ಪಂಜಾಬ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಾಲ್ವರು ISIS ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇಲೆ ಪಂಜಾಬ್, ಲಾಹೋರ್, ಟೋಬಾ ಟೇಕ್ ಸಿಂಗ್, ಬಹಾವಲ್ ಪುರ ಮತ್ತು ಮಿಯಾಂವಾಲಿಯಲ್ಲಿನ ಅಡಗುತಾಣಗಳ ಮೇಲೆ ಪಂಜಾಬ್ ಪೊಲೀಸರ ಭಯೋತ್ಪಾದನೆ ನಿಗ್ರಹ ಇಲಾಖೆ (ಸಿಟಿಡಿ) ದಾಳಿ ನಡೆಸಿತ್ತು ಎಂದು ವಕ್ತಾರರೊಬ್ಬರು ತಿಳಿಸಿದ್ದಾರೆ.
ಬಂಧಿತ ಉಗ್ರರಿಂದ 2,570 ಗ್ರಾಂ ಸ್ಫೋಟಕ, ಮೂರು ಡೆಟೋನೇಟರ್, ರೈಫಲ್, ಪಿಸ್ತೂಲ್, 20 ಬುಲೆಟ್, ನಾಲ್ಕು ಕೈ ಗ್ರನೇಡ್ ಮತ್ತಿತರ ನಿಷೇಧಿತ ಐಎಸ್ ಐಎಸ್ ನ ಬರಹಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಉಗ್ರರು ಪ್ರಮುಖ ಕಟ್ಟಡಗಳು ಮತ್ತು ವ್ಯಕ್ತಿಗಳ ಮೇಲೆ ದಾಳಿ ಮಾಡಲು ಯೋಜಿಸಿದ್ದರು.
ಈ ಮಧ್ಯೆ CTD ಪಂಜಾಬ್ ಈ ವಾರ 980 ಕೂಂಬಿಂಗ್ ಕಾರ್ಯಾಚರಣೆಗ ನಡೆಸಿದ್ದು, ಸ್ಥಳೀಯ ಕಾನೂನು ಜಾರಿ ಏಜೆನ್ಸಿಗಳ ಸಹಯೋಗದೊಂದಿಗೆ 32,662 ವ್ಯಕ್ತಿಗಳನ್ನು ತಪಾಸಣೆ ನಡೆಸಿದೆ.
ಈ ಕಾರ್ಯಾಚರಣೆಯೊಂದಿಗೆ ಒಟ್ಟಾರೇ,109 ಶಂಕಿತ ಉಗ್ರರನ್ನು ಬಂಧಿಸಿ, 102 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಸಿಟಿಡಿ ಪಂಜಾಬ್ ವಕ್ತಾರರು ತಿಳಿಸಿದ್ದಾರೆ.
Advertisement