Hezbollah Pager Blasts: ತೈವಾನ್ ನಿಂದ ಪೇಜರ್ ರವಾನೆ; 'ತನ್ನದಲ್ಲ' ಎಂದ Gold Apollo ಸಂಸ್ಥೆ!; ಸಾವಿನ ಸಂಖ್ಯೆ 11ಕ್ಕೆ ಏರಿಕೆ

ಹೆಜ್ಬುಲ್ಲಾ ಸಂಘಟನೆಯ ಸದಸ್ಯರ ಸಾವಿಗೆ ಕಾರಣವಾದ ಪೇಜರ್ ಸ್ಫೋಟ ಪ್ರಕರಣದಲ್ಲಿ ಬಳಸಲಾದ ಪೇಜರ್ ಗಳನ್ನು ತೈವಾನ್ ನಿಂದ ತರಲಾಗಿತ್ತು. ಮತ್ತು ಹೀಗೆ ಪೇಜರ್ ಗಳು ಲೆಬೆನಾನ್ ಸೇರುವ ಮುನ್ನವೇ ಅದಕ್ಕೆ ಸ್ಫೋಟಕಗಳನ್ನು ಅಳವಡಿಸಲಾಗಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
Pager Attacks
ಪೇಜರ್ ಸ್ಫೋಟ
Updated on

ನವದೆಹಲಿ: ಹೆಜ್ಬುಲ್ಲಾ ಸಂಘಟನೆಯ ಸದಸ್ಯರ ಸಾವಿಗೆ ಕಾರಣವಾದ ಪೇಜರ್ ಸ್ಫೋಟ ಪ್ರಕರಣದಲ್ಲಿ ಸ್ಫೋಟಕ್ಕೀಡಾದ ಪೇಜರ್ ಗಳು ತೈವಾನ್ ನಿಂದ ಬಂದಿದ್ದು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಲೆಬನಾನ್ ನಲ್ಲಿ ಹೆಜ್ಬುಲ್ಲಾ ಉಗ್ರರು ಬಳಸುತ್ತಿದ್ದ ಪೇಜರ್ ಗಳು ಏಕಾಏಕಿ ಬ್ಲಾಸ್ಟ್ ಆಗಿ ಕನಿಷ್ಠ 9 ಮಂದಿ ಸಾವಿಗೀಡಾಗಿ 2,800ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಸುಮಾರು 200 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ.

ಗಾಯಾಳುಗಳಿಗೆ ಹೆಚ್ಚಾಗಿ ಮುಖ, ಕೈಗಳು ಮತ್ತು ಹೊಟ್ಟೆಗೆ ಗಾಯಗಳಾಗಿವೆ ಎಂದು ಲೆಬನಾನಿನ ಆರೋಗ್ಯ ಸಚಿವ ಫಿರಾಸ್ ಅಬಿಯಾಡ್ ಹೇಳಿದ್ದಾರೆ.

ಏತನ್ಮಧ್ಯೆ ಹೆಜ್ಬುಲ್ಲಾ ಸಂಘಟನೆಯ ಸದಸ್ಯರ ಸಾವಿಗೆ ಕಾರಣವಾದ ಪೇಜರ್ ಸ್ಫೋಟ ಪ್ರಕರಣದಲ್ಲಿ ಬಳಸಲಾದ ಪೇಜರ್ ಗಳನ್ನು ತೈವಾನ್ ನಿಂದ ತರಲಾಗಿತ್ತು. ಮತ್ತು ಹೀಗೆ ಪೇಜರ್ ಗಳು ಲೆಬೆನಾನ್ ಸೇರುವ ಮುನ್ನವೇ ಅದಕ್ಕೆ ಸ್ಫೋಟಕಗಳನ್ನು ಅಳವಡಿಸಲಾಗಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ವರದಿಯಲ್ಲಿರುವಂತೆ ಈ ಎಲ್ಲ ಪೇಜರ್ ಗಳನ್ನು ತೈವಾನ್ ಮೂಲದ ಗೋಲ್ಡ್ ಅಪೋಲೋ (Gold Apollo) ಸಂಸ್ಥೆಯಿಂದ ತರಿಸಿಕೊಳ್ಳಲಾಗಿತ್ತು.

ಈ ಹೀಗೆ ರವಾನೆ ಮಾಡಿದ ಪೇಜರ್ ಗಳನ್ನು ರಫ್ತಿಗೂ ಮೊದಲೇ ಇಸ್ರೇಲಿ ಹ್ಯಾಕರ್ ಗಳು ಹ್ಯಾಕ್ ಮಾಡಿದ್ದರು. ಹೆಸರು ಹೇಳಲಿಚ್ಚಿಸದ ಹೆಜ್ಬುಲ್ಲಾ ಸದಸ್ಯರೊಬ್ಬರು ಹೇಳಿರುವಂತೆ ಇತ್ತೀಚೆಗೆ ಸುಮಾರು 1 ಸಾವಿರಕ್ಕೂ ಅಧಿಕ ಪೇಜರ್ ಗಳನ್ನು ಆರ್ಡರ್ ಮಾಡಿ ಆಮದು ಮಾಡಿಕೊಳ್ಳಲಾಗಿತ್ತು. ಇದಲ್ಲದೆ ಇನ್ನೂ ಮೂರು ಸಾವಿರ AR924 model ಪೇಜರ್ ಗಳ ಖರೀದಿಗೆ ಆರ್ಡರ್ ಮಾಡಲಾಗಿದೆ. ಪ್ರಸ್ತುತ ಸ್ಫೋಟಗೊಂಡಿರುವ ಪೇಜರ್ ಗಳೂ ಇವೇ ಆಗಿವೆ ಎಂದು ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಯುವತಿ ಸೇರಿ 11 ಮಂದಿ ಸಾವು

ಇನ್ನು ಈ ಪೇಜರ್ ಸ್ಫೋಟದಲ್ಲಿ ಓರ್ವ 10 ವರ್ಷದ ಬಾಲಕಿ ಸೇರಿದಂತೆ ಒಟ್ಟು 11 ಮಂದಿ ಸಾವಿಗೀಡಾಗಿದ್ದು, ಸುಮಾರು 2800 ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 200 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಹೊಸ ಬ್ಯಾಚ್ ಪೇಜರ್‌ಗಳಲ್ಲಿ ಇಸ್ರೇಲ್ ಸ್ಫೋಟಕ ಪ್ರಚೋದಕವನ್ನು ಎಂಬೆಡ್ ಮಾಡಲು, ಅವರಿಗೆ ಈ ಸಾಧನಗಳ ಪೂರೈಕೆ ಸರಪಳಿಗೆ ಪ್ರವೇಶ ನೀಡಿರಬಹುದು ಎಂದು ಬ್ರಸೆಲ್ಸ್ ಮೂಲದ ಮಿಲಿಟರಿ ಮತ್ತು ಭದ್ರತಾ ವಿಶ್ಲೇಷಕ ಎಲಿಜಾ ಮ್ಯಾಗ್ನಿಯರ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

"ಇಸ್ರೇಲಿ ಗುಪ್ತಚರವು ಪೇಜರ್ ಉತ್ಪಾದನಾ ಪ್ರಕ್ರಿಯೆಯಲ್ಲಿ ನುಸುಳಿದೆ. ಸ್ಫೋಟಕ ಘಟಕ ಮತ್ತು ರಿಮೋಟ್ ಟ್ರಿಗ್ಗರಿಂಗ್ ಯಾಂತ್ರಿಕತೆಯನ್ನು ಪೇಜರ್‌ಗಳಿಗೆ ಸೇರಿಸಿದೆ. ಸಾಧನಗಳನ್ನು ಮಾರಾಟ ಮಾಡಿದ ಮೂರನೇ ವ್ಯಕ್ತಿ ಇಸ್ರೇಲ್ ಸ್ಥಾಪಿಸಿದ "ಗುಪ್ತಚರ ಗೂಢಾಚಾರಿ" ಆಗಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

Pager Attacks
Pager Attacks: ''ಇಸ್ರೇಲ್ ಗೆ ತಕ್ಕಪಾಠ ಕಲಿಸುತ್ತೇವೆ''; Hezbollah ಉಗ್ರ ಎಚ್ಚರಿಕೆ

'ತನ್ನದಲ್ಲ' ಎಂದ Gold Apollo ಸಂಸ್ಥೆ!

ಇನ್ನು ಹಾಲಿ ಸ್ಫೋಟಗೊಂಡಿರುವ ಪೇಜರ್ ಗಳು ತನ್ನ ಸಂಸ್ಥೆಯದ್ದಲ್ಲ ಎಂದು ಗೋಲ್ಡ್ ಅಪೊಲೊ ಸಂಸ್ಥೆ ಹೇಳಿಕೊಂಡಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಂಸ್ಥೆ ಸ್ಫೋಟದಲ್ಲಿ ಬಳಸಿದ ಪೇಜರ್‌ಗಳನ್ನು ಗೋಲ್ಡ್ ಅಪೊಲೊ ಸಂಸ್ಥೆ ತಯಾರಿಸಿಲ್ಲ. ತೈವಾನ್ ಸಂಸ್ಥೆಯ ಬ್ರ್ಯಾಂಡ್ ಅನ್ನು ಬಳಸುವ ಹಕ್ಕನ್ನು ಹೊಂದಿರುವ ಯುರೋಪಿನ ಕಂಪನಿಯಿಂದ ಅವುಗಳನ್ನು ತಯಾರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಇಸ್ರೇಲ್‌ನ ಉನ್ನತ ಶಸ್ತ್ರಾಸ್ತ್ರ ಪೂರೈಕೆದಾರ ಮತ್ತು ನಿಕಟ ಮಿತ್ರನಾಗಿರುವ ಅಮೆರಿಕ ಕೂಡ ತನ್ನ ಪಾತ್ರವನ್ನು ತಳ್ಳಿ ಹಾಕಿದ್ದು, ಈ ಘಟನೆ ತನಗೆ "ಸಂಬಂಧಿಸಿಲ್ಲ" ಮತ್ತು "ಈ ಘಟನೆಯ ಬಗ್ಗೆ ಮುಂಚಿತವಾಗಿ ತನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿದೆ.

ಲೆಬನಾನ್‌ನೊಂದಿಗಿನ ತನ್ನ ಗಡಿಯಲ್ಲಿ ಹೆಜ್ಬೊಲ್ಲಾ ವಿರುದ್ಧದ ಹೋರಾಟವನ್ನು ಸೇರಿಸಲು ಗಾಜಾ ಯುದ್ಧದ ಗುರಿಗಳನ್ನು ವಿಸ್ತರಿಸುವುದಾಗಿ ಇಸ್ರೇಲ್ ಘೋಷಿಸಿದ ಕೆಲವೇ ಗಂಟೆಗಳ ನಂತರ ಈ ಪೇಜರ್ ಸ್ಫೋಟ ನಡೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com