಿತಕ್ಕೆ ಆದೇಶಿಸಬೇಕು' ಎಂದು ಕೋರಿತ್ತು. ಆದ್ಯತೆ ಮೇರೆಗೆ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ 17 ನ್ಯಾಯಮೂರ್ತಿಗಳ ಪೀಠದ ಪ್ರಾಥಮಿಕ ನಿರ್ಧಾರವನ್ನು ಪ್ರಕಟಿಸುವ ಕಲಾಪವನ್ನು ಅಂತಾರಾಷ್ಟ್ರೀಯ ಕೋರ್ಟ್‌ನ ಅಧ್ಯಕ್ಷೆ ಜಾನ್‌ ಇ ಡೊನೊಗ್ ಆರಂಭಿಸಿದರು. ಗಾಜಾ ವಲಯದಲ್ಲಿ ಸಂಭವಿಸಿರುವ ಮನುಕುಲದ ದುರಂತ ಹಾಗೂ ಅಲ್ಲಿ ನಿರಂತರವಾಗಿ ಆಗುತ್ತಿರುವ ಜೀವಹಾನಿ ಹಾಗೂ ಆಸ್ತಿನಷ್ಟದ ಅರಿವು ಅಂತರರಾಷ್ಟ್ರೀಯ ಕೋರ್ಟ್‌ಗಿದೆ ಎಂದು ಅಧ್ಯಕ್ಷೆ ಹೇಳಿದರು.  

 ಈ ಪ್ರಕರಣದ ವಿಚಾರಣೆ ನಡೆಸಿದ ವಿಶ್ವಸಂಸ್ಥೆಯ ಉನ್ನತ ಕೋರ್ಟ್‌ ಶುಕ್ರವಾರ ಗಾಜಾ ಪಟ್ಟಿಯಲ್ಲಿ ಸೇನೆಯಿಂದ ಜೀವ ಮತ್ತು ಆಸ್ತಿ ಹಾನಿ ಆಗುವುದನ್ನು ತಡೆಯಬೇಕು ಎಂದು ಇಸ್ರೇಲ್‌ಗೆ ಒತ್ತಾಯಿಸಿದೆ. ಅಂತೆಯೇ ಗಾಜಾದಲ್ಲಿ ಕದನ ವಿರಾಮಕ್ಕೆ ಕೋರ್ಟ್‌ ಆದೇಶಿಸಬಹುದು ಎಂದು ನಿರೀಕ್ಷೆ ಹುಸಿಯಾಯಿತು. ಆದರೆ, ಗಾಜಾದಲ್ಲಿ ಅತಿಕ್ರಮಣ ನಡೆಸಿರುವ ಇಸ್ರೇಲ್‌ನ ಸೇನೆ ಅಲ್ಲಿ ನರಮೇಧದಲ್ಲಿ ತೊಡಗಿದೆ ಎಂಬ ಆರೋಪವನ್ನು ಕೈಬಿಡುವುದಿಲ್ಲ ಎಂದು ಕೋರ್ಟ್‌ ಸ್ಪಷ್ಟಪಡಿಸಿತು.

ಕೋರ್ಟ್ ಆದೇಶದ ಬೆನ್ನಲ್ಲೇ ಈ ಕುರಿತು ಸ್ಪಷ್ಟನೆ ನೀಡಿರುವ ಇಸ್ರೇಲ್, ನರಮೇಧ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ಅಲ್ಲದೆ ಈ ಆರೋಪಗಳನ್ನು ಕೈಬಿಡಬೇಕು ಎಂದೂ ಮನವಿ ಮಾಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com