Plane Hijack: ಅಮೆರಿಕ ವಿಮಾನ ಹೈಜಾಕ್ ಡ್ರಾಮಾ; ಆಗಂತುಕನ ಮೇಲೆ ಗುಂಡು ಹಾರಿಸಿದ ಪ್ರಯಾಣಿಕ!

ಅಮೆರಿಕದ ಬೆಲೀಜ್‌ನಲ್ಲಿ ಚಾಕು ಹಿಡಿದಿದ್ದ ಅಮೆರಿಕದ ಪ್ರಜೆಯೊಬ್ಬ ಸಣ್ಣ ಟ್ರಾಫಿಕ್ ಏರ್ ವಿಮಾನವನ್ನು ಅಪಹರಿಸಲು ಯತ್ನಿಸಿದ್ದಾನೆ.
US Man Attempts To Hijack Plane
ಅಮೆರಿಕ ವಿಮಾನ ಹೈಜಾಕ್ ಹೈಡ್ರಾಮಾ
Updated on

ಬೆಲ್ಮೋಪನ್: ಅಮೆರಿಕದಲ್ಲಿ ಮತ್ತೊಂದು ವಿಮಾನ ಹೈಜಾಕ್ ಹೈಡ್ರಾಮಾ ವರದಿಯಾಗಿದ್ದು, ವಿಮಾನ ಅಪಹರಿಸಲು ಯತ್ನಿಸಿದ ಆಗಂತುಕನನ್ನು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಗುಂಡುಹಾರಿಸಿ ಕೊಂದು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಗುರುವಾರ ಅಮೆರಿಕದ ಬೆಲೀಜ್‌ನಲ್ಲಿ ಚಾಕು ಹಿಡಿದಿದ್ದ ಅಮೆರಿಕದ ಪ್ರಜೆಯೊಬ್ಬ ಸಣ್ಣ ಟ್ರಾಫಿಕ್ ಏರ್ ವಿಮಾನವನ್ನು ಅಪಹರಿಸಲು ಯತ್ನಿಸಿದ್ದಾನೆ. ಚಾಕು ಹಿಡಿದು ವಿಮಾನದಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಹಲವರು ಗಾಯಗೊಂಡಿದ್ದು, ಆಗಂತುಕನ ದಾಳಿಯಿಂದ ತಪ್ಪಿಸಿಕೊಳ್ಳಲು ವಿಮಾನದಲ್ಲಿದ್ದ ಮತ್ತೋರ್ವ ಪ್ರಯಾಣಿಕ ಆತನ ಮೇಲೆ ಗುಂಡು ಹಾರಿಸಿದ್ದಾನೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಸ್ಯಾನ್ ಪೆಡ್ರೊಗೆ ತೆರಳುತ್ತಿದ್ದ ವಿಮಾನ ಆಗಸದಲ್ಲಿ ಹಾರುತ್ತಿದ್ದಾಗಲೇ ಈ ಘಟನೆ ಸಂಭವಿಸಿದೆ. ಆಗಂತುಕನನ್ನು 49 ವರ್ಷದ ಶಂಕಿತ ವ್ಯಕ್ತಿ ಅಕಿನ್ಯೆಲಾ ಸಾವಾ ಟೇಲರ್ ಎಂದು ಗುರುತಿಸಲಾಗಿದೆ. ಆರಂಭದಲ್ಲಿ ಸಹ ಪ್ರಯಾಣಿಕರ ಮೇಲೆ ಜಗಳ ಮಾಡಿದ ಈತ ನೋಡ ನೋಡುತ್ತಲೇ ಚಾಕು ಹೊರತೆಗೆದು ಇತರೆ ಪ್ರಯಾಣಿಕರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ್ದಾನೆ.

US Man Attempts To Hijack Plane
'ನಾವು ಹಿಂದೂಗಳಿಗಿಂತ ಭಿನ್ನ.. 13 ಲಕ್ಷ ಸೈನಿಕರ ಕೈಯಲ್ಲೇ ಏನೂ ಮಾಡಲಾಗಲಿಲ್ಲ'; ಭಾರತ-ಹಿಂದೂ ಧರ್ಮದ ವಿರುದ್ಧ ವಿಷಕಾರಿದ ಪಾಕ್ ಸೇನಾ ಮುಖ್ಯಸ್ಥ

ಈ ವೇಳೆ ಈತನ ದಾಳಿ ತಡೆಯಲು ಅದೇ ವಿಮಾನದಲ್ಲಿದ್ದ ಮತ್ತೋರ್ವ ಪ್ರಯಾಣಿಕ ಟೇಲರ್ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ದುಷ್ಕರ್ಮಿ ಟೇಲರ್ ನೆಲಕ್ಕುರುಳಿದ್ದು, ಬಳಿಕ ವಿಮಾನದ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಬಳಿಕ ವಿಮಾನ ಸಮೀಪದ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದು, ವಿಮಾನವನ್ನು ಭದ್ರತಾ ಸಿಬ್ಬಂದಿ ನಿಯಂತ್ರಣಕ್ಕೆ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಬೆಲೀಜ್ ಪೊಲೀಸ್ ಆಯುಕ್ತ ಚೆಸ್ಟರ್ ವಿಲಿಯಮ್ಸ್, ಟೇಲರ್ ಮೇಲೆ ಗುಂಡು ಹಾರಿಸಿದ ಪ್ರಯಾಣಿಕನನ್ನು ಹೀರೋ ಎಂದು ಹೊಗಳಿದ್ದಾರೆ.

ಅವರ ತುರ್ತು ಪ್ರತಿಕ್ರಿಯೆಯಿಂದ ಸಂಭಾವ್ಯ ದುರಂತ ತಪ್ಪಿದೆ ಎಂದು ಹೇಳಿದ್ದಾರೆ. ಅಂತೆಯೇ ಆಗಂತುಕ ಟೇಲರ್ ಹೇಗೆ ವಿಮಾನದೊಳಗೆ ಚಾಕು ತಂದ ಎಂಬುದು ಸ್ಪಷ್ಟವಾಗಿಲ್ಲ.. ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

ಘಟನೆಯ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಸಹಾಯಕ್ಕಾಗಿ ಬೆಲೀಜಿಯನ್ ಅಧಿಕಾರಿಗಳು ಯುಎಸ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com