ಕಠ್ಮಂಡು: ನೇಪಾಳ ಕೇಂದ್ರೀಯ ಬ್ಯಾಂಕ್ ಹೊರ ತರಲು ನಿರ್ಧರಿಸಿರುವ ಹೊಸ ಕರೆನ್ಸಿ ಇದೀಗ ಭಾರತದ ತಲೆನೋವಿಗೆ ಕಾರಣವಾಗಿದೆ.
ಹೌದು.. ನೇಪಾಳದ ಸೆಂಟ್ರಲ್ ಬ್ಯಾಂಕ್ ಒಂದು ವರ್ಷದೊಳಗೆ ಹೊಸ ಕರೆನ್ಸಿ ನೋಟುಗಳನ್ನು ಮುದ್ರಿಸಲು ಸಿದ್ಧತೆ ನಡೆಸುತ್ತಿದ್ದು, ಇದು ಭಾರತದ ಕೆಂಗಣ್ಣಿಗೆ ಗುರಿಯಾಗಿದೆ.
ನೇಪಾಳ ಮತ್ತು ಭಾರತದ ವಿವಾದಿತ ಪ್ರದೇಶಗಳನ್ನು ಒಳಗೊಂಡಿರುವ ಪರಿಷ್ಕೃತ ನಕ್ಷೆಯನ್ನು ಒಳಗೊಂಡಿರುವ ಚಿತ್ರದ ಹೊಸ ನೋಟನ್ನು ಮುದ್ರಿಸಲು ಮುಂದಾಗಿದೆ.
ನೇಪಾಳ ರಾಷ್ಟ್ರ ಬ್ಯಾಂಕ್ ಈಗಾಗಲೇ ಹೊಸ ನಕ್ಷೆಯೊಂದಿಗೆ ನೋಟುಗಳನ್ನು ಮುದ್ರಿಸುವ ಪ್ರಕ್ರಿಯೆಯನ್ನು ರವಾನಿಸಿದ್ದು, ಇದರಲ್ಲಿ ಕಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾ ಸೇರಿವೆ ಎಂದು ಬ್ಯಾಂಕ್‌ನ ಜಂಟಿ ವಕ್ತಾರ ದಿಲ್ಲಿರಾಮ್ ಪೊಖರೆಲ್ ಅವರು ಆನ್‌ಲೈನ್ ನ್ಯೂಸ್ ಪೋರ್ಟಲ್ ಗೆ ತಿಳಿಸಿದ್ದಾರೆ.
ಹೊಸ ನೋಟುಗಳನ್ನು ಮುದ್ರಿಸುವ ಪ್ರಕ್ರಿಯೆಯನ್ನು ಬ್ಯಾಂಕ್ ಈಗಾಗಲೇ ರವಾನಿಸಿದ್ದು, ಆರು ತಿಂಗಳಿಂದ ಒಂದು ವರ್ಷದಲ್ಲಿ ಅದು ಪೂರ್ಣಗೊಳ್ಳಲಿದೆ ಎಂದು ಪೋಖರೆಲ್ ಹೇಳಿದ್ದಾರೆ.
ನೇಪಾಳದ ಅಂದಿನ ಪ್ರಧಾನಿ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ನೇತೃತ್ವದ ನೇಪಾಳದ ಕ್ಯಾಬಿನೆಟ್ ಮೇ 3 ರಂದು ನೇಪಾಳದ ಭಾಗವಾಗಿ ಈ ಪ್ರದೇಶಗಳನ್ನು ತೋರಿಸುವ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿತ್ತು. ಅಲ್ಲದೆ ಇದೇ ನಕ್ಷೆಯನ್ನು ಹೊಸ ನೋಟುಗಳಲ್ಲಿ ಮುದ್ರಿಸಲು ನಿರ್ಧರಿಸಿತ್ತು.
Advertisement