ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಳ: ಇಸ್ರೇಲ್ ಮತ್ತು ಇರಾನ್ ಜೊತೆ ಭಾರತ ನಿರಂತರ ಸಂಪರ್ಕದಲ್ಲಿದೆ- ಜೈಶಂಕರ್

ಎರಡು ದೇಶಗಳ ನಡುವಿನ ಸಂಘರ್ಷವನ್ನು ಪರಿಹರಿಸುವ ಪ್ರಯತ್ನದಲ್ಲಿ ಭಾರತವು 'ಸಂಯಮ ಪ್ರದರ್ಶನ್' ಮತ್ತು 'ಶಾಂತಿ ಮಾತುಕತೆಗೆ' ಇಸ್ರೇಲ್ ಮತ್ತು ಇರಾನ್ ಅನ್ನು ನಿಯಮಿತವಾಗಿ ಸಂಪರ್ಕಿಸುತ್ತಿದೆ ಎಂದು ಹೇಳಿದರು.
S. Jaishankar
ಎಸ್ ಜೈಶಂಕರ್TNIE
Updated on

ರೋಮ್: ರಷ್ಯಾ-ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಯ ಪ್ರಯತ್ನಗಳ ನಡುವೆ ಭಾರತವು ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಇಟಲಿಯಲ್ಲಿ ರೋಮ್-ಮೆಡಿಟರೇನಿಯನ್ ಡೈಲಾಗ್ಸ್ ಸಮ್ಮೇಳನದಲ್ಲಿ ಭಾಗಿಯಾಗಿರುವ ಎಸ್ ಜೈಶಂಕರ್ ಅವರು, ಪಶ್ಚಿಮ ಏಷ್ಯಾದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಎರಡು ದೇಶಗಳ ನಡುವಿನ ಸಂಘರ್ಷವನ್ನು ಪರಿಹರಿಸುವ ಪ್ರಯತ್ನದಲ್ಲಿ ಭಾರತವು 'ಸಂಯಮ ಪ್ರದರ್ಶನ್' ಮತ್ತು 'ಶಾಂತಿ ಮಾತುಕತೆಗೆ' ಇಸ್ರೇಲ್ ಮತ್ತು ಇರಾನ್ ಅನ್ನು ನಿಯಮಿತವಾಗಿ ಸಂಪರ್ಕಿಸುತ್ತಿದೆ ಎಂದು ಹೇಳಿದರು.

ತಮ್ಮ ಭಾಷಣದಲ್ಲಿ ವಿದೇಶಾಂಗ ಸಚಿವರು ಮತ್ತೊಮ್ಮೆ ಹಮಾಸ್ ಅಪಹರಣವನ್ನು ಖಂಡಿಸಿದರು. ಕದನ ವಿರಾಮವನ್ನು ತಲುಪಲು ಭಾರತದ ಬೆಂಬಲವನ್ನು ಅವರು ಪುನರುಚ್ಚರಿಸಿದರು. ಆದಾಗ್ಯೂ, ಜೈಶಂಕರ್ ಅವರು ಅಂತರರಾಷ್ಟ್ರೀಯ ಮಾನವೀಯ ಕಾನೂನಿಗೆ ಬದ್ಧರಾಗುವ ಅಗತ್ಯವನ್ನು ಒತ್ತಿ ಹೇಳಿದರು. ದೊಡ್ಡ ಪ್ರಮಾಣದ ನಾಗರಿಕ ಸಾವುನೋವುಗಳು 'ಸ್ವೀಕಾರಾರ್ಹವಲ್ಲ' ಎಂದು ವಿವರಿಸಿದರು.

ಇಂದು ನಾನು ನನ್ನ ಮಾತುಗಳನ್ನು ಸಂಘರ್ಷಗಳ ಮೇಲೆ ಕೇಂದ್ರೀಕರಿಸುತ್ತೇನೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿಯು ಸ್ಪಷ್ಟವಾಗಿ ಚಿಂತಾಜನಕವಾಗಿದೆ. ಏನಾಯಿತು ಮತ್ತು ಇನ್ನೂ ಏನಾಗಬಹುದು. ಭಾರತವು ಭಯೋತ್ಪಾದನೆ ಮತ್ತು ಅಪಹರಣವನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತದೆ. ಮಿಲಿಟರಿ ಕಾರ್ಯಾಚರಣೆಗಳಲ್ಲಿ ದೊಡ್ಡ ಪ್ರಮಾಣದ ನಾಗರಿಕ ಸಾವುಗಳು ಸ್ವೀಕಾರಾರ್ಹವಲ್ಲ ಎಂದು ಪರಿಗಣಿಸುತ್ತದೆ. ಅಂತರಾಷ್ಟ್ರೀಯ ಮಾನವೀಯ ಕಾನೂನನ್ನು ತಕ್ಷಣವೇ ಕಡೆಗಣಿಸಲಾಗುವುದಿಲ್ಲ. ನಾವೆಲ್ಲರೂ ಕದನ ವಿರಾಮವನ್ನು ಬೆಂಬಲಿಸಬೇಕು ಎಂದರು.

S. Jaishankar
ಉಕ್ರೇನ್ ಮೇಲೆ ಹೈಪರ್‌ಸಾನಿಕ್ ಕ್ಷಿಪಣಿ ದಾಳಿ: ಅಮೆರಿಕ, ಬ್ರಿಟನ್‌ಗೆ ರಷ್ಯಾ ನೇರ ಎಚ್ಚರಿಕೆ!

ಭಾರತವು ಎರಡು ದೇಶಗಳ ನಡುವಿನ ಸಂಘರ್ಷವನ್ನು ಪರಿಹಾರಿಸಲು ಬೆಂಬಲಿಸುತ್ತದೆ. ಸಂಘರ್ಷದ ವಿಸ್ತರಣೆಯ ಬಗ್ಗೆ ನಮ್ಮ ಕಾಳಜಿಯೂ ಹೆಚ್ಚುತ್ತಿದೆ. ಸಂಯಮ ಮತ್ತು ಹೆಚ್ಚಿದ ಮಾತುಕತೆಯನ್ನು ಪ್ರತಿಪಾದಿಸಲು ನಾವು ಉನ್ನತ ಮಟ್ಟದಲ್ಲಿ ಇಸ್ರೇಲ್ ಮತ್ತು ಇರಾನ್ ಎರಡರೊಂದಿಗೂ ನಿಯಮಿತ ಸಂಪರ್ಕದಲ್ಲಿದ್ದೇವೆ ಎಂದರು. ಜೈಶಂಕರ್ ಅವರು ಅರ್ಥಪೂರ್ಣ ಅಂತಾರಾಷ್ಟ್ರೀಯ ರಾಜತಾಂತ್ರಿಕ ಪ್ರಯತ್ನಗಳಿಗೆ ಕೊಡುಗೆ ನೀಡಲು ಭಾರತದ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com