ಹಿಜ್ಬುಲ್ಲಾ ಜೊತೆ ಕದನವಿರಾಮ: ಇಸ್ರೇಲ್ ಪ್ರಧಾನಿ ನೆತನ್ಯಾಹು ಬೆಂಬಲ ಸಾಧ್ಯತೆ

ಪ್ರಧಾನಿ ನೆತನ್ಯಾಹು ಅವರು ನಿನ್ನೆ ತಮ್ಮ ಸಂಪುಟ ಸಚಿವರಿಗೆ ಕದನ ವಿರಾಮದ ಪ್ರಸ್ತಾಪವನ್ನು ಮಂಡಿಸುವುದಾಗಿ ಹೇಳಿದರು, ಅವರು ಅದರ ಮೇಲೆ ಮತ ಹಾಕುವ ನಿರೀಕ್ಷೆಯಿದೆ.
Israel PM Benzamin Netanyahu
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
Updated on

ಜೆರುಸಲೇಂ: ಲೆಬನಾನ್‌ನ ಹಿಜ್ಬುಲ್ಲಾ ಜೊತೆ ಅಮೆರಿಕಾದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಒಪ್ಪಂದವನ್ನು ಅನುಮೋದಿಸಲು ತಮ್ಮ ಸಚಿವ ಸಂಪುಟಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶಿಫಾರಸು ಮಾಡಿದ್ದಾರೆ, ಈ ಮೂಲಕ ಗಾಜಾ ಪಟ್ಟಿಯಲ್ಲಿ ಸುಮಾರು 14 ತಿಂಗಳುಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ವೇದಿಕೆ ಸಜ್ಜಾಗುತ್ತಿದೆ.

ಸ್ಥಳೀಯ ಅಧಿಕಾರಿಗಳ ಪ್ರಕಾರ, ನಿನ್ನೆ ಸಚಿವ ಸಂಪುಟ ಸಭೆಗೆ ಕೆಲವೇ ಗಂಟೆಗಳ ಮೊದಲು ಇಸ್ರೇಲ್ ಲೆಬನಾನ್ ಮೇಲೆ ತನ್ನ ಬಾಂಬ್ ದಾಳಿಯನ್ನು ಹೆಚ್ಚಿಸಿ, ಅದರಲ್ಲಿ ಕನಿಷ್ಠ 23 ಜನರು ಸಾವಿಗೀಡಾಗಿದ್ದರು. ಯಾವುದೇ ಕದನ ವಿರಾಮ ಹಿಡಿತಕ್ಕೆ ಬರುವ ಮೊದಲು ಅಂತಿಮ ಗಂಟೆಗಳಲ್ಲಿ ಹಿಜ್ಬುಲ್ಲಾವನ್ನು ಹೊಡೆಯುವ ಗುರಿಯನ್ನು ಹೊಂದಿದೆ.

Israel PM Benzamin Netanyahu
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಳ: ಇಸ್ರೇಲ್ ಮತ್ತು ಇರಾನ್ ಜೊತೆ ಭಾರತ ನಿರಂತರ ಸಂಪರ್ಕದಲ್ಲಿದೆ- ಜೈಶಂಕರ್

ಪ್ರಧಾನಿ ನೆತನ್ಯಾಹು ಅವರು ನಿನ್ನೆ ತಮ್ಮ ಸಂಪುಟ ಸಚಿವರಿಗೆ ಕದನ ವಿರಾಮದ ಪ್ರಸ್ತಾಪವನ್ನು ಮಂಡಿಸುವುದಾಗಿ ಹೇಳಿದರು, ಅವರು ಅದರ ಮೇಲೆ ಮತ ಹಾಕುವ ನಿರೀಕ್ಷೆಯಿದೆ. ಇತ್ತೀಚಿನ ತಿಂಗಳುಗಳಲ್ಲಿ ದೇಶಾದ್ಯಂತ ಇಸ್ರೇಲ್ ಶತ್ರುಗಳ ವಿರುದ್ಧ ಸಾಧನೆಗಳ ಸರಣಿಯನ್ನು ಪಟ್ಟಿ ಮಾಡಿದರು. ಹಿಜ್ಬುಲ್ಲಾದೊಂದಿಗಿನ ಕದನ ವಿರಾಮವು ಗಾಜಾದಲ್ಲಿ ಹಮಾಸ್ ನ್ನು ಮತ್ತಷ್ಟು ಪ್ರತ್ಯೇಕಿಸುತ್ತದೆ ಮತ್ತು ಇಸ್ರೇಲ್ ತನ್ನ ಗಮನವನ್ನು ಇರಾನ್‌ ಕಡೆಗೆ ತಿರುಗಲು ಅನುವು ಮಾಡಿಕೊಡುತ್ತದೆ.

ಹಿಜ್ಬುಲ್ಲಾ ಒಪ್ಪಂದವನ್ನು ಮುರಿದು ಮರುಸಜ್ಜುಗೊಳಿಸಲು ಪ್ರಯತ್ನಿಸಿದರೆ, ನಾವು ದಾಳಿ ಮಾಡುತ್ತೇವೆ ಎಂದು ನೆತನ್ಯಾಹು ಅವರು ಹೇಳಿದ್ದಾರೆ. ಕದನ ವಿರಾಮ ಯಾವಾಗ ಜಾರಿಗೆ ಬರಲಿದೆ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ ಮತ್ತು ಒಪ್ಪಂದದ ನಿಖರವಾದ ನಿಯಮಗಳನ್ನು ಬಿಡುಗಡೆ ಮಾಡಲಾಗಿಲ್ಲ. ಈ ಒಪ್ಪಂದವು ಗಾಜಾದಲ್ಲಿ ಹಮಾಸ್ ವಿರುದ್ಧ ಇಸ್ರೇಲ್‌ ಯುದ್ಧದ ಮೇಲೆ ಪರಿಣಾಮ ಬೀರುವುದಿಲ್ಲ, ಇದು ಅಂತ್ಯಗೊಳ್ಳುವ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com