Moscow terror Attack: ತಿಂಗಳು ಮೊದಲೇ ರಷ್ಯಾಗೆ ಎಚ್ಚರಿಕೆ ನೀಡಿದ್ದ ಅಮೆರಿಕ!

60ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಮಾಸ್ಕೋ ಉಗ್ರ ದಾಳಿ ಕುರಿತು 1 ತಿಂಗಳ ಮೊದಲೇ ರಷ್ಯಾಗೆ ಎಚ್ಚರಿಕೆ ನೀಡಿದ್ದೆವು ಎಂದು ಅಮೆರಿಕ ಹೇಳಿಕೊಂಡಿದೆ.
ಮಾಸ್ಕೋದಲ್ಲಿ ಉಗ್ರ ದಾಳಿ
ಮಾಸ್ಕೋದಲ್ಲಿ ಉಗ್ರ ದಾಳಿPTI

ವಾಷಿಂಗ್ಟನ್: 60ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಮಾಸ್ಕೋ ಉಗ್ರ ದಾಳಿ ಕುರಿತು 1 ತಿಂಗಳ ಮೊದಲೇ ರಷ್ಯಾಗೆ ಎಚ್ಚರಿಕೆ ನೀಡಿದ್ದೆವು ಎಂದು ಅಮೆರಿಕ ಹೇಳಿಕೊಂಡಿದೆ.

ಹೌದು.. ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಇಲ್ಲಿನ ಹೊರವಲಯದಲ್ಲಿರುವ ಕಾನ್ಸರ್ಟ್ ಹಾಲ್‌ನಲ್ಲಿ ಶುಕ್ರವಾರ ಬಂದೂಕುಧಾರಿಗಳು ಗುಂಡು ಹಾರಿಸಿ ಸ್ಫೋಟಕಗಳನ್ನು ಸ್ಫೋಟಿಸಿದ ಕಾರಣ ಕನಿಷ್ಠ 60 ಜನರು ಸಾವನ್ನಪ್ಪಿ, 100 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಭೀಕರ ದಾಳಿ ಕುರಿತು ಅಮೆರಿಕ ಒಂದು ತಿಂಗಳ ಹಿಂದೆಯೇ ರಷ್ಯಾಗೆ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ. ಈ ಬಗ್ಗೆ ಶ್ವೇತಭವನ ಮಾಹಿತಿ ನೀಡಿದ್ದು, ಮಾಸ್ಕೋದಲ್ಲಿ ದೊಡ್ಡ ಉಗ್ರ ದಾಳಿ ನಡೆಯಬಹುದಾದ ಮುನ್ಸೂಚನೆಯನ್ನು ಅಮೆರಿಕಾ ಈ ತಿಂಗಳ ಆರಂಭದಲ್ಲಿಯೇ ರಷ್ಯಾಗೆ ನೀಡಿತ್ತು ಎಂದು ತಿಳಿಸಿದೆ.

“ಈ ತಿಂಗಳ ಆರಂಭದಲ್ಲಿ ಮಾಸ್ಕೋದಲ್ಲಿ ದೊಡ್ಡ ಉಗ್ರ ದಾಳಿ ನಡೆಯಬಹುದಾದ ಬಗ್ಗೆ ಅಮೆರಿಕಕ್ಕೆ ಮಾಹಿತಿಯಿತ್ತು. ಜನ ಸಮೂಹದ ನಡುವೆ ಅದರಲ್ಲೂ ಕಾನ್ಸರ್ಟ್ ಗಳನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಬಹುದು” ಎಂದು ಒಂದು ತಿಂಗಳ ಹಿಂದೆಯೇ ಮಾಹಿತಿ ನೀಡಲಾಗಿತ್ತು. ಎಂದು ಶ್ವೇತಭವನ ಹೇಳಿದೆ. ಈ ಮಾಹಿತಿಯನ್ನು ಮಾಸ್ಕೋಗೆ ನೀಡಲಾಗಿತ್ತು ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಅಡ್ರಿಯೆನ್ ವ್ಯಾಟ್ಸನ್ ಹೇಳಿದ್ದಾರೆ.

ಮಾಸ್ಕೋದಲ್ಲಿ ಉಗ್ರ ದಾಳಿ
ಮಾಸ್ಕೋ ಕನ್ಸರ್ಟ್ ಹಾಲ್ ದಾಳಿ: 40 ಕ್ಕೂ ಹೆಚ್ಚು ಮಂದಿ ಸಾವು, 100 ಕ್ಕೂ ಹೆಚ್ಚು ಮಂದಿಗೆ ಗಾಯ

ಅಮೆರಿಕದಿಂದ ಕರ್ತವ್ಯ ಪಾಲನೆ

ಇದೇ ವೇಳೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರ ಆಡಳಿತವು ಎಚ್ಚರಿಸುವ ಕರ್ತವ್ಯ ನೀತಿಯನ್ನು ಅನುಸರಿಸುತ್ತಿದೆ. ತನ್ನ ಕರ್ತವ್ಯವನ್ನು ಪಾಲನೆ ಮಾಡಿದೆ. ಇದರಲ್ಲಿ ಅಮೆರಿಕ ಅಪಹರಿಸುವ ಅಥವಾ ಕೊಲ್ಲುವ ನಿರ್ದಿಷ್ಟ ಬೆದರಿಕೆಗಳ ಗುಪ್ತಚರ ಮಾಹಿತಿಯನ್ನು ಪಡೆದಾಗ ರಾಷ್ಟ್ರಗಳು ಅಥವಾ ಗುಂಪುಗಳನ್ನು ಎಚ್ಚರಿಸುತ್ತದೆ ಎಂದು ವ್ಯಾಟ್ಸನ್ ಹೇಳಿದರು.

ಭೀಕರ ಉಗ್ರ ದಾಳಿ

ಮಾಸ್ಕೋದಲ್ಲಿ ಪಿಕ್ನಿಕ್ ತಂಡ ಸಂಗೀತ ಕಚೇರಿ ಆಯೋಜಿಸಿತ್ತು. ಆದರೆ ಕಾರ್ಯಕ್ರಮ ಪ್ರಾರಂಭವಾಗುವ ಮೊದಲೇ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಸದ್ದು ಮೊಳಗುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಸುಮಾರು 7 ಸಾವಿರ ಜನ ಓಡಿ ಹೋಗಲು ಯತ್ನಿಸಿದ್ದು, ಅದಕ್ಕೂ ಅವಕಾಶ ನೀಡದಂತೆ ಉಗ್ರರು ಪ್ರವೇಶದ್ವಾರವನ್ನು ಬಂದ್ ಮಾಡಿ ದಾಳಿ ನಡೆಸಿದ್ದಾರೆ. ಬುಲೆಟ್‌ಗಳಿಂದ ತಪ್ಪಿಸಿಕೊಳ್ಳಲು ಜನರು ತಾವು ಕುಳಿತಿದ್ದ ಆಸನಗಳ ಹಿಂದೆ, ನೆಲಮಾಳಿಗೆ ಅವಿತಿದ್ದರೂ ಅವರನ್ನೂ ಬಿಡಗೆ ಗುಂಡು ಹಾರಿಸಿ ಕೊಲ್ಲಲಾಗಿದೆ.

ಈ ವೇಳೆ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸುತ್ತಲೇ ಉಗ್ರರು ಕಟ್ಟಡದಲ್ಲಿ ಬಾಂಬ್ ಸ್ಫೋಟಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಇಸ್ಲಾಮಿಕ್ ಸ್ಟೇಟ್ (ಐಸಿಸ್) ಈ ಬೃಹತ್ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಟೆಲಿಗ್ರಾಮ್‌ನಲ್ಲಿ ಐಸಿಸ್-ಸಂಯೋಜಿತ ಸುದ್ದಿ ಸಂಸ್ಥೆ ಅಮಾಕ್ ನಲ್ಲಿ ಈ ಕುರಿತು ಕಿರು ಹೇಳಿಕೆ ಬಿಡುಗಡೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com