Iran Hijab Row: ನೈತಿಕ ಪೊಲೀಸರಿಗೆ ಸಡ್ಡು ಹೊಡೆದು 'ಬಟ್ಟೆ ಬಿಚ್ಚಿ' ಪ್ರತಿಭಟಿಸಿದ್ದ ಇರಾನ್ ಮಹಿಳೆ ನಿಗೂಢ ನಾಪತ್ತೆ!

ಕಳೆದ 2 ದಿನಗಳ ಹಿಂದೆ ಇರಾನ್ ರಾಜಧಾನಿ ಟೆಹ್ರಾನ್ ನ ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳು ತಲೆಗೆ ಸ್ಕಾರ್ಫ್ ಸರಿಯಾಗಿ ಧರಿಸಿಲ್ಲ ಎಂದು ಸ್ಥಳದಲ್ಲಿದ್ದ ನೈತಿಕ ಪೊಲೀಸರು ಆಕೆ ಮೇಲೆ ಹಲ್ಲೆ ಮಾಡಿದ್ದರು.
Iranian university student strips in protest
Updated on

ಟೆಹರಾನ್: ಕೂದಲು ಕಾಣುತ್ತಿದೆ ಎಂದು ಥಳಿಸಿದ್ದ ನೈತಿಕ ಪೊಲೀಸರ ವಿರುದ್ಧ ತನ್ನ ಬಟ್ಟೆ ಬಿಚ್ಚಿ ಪ್ರತಿಭಟನೆ ನಡೆಸಿ ಬಂಧನಕ್ಕೀಡಾಗಿದ್ದ ಇರಾನ್ ಮಹಿಳೆ ಇದೀಗ ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಹೌದು.. ಕಳೆದ 2 ದಿನಗಳ ಹಿಂದೆ ಇರಾನ್ ರಾಜಧಾನಿ ಟೆಹ್ರಾನ್ ನ ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳು ತಲೆಗೆ ಸ್ಕಾರ್ಫ್ ಸರಿಯಾಗಿ ಧರಿಸಿಲ್ಲ ಎಂದು ಸ್ಥಳದಲ್ಲಿದ್ದ ನೈತಿಕ ಪೊಲೀಸರು ಆಕೆ ಮೇಲೆ ಹಲ್ಲೆ ಮಾಡಿದ್ದರು.

ಈ ವೇಳೆ ಆಕೆಯ ಹಣೆಗೆ ಬಲವಾದ ಪೆಟ್ಟು ಬಿದ್ದಿದ್ದು, ಇದರಿಂದ ಆಕ್ರೋಶಗೊಂಡ ಆಕೆ ನೋಡ ನೋಡುತ್ತಲೇ ಘೋಷಣೆಗಳನ್ನು ಕೂಗುತ್ತಾ ತಾನು ಧರಿಸಿದ್ದ ಬಟ್ಟೆಗಳನ್ನು ಬಿಚ್ಚಿ ಪ್ರತಿಭಟನೆ ನಡೆಸಿದ್ದಳು. ಅಲ್ಲದೆ ಅರೆನಗ್ನಾವಸ್ಥೆಯಲ್ಲೇ ಅಲ್ಲಿ ತಿರುಗಾಡಿದ್ದಳು. ಬಳಿಕ ಆಕೆಯನ್ನು ನೈತಿಕ ಪೊಲೀಸರು ಥಳಿಸಿ ಬಂಧಿಸಿದ್ದರು. ಇದೀಗ ಈ ಮಹಿಳೆ ನಿಗೂಢ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಮಹಿಳೆ ಬಂಧನವಾದ ಬಳಿಕ ಆಕೆ ಎಲ್ಲಿದ್ದಾಳೆ ಎಂಬುದು ಪತ್ತೆಯಾಗಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಆಕೆಯನ್ನು ಬಂಧಿಸಿದ್ದ ನೈತಿಕ ಪೊಲೀಸರು ಆಕೆಯನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದು ಚಿತ್ರ ಹಿಂಸೆ ನೀಡುತ್ತಿದ್ದಾರೆ ಎಂದು ಕೆಲ ನೆಟ್ಟಿಗರು ಕಿಡಿಕಾರಿದ್ದಾರೆ.

Iranian university student strips in protest
Iran Hijab Row: 'ಕೂದಲು ಕಾಣುತ್ತಿದೆ ಮುಚ್ಚಿಕೋ' ಎಂದು ಥಳಿಸಿದ್ದಕ್ಕೆ ಬಟ್ಟೆಯನ್ನೇ ಬಿಚ್ಚಿ ನಿಂತ ವಿದ್ಯಾರ್ಥಿನಿ!, Video Viral

ಗಂಡನ ತೊರೆದಿರುವ ಇಬ್ಬರು ಮಕ್ಕಳ ಮಾನಸಿಕ ಅಸ್ವಸ್ಥ ತಾಯಿ

ಇನ್ನು ಮಹಿಳೆ ವಿಡಿಯೋ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಅತ್ತ ಆಜಾದ್ ವಿಶ್ವವಿದ್ಯಾನಿಲಯ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಂಸ್ಥೆಯ ಸಾರ್ವಜನಿಕ ಸಂಪರ್ಕ ನಿರ್ದೇಶಕ ಅಮೀರ್ ಮಹ್ಜಾಬ್ ಅವರು ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. ನಗ್ನ ಪ್ರತಿಭಟನೆ ಮಾಡಿದ ಮಹಿಳೆ ಪತಿಯಿಂದ ಬೇರ್ಪಟ್ಟ ಇಬ್ಬರು ಮಕ್ಕಳ ತಾಯಿಯಾಗಿದ್ದು, ಆಕೆ ಮಾನಸಿಕ ಅಸ್ವಸ್ಥಳಾಗಿದ್ದಳು. ಆಕೆಯನ್ನು ಮಾನಸಿಕ ಆರೋಗ್ಯ ಸೌಲಭ್ಯಕ್ಕೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ತನಿಖೆ ನಡೆಸಿ

ಇನ್ನು ಮಹಿಳೆ ನಾಪತ್ತೆ ವಿಚಾರವಾಗಿ ಮಧ್ಯಪ್ರವೇಶಿಸಿರುವ ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಇರಾನ್ ಅಧ್ಯಾಯ ಸಂಸ್ಥೆ ಆಕೆಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ. ಅಧಿಕಾರಿಗಳು ಆಕೆಗೆ ಚಿತ್ರಹಿಂಸೆ ಮತ್ತು ಇತರ ಕೆಟ್ಟ ಚಿಕಿತ್ಸೆಗಳಿಂದ ರಕ್ಷಿಸಬೇಕು ಮತ್ತು ಕುಟುಂಬ ಮತ್ತು ವಕೀಲರಿಗೆ ಪ್ರವೇಶವನ್ನು ಖಚಿತಪಡಿಸಬೇಕು. ಬಂಧನದ ಸಮಯದಲ್ಲಿ ಅವಳ ವಿರುದ್ಧದ ಹೊಡೆತಗಳು ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳ ಕುರಿತಾಗಿ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ" ಎಂದು ಸಂಸ್ಥೆ ಹೇಳಿದೆ.

2022ರಿಂದಲೂ ಪ್ರತಿಭಟನೆ

ಇನ್ನು ಇರಾನ್ ನಲ್ಲಿ ಮಹಿಳೆಯರ ವಸ್ತ್ರ ಸಂಹಿತೆ ವಿಚಾರವಾಗಿ 2022ರಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು. ಅಂದು ಇಂತಹುದೇ ವಿಚಾರವಾಗಿ ನೈತಿಕ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಮಹ್ಸಾ ಅಮಿನಿಯ ಜೈಲಿನಲ್ಲೇ ನಿಗೂಢವಾಗಿ ಸಾವನ್ನಪ್ಪಿದ್ದಳು. ಈ ಸಾವನ್ನು ವಿರೋಧಿಸಿ ಇರಾನ್ ನಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಯ ವೇಳೆ ಮಹಿಳೆಯರು ತಮ್ಮ ಹಿಜಾಬ್‌ಗಳನ್ನು ತೆಗೆದಿದ್ದಲ್ಲದೆ, ಅವುಗಳನ್ನು ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಈ ಚಳುವಳಿ ಶಾಂತವಾಯಿತು. ಈ ಚಳವಳಿಯಲ್ಲಿ 551 ಪ್ರತಿಭಟನಾಕಾರರು ಕೊಲ್ಲಲ್ಪಟ್ಟರು ಮತ್ತು ಸಾವಿರಾರು ಮಂದಿಯನ್ನು ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com