US tariff war: China ಬೆನ್ನಲ್ಲೇ Donald Trump ಗೆ ಯೂರೋಪಿಯನ್ ಒಕ್ಕೂಟ ಬಿಗ್ ಶಾಕ್; ದುಬಾರಿ ಸುಂಕ ಹೇರಿಕೆ!

ಅಮೆರಿಕ ಮೇಲೆ ಚೀನಾ ಶೇ.84ರಷ್ಟು ಸುಂಕ ಹೇರಿಕೆ ಬೆನ್ನಲ್ಲೇ ಇದೀಗ ಯೂರೋಪಿಯನ್ ಒಕ್ಕೂಟ ಕೂಡ ಅಮೆರಿಕದ ವಸ್ತುಗಳ ಮೇಲೆ ಹೆಚ್ಚುವರಿ ಸುಂಕ ಹೇರಿದೆ.
EU hits back at US tariffs with new duties on 20 billion Euro worth of goods
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Updated on

ನವದೆಹಲಿ: ಚೀನಾದ ಸುಂಕ ಯುದ್ಧದ ಬೆನ್ನಲ್ಲೇ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಯೂರೋಪಿಯನ್ ಒಕ್ಕೂಟ ಕೂಡ ಶಾಕ್ ನೀಡಿದ್ದು, ಅಮೆರಿಕದ ಸುಮಾರು 20 ಬಿಲಿಯನ್ ಯೂರೋ ಮೊತ್ತದ ವಸ್ತುಗಳಿಗೆ ಹೆಚ್ಚುವರಿ ಸುಂಕ ಹೇರಿದೆ.

ಹೌದು... ಜಗತ್ತಿನ ವಿವಿಧ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿರುವ ದುಬಾರಿ ಸುಂಕ ಇದೀಗ 'ಸುಂಕ ಯುದ್ಧ'ವನ್ನೇ ಆರಂಭಿಸಿದ್ದು, ಅಮೆರಿಕ ಮೇಲೆ ಚೀನಾ ಶೇ.84ರಷ್ಟು ಸುಂಕ ಹೇರಿಕೆ ಬೆನ್ನಲ್ಲೇ ಇದೀಗ ಯೂರೋಪಿಯನ್ ಒಕ್ಕೂಟ ಕೂಡ ಅಮೆರಿಕದ ವಸ್ತುಗಳ ಮೇಲೆ ಹೆಚ್ಚುವರಿ ಸುಂಕ ಹೇರಿದೆ.

ಅಮೆರಿಕದ ದುಬಾರಿ ಸುಂಕದ ವಿರುದ್ಧ ಯೂರೋಪಿಯನ್ ಒಕ್ಕೂಟ ತನ್ನ ಮೊದಲ ಕ್ರಮ ಜರುಗಿಸಿದ್ದು, ಪರಿಣಾಮ ಅಮೆರಿಕದ ಸುಮಾರು 20 ಬಿಲಿಯನ್ ಯೂರೋ ಮೊತ್ತದ ವಸ್ತುಗಳ ಮೇಲೆ ಯೂರೋಪಿಯನ್ ಒಕ್ಕೂಟ ಹೆಚ್ಚುವರಿ ಸುಂಕ ಹೇರಿದೆ.

ಸೋಯಾಬೀನ್, ಮೋಟಾರ್ ಸೈಕಲ್ ಮತ್ತು ಸೌಂದರ್ಯ ಉತ್ಪನ್ನಗಳು, ಕೋಳಿ, ಅಕ್ಕಿ, ಜೋಳ, ಹಣ್ಣು ಮತ್ತು ಬೀಜಗಳು, ಮರ, ಮೋಟಾರ್‌ಸೈಕಲ್‌ಗಳು, ಪ್ಲಾಸ್ಟಿಕ್‌ಗಳು, ಜವಳಿ, ವರ್ಣಚಿತ್ರಗಳು ಮತ್ತು ವಿದ್ಯುತ್ ಉಪಕರಣಗಳು ಸೇರಿದಂತೆ 20 ಬಿಲಿಯನ್ ಯುರೋಗಳಿಗಿಂತ ಹೆಚ್ಚಿನ ಮೌಲ್ಯದ ಯುಎಸ್ ಉತ್ಪನ್ನಗಳನ್ನು ಗುರಿಯಾಗಿಸಿಕೊಂಡು EU ಬುಧವಾರ ತನ್ನ ಹೆಚ್ಚುವರಿ ಸುಂಕ ಹೇರಿದೆ.

EU hits back at US tariffs with new duties on 20 billion Euro worth of goods
ಪ್ರತೀಕಾರದ ಸುಂಕ ಶೇ. 84ಕ್ಕೆ ಹೆಚ್ಚಿಸಿದ ಚೀನಾ; ಅಮೆರಿಕಕ್ಕೆ ಸ್ಥಳಾಂತರಗೊಳ್ಳುವಂತೆ ಕಂಪನಿಗಳಿಗೆ ಟ್ರಂಪ್ ಕರೆ

"ನ್ಯಾಯಯುತ ಮತ್ತು ಸಮತೋಲಿತ ಮಾತುಕತೆಯ ಫಲಿತಾಂಶಕ್ಕೆ US ಒಪ್ಪಿಕೊಂಡರೆ, ಈ ಪ್ರತಿಕ್ರಮಗಳನ್ನು ಯಾವುದೇ ಸಮಯದಲ್ಲಿ ಸ್ಥಗಿತಗೊಳಿಸಬಹುದು" ಎಂದು EU ಸದಸ್ಯ ರಾಷ್ಟ್ರಗಳು ಕ್ರಮಗಳನ್ನು ಹಸಿರು ನಿಶಾನೆ ತೋರಿಸಿದ ನಂತರ ಯುರೋಪಿಯನ್ ಆಯೋಗವು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಅಂತೆಯೇ ಏಪ್ರಿಲ್ 15 ರಿಂದ ಕ್ರಮಗಳ ಅಡಿಯಲ್ಲಿ ಸುಂಕಗಳನ್ನು ಸಂಗ್ರಹಿಸಲು ಪ್ರಾರಂಭಿಸಲಾಗುವುದು ಎಂದು ಆಯೋಗ ಹೇಳಿದೆ.

'EU ಯುಎಸ್ ಸುಂಕಗಳನ್ನು ನ್ಯಾಯಸಮ್ಮತವಲ್ಲ ಮತ್ತು ಹಾನಿಕಾರಕವೆಂದು ಪರಿಗಣಿಸುತ್ತದೆ, ಇದು ಎರಡೂ ಕಡೆಯವರಿಗೆ ಹಾಗೂ ಜಾಗತಿಕ ಆರ್ಥಿಕತೆಗೆ ಆರ್ಥಿಕ ಹಾನಿಯನ್ನುಂಟುಮಾಡುತ್ತದೆ. ಬ್ರಸೆಲ್ಸ್ "ಸಮತೋಲಿತ ಮತ್ತು ಪರಸ್ಪರ ಪ್ರಯೋಜನಕಾರಿ" ಒಪ್ಪಂದವನ್ನು ಬಯಸಿದೆ ಎಂದು ಒತ್ತಿ ಹೇಳಿದೆ.

EU hits back at US tariffs with new duties on 20 billion Euro worth of goods
ಚೀನಾದ ಮೇಲೆ ಶೇ.104ರಷ್ಟು ಸುಂಕ: Donald Trumpರ ಹೊಸ ತೆರಿಗೆ ಇಂದು ಮಧ್ಯರಾತ್ರಿಯಿಂದ ಜಾರಿ

ಈ ಬಗ್ಗೆ ತಮ್ಮ ಕ್ರಮಗಳನ್ನು ಸಮರ್ಥಿಸಿಕೊಂಡಿರುವ ಯೂರೋಪಿಯನ್ ಒಕ್ಕೂಟದ ವಕ್ತಾರರು, 'ಟ್ರಂಪ್ EU ನಿಂದ ಕಾರು ಆಮದಿನ ಮೇಲೆ 25 ಪ್ರತಿಶತದಷ್ಟು ಸುಂಕವನ್ನು ವಿಧಿಸಿದ್ದಾರೆ ಮತ್ತು 20 ಪ್ರತಿಶತದಷ್ಟು ಪರಸ್ಪರ ಸುಂಕಗಳೊಂದಿಗೆ ಬಣವನ್ನು ಗುರಿಯಾಗಿಸಿಕೊಂಡಿದ್ದಾರೆ. ಆ ಕ್ರಮಗಳಿಗೆ ತನ್ನ ಪ್ರತಿಕ್ರಿಯೆಯನ್ನು ಮುಂದಿನ ವಾರದ ಆರಂಭದಲ್ಲಿ ಬಹಿರಂಗಪಡಿಸಬಹುದು. ಬುಧವಾರದ ಪ್ರತೀಕಾರದ ಕ್ರಮಗಳು ಎರಡು ಭಾಗಗಳನ್ನು ಒಳಗೊಂಡಿವೆ ಎಂದು ಹೇಳಿದರು.

ಕಳೆದ ತಿಂಗಳು ವಿಧಿಸಲಾದ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲಿನ US ಸುಂಕಗಳಿಗೆ ಪ್ರತೀಕಾರವಾಗಿ ಈ ಸುಂಕಗಳು ವಿಧಿಸಲ್ಪಟ್ಟಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಸುಂಕಗಳ ಕ್ರಮಕ್ಕೆ ಯುರೋಪ್ ಈ ವರೆಗೂ ಪ್ರತಿಕ್ರಿಯೆ ಘೋಷಿಸಿರಲಿಲ್ಲ. ಆದರೆ ಇದೀಗ ತನ್ನ ಮೊದಲ ಕ್ರಮ ಕೈಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com