'ನಮ್ಮ ಕೆಲಸ ಮಾಡಿ ಮುಗಿಸುವುದು ಬಿಟ್ಟರೆ ಬೇರೆ ಆಯ್ಕೆಗಳಿಲ್ಲ': ಗಾಜಾದಲ್ಲಿ ಸೇನಾ ಆಕ್ರಮಣ ಯೋಜನೆ ಸಮರ್ಥಿಸಿಕೊಂಡ Benjamin Netanyahu

ಗಾಜಾದಲ್ಲಿ ಮುಂದಿನ ಹಂತದ ಯೋಜನೆ ಜಾರಿಗೆ ತರಲು ಕಡಿಮೆ ಸಮಯದವಿದೆ ಎಂದು ನೆತನ್ಯಾಹು ಹೇಳಿದರು.
Banzamin Netanyahu
ಬೆಂಜಮಿನ್ ನೆತನ್ಯಾಹು
Updated on

ಜೆರುಸಲೆಮ್: ಇಸ್ರೇಲ್‌ಗೆ ಕೆಲಸ ಮಾಡಿ ಮುಗಿಸಿ ಹಮಾಸನ್ನು ಸಂಪೂರ್ಣವಾಗಿ ಸೋಲಿಸುವುದು ಬಿಟ್ಟರೆ ಬೇರೆ ಆಯ್ಕೆಗಳಿಲ್ಲ" ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಅವರು ಜೆರುಸಲೆಮ್‌ನಲ್ಲಿ ವಿದೇಶಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ, ಯೋಜಿತ ಮಿಲಿಟರಿ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ. ನಮ್ಮ ಗುರಿ ಗಾಜಾವನ್ನು ಆಕ್ರಮಿಸಿಕೊಳ್ಳುವುದು ಅಲ್ಲ, ನಮ್ಮ ಗುರಿ ಗಾಜಾವನ್ನು ಮುಕ್ತಗೊಳಿಸುವುದು" ಎಂದು ಪ್ರತಿಪಾದಿಸಿದ್ದಾರೆ.

ಗಾಜಾದಲ್ಲಿ ಮುಂದಿನ ಹಂತದ ಯೋಜನೆ ಜಾರಿಗೆ ತರಲು ಕಡಿಮೆ ಸಮಯದವಿದೆ ಎಂದು ನೆತನ್ಯಾಹು ಹೇಳಿದರು.

Banzamin Netanyahu
'ಮೌಲ್ಯಗಳ ಶರಣಾಗತಿ': ಗಾಜಾ-ಇರಾನ್ ಮೇಲೆ ಇಸ್ರೇಲ್ ದಾಳಿಗೆ ಭಾರತದ ಮೌನ ಪ್ರಶ್ನಿಸಿದ Sonia Gandhi

ಗಾಜಾದಲ್ಲಿ ನಮ್ಮ ಗುರಿ ಸೇನಾಮುಕ್ತಗೊಳಿಸುವುದು, ಇಸ್ರೇಲಿ ಮಿಲಿಟರಿ ಅಲ್ಲಿ "ಅತಿಕ್ರಮಣ ಭದ್ರತಾ ನಿಯಂತ್ರಣ" ಹೊಂದಿರುವುದು ಮತ್ತು ಇಸ್ರೇಲ್ ಅಲ್ಲದ ನಾಗರಿಕ ಆಡಳಿತ ಉಸ್ತುವಾರಿ ವಹಿಸುವುದು ಸೇರಿವೆ ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಿದೇಶಿ ಪತ್ರಕರ್ತರನ್ನು ಕರೆತರಲು ಇಸ್ರೇಲ್ ಮಿಲಿಟರಿಗೆ ನಿರ್ದೇಶನ ನೀಡಿದ್ದೇನೆ ಎಂದು ನೆತನ್ಯಾಹು ಹೇಳಿದರು. ನಾಗರಿಕ ಸಾವು, ವಿನಾಶ ಮತ್ತು ಸಹಾಯದ ಕೊರತೆ ಸೇರಿದಂತೆ ಗಾಜಾದ ಅನೇಕ ಸಮಸ್ಯೆಗಳಿಗೆ ಹಮಾಸ್ ಉಗ್ರಗಾಮಿ ಗುಂಪಿನ ಮೇಲೆ ನೆತನ್ಯಾಹು ಮತ್ತೆ ಆರೋಪ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com