Israel-Gaza War: ಮಾನವೀಯ ವಲಯದ ಮೇಲೆ ಇಸ್ರೇಲ್ ಬಾಂಬ್ ದಾಳಿ, ಮಕ್ಕಳು ಸೇರಿದಂತೆ ಕನಿಷ್ಠ 90 ಮಂದಿ ಸಾವು

ದಕ್ಷಿಣ ನಗರ ಖಾನ್ ಯೂನಿಸ್‌ನಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ, ಸ್ಥಳಾಂತರಗೊಂಡ ಲಕ್ಷಾಂತರ ಜನರು ಮವಾಸಿ ಪ್ರದೇಶದ ಟೆಂಟ್‌ನಲ್ಲಿ ವಾಸವಿದ್ದು, ಇಸ್ರೇಲ್ ಇದನ್ನು ಮಾನವೀಯ ವಲಯವೆಂದು ಗುರುತಿಸಿದೆ.
Palestinians mourn over the body of Kinan Edwan, 2 years old, killed in an Israeli army airstrike, during his funeral in Khan Younis, southern Gaza Strip, Saturday.
ದಕ್ಷಿಣ ಗಾಜಾ ಪಟ್ಟಿಯ ಖಾನ್ ಯೂನಿಸ್‌ನಲ್ಲಿ ಇಸ್ರೇಲಿ ಸೇನೆ ನಡೆಸಿದ ದಾಳಿಯಲ್ಲಿ ಮೃತಪಟ್ಟಿರುವ 2 ವರ್ಷದ ಮಗು.
Updated on

ದೀರ್ ಅಲ್-ಬಾಲಾಹ್: ಕಳೆದ 48 ಗಂಟೆಗಳಲ್ಲಿ ಗಾಜಾ ಮೇಲೆ ಇಸ್ರೇಲ್ ನಡೆಸಿರುವ ದಾಳಿಯಲ್ಲಿ ಮಕ್ಕಳು ಸೇರಿದಂತೆ 90 ಕ್ಕೂ ಹೆಚ್ಚು ಮಂದಿ ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ,

ಮಾನವೀಯ ವಲಯ ಎಂದು ಗುರುತಿಸಿದ ಸ್ಥಳದಲ್ಲಿ ಆಶ್ರಯ ಪಡೆದಿದ್ದ ಮಕ್ಕಳು, ಮಹಿಳೆಯರು ಸೇರಿದಂತೆ 15 ಮಂದಿ ಒಂದೇ ರಾತ್ರಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

ದಕ್ಷಿಣ ನಗರ ಖಾನ್ ಯೂನಿಸ್‌ನಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ, ಸ್ಥಳಾಂತರಗೊಂಡ ಲಕ್ಷಾಂತರ ಜನರು ಮವಾಸಿ ಪ್ರದೇಶದ ಟೆಂಟ್‌ನಲ್ಲಿ ವಾಸವಿದ್ದು, ಇಸ್ರೇಲ್ ಇದನ್ನು ಮಾನವೀಯ ವಲಯವೆಂದು ಗುರುತಿಸಿದೆ.

ರಫಾ ನಗರದಲ್ಲಿ ನಡೆದ ಪ್ರತ್ಯೇಕ ದಾಳಿಗಳಲ್ಲಿ ತಾಯಿ ಮತ್ತು ಮಗಳು ಸೇರಿದಂತೆ ಇತರ ನಾಲ್ವರು ಜನರು ಸಾವನ್ನಪ್ಪಿದ್ದಾರೆಂದು ಯುರೋಪಿಯನ್ ಆಸ್ಪತ್ರೆ ತಿಳಿಸಿದೆ.

Palestinians mourn over the body of Kinan Edwan, 2 years old, killed in an Israeli army airstrike, during his funeral in Khan Younis, southern Gaza Strip, Saturday.
ಗಾಜಾ ಮೇಲೆ ಮತ್ತೆ ಇಸ್ರೇಲ್ ದಾಳಿ; ಒಂದೇ ಕುಟುಂಬದ 10 ಜನ ಸೇರಿ 23 ಮಂದಿ ಸಾವು

ಹಮಾಸ್ ವಿರುದ್ಧ ಯುದ್ಧ ಆರಂಭಿರುವ ಇಸ್ರೇಲ್, ಗಾಜಾ ಪಟ್ಟಿಯನ್ನು ವಶಕ್ಕೆ ಪಡೆಯಬೇಕೆಂದು ಹಠಕ್ಕೆ ಬಿದ್ದಿದೆ. ಇದರಂತೆ ಗಾಜಾ ಮೇಲೆ ತನ್ನ ದಾಳಿಯನ್ನು ತೀವ್ರವಗೊಳಿಸಿದೆ. ಈ ನಡುವೆ ಇಸ್ರೇಲ್‌ನ ಈ ಆಸೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಬೆನ್ನೆಲುಬಾಗಿ ನಿಂತಿದ್ದು, ಮಧ್ಯಪ್ರಾಚ್ಯ ನರಕವಾಗಿ ಬದಲಾಗಿದೆ.

ದಾಳಿ ಪರಿಣಾಮ ಎಲ್ಲಿ ನೋಡಿದರೂ ಕುಸಿದು ಬಿದ್ದಿರುವ ಕಟ್ಟಡ ಹಾಗೂ ಕಟ್ಟಡಗಳ ಅವಶೇಷದ ಕೆಳಗೆ ಶವಗಳ ರಾಶಿಗಳು ಕಂಡು ಬರುತ್ತಿದೆ.

ಇಸ್ರೇಲ್ ಯುದ್ಧ ನಿಲ್ಲಿಸಬೇಕೆಂದು ವಿಶ್ವಸಂಸ್ಥೆ ಒತ್ತಡ ಹೇರುತ್ತಲೇ ಬಂದಿದ್ದರೂ, ಯುದ್ಧದಿಂದ ಹಿಂದೆ ಸರಿಯುತ್ತಿಲ್ಲ. ಬದಲಿಗೆ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸಿದೆ. ಗಾಜಾ ಪಟ್ಟಿಯಲ್ಲಿ ಸ್ಮಶಾನದಂತೆ ಬದಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com