ವಿವಿ ಪ್ರವೇಶ, ನೌಕರಿಯ ಆಮಿಷವೊಡ್ಡಿ ಯುಕ್ರೇನ್ ವಿರುದ್ಧದ ಯುದ್ಧರಂಗಕ್ಕೆ ಭಾರತೀಯರ ಸಾಗಣೆ: ಸಿಬಿಐ

ವಿಶ್ವವಿದ್ಯಾಲಯ ಪ್ರವೇಶ, ನೌಕರಿಯ ಆಮಿಷಗಳನ್ನೊಡ್ಡಿ ಯುಕ್ರೇನ್ ವಿರುದ್ಧದ ಯುದ್ಧರಂಗಕ್ಕೆ ಭಾರತೀಯರನ್ನು ಸಾಗಣೆ ಮಾಡಲಾಗಿದೆ ಎಂದು ಸಿಬಿಐ ಹೇಳಿದೆ.
ರಷ್ಯಾದ ಮಿಲಿಟರಿ ಸಮವಸ್ತ್ರ ಧರಿಸಿರುವ ಭಾರತೀಯ ಪ್ರಜೆ ಮೊಹಮ್ಮದ್ ಅಸ್ಫಾನ್  ಫೋಟೋ
ರಷ್ಯಾದ ಮಿಲಿಟರಿ ಸಮವಸ್ತ್ರ ಧರಿಸಿರುವ ಭಾರತೀಯ ಪ್ರಜೆ ಮೊಹಮ್ಮದ್ ಅಸ್ಫಾನ್ ಫೋಟೋTNIE

ನವದೆಹಲಿ: ವಿಶ್ವವಿದ್ಯಾಲಯ ಪ್ರವೇಶ, ನೌಕರಿಯ ಆಮಿಷಗಳನ್ನೊಡ್ಡಿ ಯುಕ್ರೇನ್ ವಿರುದ್ಧದ ಯುದ್ಧರಂಗಕ್ಕೆ ಭಾರತೀಯರನ್ನು ಸಾಗಣೆ ಮಾಡಲಾಗಿದೆ ಎಂದು ಸಿಬಿಐ ಹೇಳಿದೆ. ರಷ್ಯಾ-ಯುಕ್ರೇನ್ ಕದನರಂಗಕ್ಕೆ ಭಾರತೀಯರನ್ನು ಸಾಗಣೆ ಮಾಡಿರುವವರ ಮೇಲೆ ಕಣ್ಣಿಡಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಏಜೆಂಟರು ರಷ್ಯಾಕ್ಕೆ ಆಗಮಿಸುವ ಭಾರತೀಯರ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡರು ಮತ್ತು ಸಶಸ್ತ್ರ ಪಡೆಗಳೊಂದಿಗೆ ಹೋರಾಡುವಂತೆ ಒತ್ತಾಯಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಜಾಲವನ್ನು ಸಿಬಿಐ ಗುರುವಾರ ಭೇದಿಸಿತ್ತು. ರಾಜಸ್ಥಾನದ ನಿವಾಸಿ ಕ್ರಿಸ್ಟಿನಾ ಮತ್ತು ಮೊಯಿನುದ್ದೀನ್ ಚಿಪ್ಪಾ ಅವರು ರಷ್ಯಾದಲ್ಲಿ ನೆಲೆಸಿದ್ದಾರೆ ಮತ್ತು ಅಲ್ಲಿ ಲಾಭದಾಯಕ ಉದ್ಯೋಗಾವಕಾಶಗಳನ್ನು ನೀಡುವ ಮೂಲಕ ಭಾರತೀಯ ಯುವಕರನ್ನು ರಷ್ಯಾಕ್ಕೆ ಸಾಗಿಸಲು ಅನುಕೂಲ ಮಾಡಿಕೊಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾದ ಮಿಲಿಟರಿ ಸಮವಸ್ತ್ರ ಧರಿಸಿರುವ ಭಾರತೀಯ ಪ್ರಜೆ ಮೊಹಮ್ಮದ್ ಅಸ್ಫಾನ್  ಫೋಟೋ
ರಷ್ಯಾ-ಉಕ್ರೇನ್ ಯುದ್ಧದ ನಡುವೆಯೇ, ನ್ಯಾಟೋದ 32ನೇ ಸದಸ್ಯ ರಾಷ್ಟ್ರವಾಗಿ ಸ್ವೀಡನ್ ಸೇರ್ಪಡೆ

ಕೇಂದ್ರೀಯ ತನಿಖಾ ಸಂಸ್ಥೆಯ ಎಫ್‌ಐಆರ್‌ನಲ್ಲಿ 17 ಇತರ ವೀಸಾ ಸಲಹಾ ಕಂಪನಿಗಳು, ಅವುಗಳ ಮಾಲೀಕರು ಮತ್ತು ಭಾರತದಾದ್ಯಂತ ಹರಡಿರುವ ಏಜೆಂಟ್‌ಗಳನ್ನು ಪಟ್ಟಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಮಾನವ ಕಳ್ಳಸಾಗಣೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಸಂಸ್ಥೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿಗಳು ತಮ್ಮ ಏಜೆಂಟರ ಮೂಲಕ ರಷ್ಯಾದ ಸೇನೆಗೆ ಸಂಬಂಧಪಟ್ಟ ಉದ್ಯೋಗ, ಸೆಕ್ಯೂರಿಟಿ ಗಾರ್ಡ್, ಸಹಾಯಕರು, ಉತ್ತಮ ಜೀವನ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಉದ್ಯೋಗಗಳನ್ನು ಪಡೆಯುವ ನೆಪದಲ್ಲಿ ಭಾರತೀಯ ಪ್ರಜೆಗಳನ್ನು ರಷ್ಯಾಕ್ಕೆ ಕಳ್ಳಸಾಗಣೆ ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ರಷ್ಯಾದ ಮಿಲಿಟರಿ ಸಮವಸ್ತ್ರ ಧರಿಸಿರುವ ಭಾರತೀಯ ಪ್ರಜೆ ಮೊಹಮ್ಮದ್ ಅಸ್ಫಾನ್  ಫೋಟೋ
ನಾವು ಸಾವಿನ ದವಡೆಯಲ್ಲಿದ್ದೇವೆ: ರಷ್ಯಾ ಸೇನೆಗೆ ತಳ್ಳಲ್ಪಟ್ಟ ಭಾರತೀಯರ ಆಕ್ರಂದನ; ಕೇಂದ್ರದ ನೆರವಿಗೆ ಮನವಿ

ರಿಯಾಯತಿ ಶುಲ್ಕಗಳು ಮತ್ತು ವೀಸಾ ವಿಸ್ತರಣೆಗಳನ್ನು ನೀಡುವ ಮೂಲಕ ಸರ್ಕಾರಿ ಅಥವಾ ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಬದಲಾಗಿ ರಷ್ಯಾದಲ್ಲಿರುವ ಸಂಶಯಾಸ್ಪದ ಖಾಸಗಿ ವಿಶ್ವವಿದ್ಯಾಲಯಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ಏಜೆಂಟರು ವಿದ್ಯಾರ್ಥಿಗಳನ್ನು ವಂಚಿಸಿದರು, ಅಂತಿಮವಾಗಿ ಅವರು ಸ್ಥಳೀಯ ಏಜೆಂಟರ ಬಳಿ ಸಿಲುಕಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ.

ಈ ಆಕಾಂಕ್ಷಿಗಳು ರಷ್ಯಾವನ್ನು ತಲುಪಿದ ನಂತರ, ಅವರ ಪಾಸ್‌ಪೋರ್ಟ್‌ಗಳನ್ನು ಅಲ್ಲಿನ ಏಜೆಂಟರು ವಶಪಡಿಸಿಕೊಂಡರು ಮತ್ತು ಯುದ್ಧ ಪಾತ್ರದ ತರಬೇತಿಯ ನಂತರ ಅವರನ್ನು ಸಶಸ್ತ್ರ ಪಡೆಗಳಿಗೆ ಸೇರಲು ಒತ್ತಾಯಿಸಲಾಯಿತು.

ರಷ್ಯಾದ ಮಿಲಿಟರಿ ಸಮವಸ್ತ್ರ ಧರಿಸಿರುವ ಭಾರತೀಯ ಪ್ರಜೆ ಮೊಹಮ್ಮದ್ ಅಸ್ಫಾನ್  ಫೋಟೋ
ರಷ್ಯಾ ಕ್ಷಿಪಣಿ ದಾಳಿಯಿಂದ ಉಕ್ರೇನ್ ಅಧ್ಯಕ್ಷ, ಗ್ರೀಕ್ ಪ್ರಧಾನಿ ಕೂದಲೆಳೆ ಅಂತರದಲ್ಲಿ ಪಾರು!

"ಅವರಿಗೆ ಯುದ್ಧದ ಪಾತ್ರಗಳಲ್ಲಿ ತರಬೇತಿ ನೀಡಲಾಯಿತು ಮತ್ತು ರಷ್ಯಾದ ಸೈನ್ಯದ ಸಮವಸ್ತ್ರಗಳು ಮತ್ತು ಬ್ಯಾಚ್‌ಗಳನ್ನು ಒದಗಿಸಲಾಯಿತು. ನಂತರ, ಈ ಭಾರತೀಯ ಪ್ರಜೆಗಳನ್ನು ಅವರ ಇಚ್ಛೆಗೆ ವಿರುದ್ಧವಾಗಿ ರಷ್ಯಾ-ಉಕ್ರೇನ್ ಯುದ್ಧ ವಲಯದ ಮುಂಭಾಗದ ನೆಲೆಗಳಲ್ಲಿ ನಿಯೋಜಿಸಲಾಗುತ್ತಿದೆ ಮತ್ತು ಅವರ ಜೀವವನ್ನು ಗಂಭೀರ ಅಪಾಯಕ್ಕೆ ಸಿಲುಕಿಸಲಾಗುತ್ತಿದೆ" ಎಂದು ಸಿಬಿಐ ಎಫ್‌ಐಆರ್‌ ಹೇಳಿದೆ.

ಎಫ್‌ಐಆರ್ ದಾಖಲಿಸಿದ ನಂತರ ಸಿಬಿಐ ದೆಹಲಿ, ತಿರುವನಂತಪುರಂ, ಮುಂಬೈ, ಅಂಬಾಲಾ, ಚಂಡೀಗಢ, ಮಧುರೈ ಮತ್ತು ಚೆನ್ನೈನ 13 ಸ್ಥಳಗಳಲ್ಲಿ ದೇಶಾದ್ಯಂತ ಶೋಧ ನಡೆಸಿತು. "ಈ ಏಜೆಂಟರ ಮಾನವ ಕಳ್ಳಸಾಗಣೆ ಜಾಲವು ದೇಶಾದ್ಯಂತ ಹಲವಾರು ರಾಜ್ಯಗಳಲ್ಲಿ ಹರಡಿದೆ ಮತ್ತು ಅವರು ಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ" ಎಂದು ವಕ್ತಾರರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com