ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರ ಬಂಧನ; ತನಿಖೆ ಇಲ್ಲಿಗೆ ಮುಗಿದಿಲ್ಲ ಎಂದ ಕೆನಡಾ!

ಖಲಿಸ್ತಾನ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಭಾರತೀಯ ಪ್ರಜೆಗಳನ್ನು ಬಂಧಿಸಿರುವ ಕೆನಡಾ ಸರ್ಕಾರ, ಮತ್ತಷ್ಟು ಜನರು ಭಾಗಿಯಾಗಿದ್ದು, ತನಿಖೆ ಮುಕ್ತಾಯಗೊಂಡಿಲ್ಲ ಎಂದು ಹೇಳಿದೆ.
ಬಂಧಿತ ಭಾರತೀಯರ ಫೋಟೋ ಬಿಡುಗಡೆಗೊಳಿಸಿರುವ ಕೆನಡಾ.
ಬಂಧಿತ ಭಾರತೀಯರ ಫೋಟೋ ಬಿಡುಗಡೆಗೊಳಿಸಿರುವ ಕೆನಡಾ.

ಒಟ್ಟಾವಾ/ನ್ಯೂಯಾರ್ಕ್: ಖಲಿಸ್ತಾನ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಭಾರತೀಯ ಪ್ರಜೆಗಳನ್ನು ಬಂಧಿಸಿರುವ ಕೆನಡಾ ಸರ್ಕಾರ, ಮತ್ತಷ್ಟು ಜನರು ಭಾಗಿಯಾಗಿದ್ದು, ತನಿಖೆ ಮುಕ್ತಾಯಗೊಂಡಿಲ್ಲ ಎಂದು ಹೇಳಿದೆ.

ಬಂಧಿತ ಮೂವರು ಭಾರತೀಯರನ್ನು ಕರಣ್ ಬ್ರಾರ್ (22), ಕಮಲ್‌ಪ್ರೀತ್ ಸಿಂಗ್ (22) ಹಾಗೂ ಕರಣ್‌ಪ್ರೀತ್ ಸಿಂಗ್ (28) ಎಂದು ಹೇಳಲಾಗಿದ್ದು. ಈ ಮೂವರು ಕೆನಡಾದ ಆಲ್ಬರ್ಟಾದಲ್ಲಿ ಐದು ವರ್ಷಗಳಿಂದ ವಾಸಿಸುತ್ತಿದ್ದಾರೆ ಎಂದು ಸೂಪರಿಂಟೆಂಡೆಂಟ್ ಮಂದೀಪ್ ಮೂಕರ್ ಹೇಳಿದ್ದಾರೆ.

ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿ ಪ್ರತ್ಯೇಕ ತನಿಖೆ ನಡೆಸಿ ವಶಕ್ಕೆ ಪಡೆದಿರುವ ಮೂವರು ಸೇರಿದಂತೆ ಭಾರತದ ಪಾತ್ರವಿರುವ ಕುರುತು ಸಮಗ್ರ ತನಿಖೆ ನಡೆಸಲಾಗುವುದೆಂದು ಪೊಲೀಸ್ ಸಹಾಯಕ ಆಯುಕ್ತ ಡೇವಿಡ್ ಟೆಬೋಲ್ ತಿಳಿಸಿದ್ದಾರೆ.

ಕರಣ್‌ಪ್ರೀತ್ ಸಿಂಗ್, ಕಮಲ್‌ಪ್ರೀತ್ ಸಿಂಗ್ ಮತ್ತು ಕರಣ್ ಬ್ರಾರ್ ಅವರ ಮೇಲೆ ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪವಿದ್ದು, ಮೂವರು ಭಾರತೀಯ ಪ್ರಜೆಗಳು ಎಂದು ಗ್ಲೋಬಲ್ ನ್ಯೂಸ್ ವರದಿ ಮಾಡಿದೆ.

ನಿಜ್ಜಾರ್‌ನನ್ನು ಗುಂಡಿಕ್ಕಿ ಕೊಂದ ಸುಮಾರು ಒಂದು ವರ್ಷದ ನಂತರ ಶುಕ್ರವಾರ ಬೆಳಗ್ಗೆ ಕೆನಡಾದ ಪೊಲೀಸರು ಭಾರತೀಯ ಪ್ರಜೆಗಳನ್ನು ಬಂಧಿಸಿದ್ದಾರೆ. ಶಂಕಿತರು ವಿದ್ಯಾರ್ಥಿ ವೀಸಾದಲ್ಲಿ ಕೆನಡಾವನ್ನು ಪ್ರವೇಶಿಸಿದ್ದು, ಭಾರತೀಯ ಗುಪ್ತಚರ ಇಲಾಖೆಯ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರು. ನಿಜ್ಜರ್ ಹತ್ಯೆಯಾದ ದಿನದಂದು ಮೂವರೂ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಗುರುದ್ವಾರದ ಹೊರಗೆ ಶೂಟರ್, ಡ್ರೈವರ್ ಆಗಿ ಕಾರ್ಯನಿರ್ವಹಿಸಿದ್ದರು ಎಂದು ಆರೋಪಿಸಲಾಗಿದೆ.

ಹರ್ದೀಪ್ ಸಿಂಗ್ ನಿಜ್ಜಾರ್ ನನ್ನು 2023ರ ಜೂನ್ 18 ರಂದು ಕೆನಡಾದಲ್ಲಿ ಹತ್ಯೆ ಮಾಡಲಾಗಿತ್ತು ಅಲ್ಲದೆ ಈ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪವನ್ನು ಮಾಡಿದ್ದರು. ಇದರ ನಂತರ ಈ ವಿಚಾರ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಗದ್ದಲದ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ.

ಬಂಧಿತ ಭಾರತೀಯರ ಫೋಟೋ ಬಿಡುಗಡೆಗೊಳಿಸಿರುವ ಕೆನಡಾ.
ತಿರುಚಿದ, ನಕಲಿ ಮಾಹಿತಿ: ನಿಜ್ಜರ್ ಹೆಸರು ಉಲ್ಲೇಖಿಸಿ ರಹಸ್ಯ ಮೆಮೋ ಕುರಿತ ವರದಿ ಬಗ್ಗೆ ಭಾರತದ ಪ್ರತಿಕ್ರಿಯೆ

ಅಷ್ಟು ಮಾತ್ರವಲ್ಲದೆ ಕೆನಡಾ ಆರೋಪವನ್ನು ಭಾರತ ಅಸಂಬದ್ಧ, ಅಪ್ರಚೋದಿತ ಎಂದು ತಳ್ಳಿ ಹಾಕಿದೆ ಜೊತೆಗೆ ಭಾರತವೇ ನಿಜ್ಜರ್ ಹತ್ಯೆ ಮಾಡಿರುವುದೆಂದು ನಿಖರವಾದ ಸಾಕ್ಷಿ ನೀಡಿ ಎಂದು ಕೆನಡಾಕ್ಕೆ ಭಾರತ ಪ್ರಶ್ನೆ ಮಾಡಿದೆ.

ಈ ಹಿಂದೆ ಭಾರತ ಸರ್ಕಾರ ಬಿಡುಗಡೆ ಮಾಡಿದ 40 ಉಗ್ರರ ಪಟ್ಟಿಯಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಪ್ರಮುಖ ಉಗ್ರನಾಗಿದ್ದ. 2022 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಪಂಜಾಬ್‌ನ ಜಲಂಧರ್‌ನಲ್ಲಿ ಹಿಂದೂ ಅರ್ಚಕನನ್ನು ಕೊಲ್ಲಲು ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧಿಸಲು ಸಕಲ ಪ್ರಯತ್ನ ನಡೆದಿತ್ತು. ಆದರೆ, ಆರೋಪಿ ಎಸ್ಕೇಪ್‌ ಆಗಿದ್ದರಿಂದ ನಿಜ್ಜರ್‌ ಬಗ್ಗೆ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು. ಅಲ್ಲದೇ ಭಾರತದ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನ ಎಸಗಿದ್ದ ಪ್ರಕರಣದಲ್ಲಿ ನಿಜ್ಜರ್ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಕೂಡ ಸಲ್ಲಿಸಿತ್ತು. ಈ ವೇಳೆ ಭಾರತದಿಂದ ಪರಾರಿಯಾಗಿದ್ದ ನಿಜ್ಜರ್‌ ಕೆನಡಾದಲ್ಲಿ ನೆಲೆಸಿದ್ದ, ಖಲಿಸ್ತಾನಿ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥನೂ ಆಗಿದ್ದ ಎಂದು ಮೂಲಗಳಿಂದ ತಿಳಿದುಬಂದಿತ್ತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com