
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಮಧ್ಯಾಹ್ನ ಶ್ವೇತ ಭವನದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಲಿದ್ದಾರೆ. ಅವರು ಬಯಸಿದರೆ" ರಷ್ಯಾದೊಂದಿಗಿನ ಯುದ್ಧವನ್ನು ಅಂತ್ಯಗೊಳಿಸಬಹುದು ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
ಒಬಾಮಾ ಆಡಳಿತದಲ್ಲಿ 2014 ರಲ್ಲಿ ಕ್ರೈಮಿಯಾವನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿರುವುದನ್ನು ಟ್ರಂಪ್ ಉಲ್ಲೇಖಿಸಿದ್ದರೂ ರಷ್ಯಾ ವಿರೋಧದಿಂದಾಗಿ ನ್ಯಾಟೋದಲ್ಲಿ ಉಕ್ರೇನ್ ಸೇರ್ಪಡೆಯನ್ನು ತಳ್ಳಿ ಹಾಕಿದ್ದಾರೆ.
"ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ಬಯಸಿದಲ್ಲಿ ರಷ್ಯಾದೊಂದಿಗಿನ ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬಹುದು ಅಥವಾ ಅವರು ಯುದ್ಧವನ್ನು ಮುಂದುವರೆಸಬಹುದು. ಅದು ಹೇಗೆ ಪ್ರಾರಂಭವಾಯಿತು ಎಂಬುದನ್ನು ನೆನಪಿಸಿಕೊಳ್ಳಿ. ಒಬಾಮಾ ಅವರು ಕ್ರೈಮಿಯಾವನ್ನು ಹಿಂತಿರುಗಿಸಲಿಲ್ಲ (12 ವರ್ಷಗಳ ಹಿಂದೆ, ಗುಂಡು ಹಾರಿಸದೆ!) ಉಕ್ರೇನ್ ನ್ಯಾಟೋಗೆ ಸೇರುತ್ತಿಲ್ಲ. ಕೆಲವು ವಿಷಯಗಳು ಎಂದಿಗೂ ಬದಲಾಗುವುದಿಲ್ಲ ಎಂದು ಟ್ರೂತ್ ಸೋಶಿಯಲ್ ನಲ್ಲಿ ಟ್ರಂಪ್ ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, ಯುಎಸ್ ಅಧ್ಯಕ್ಷರೊಂದಿಗಿನ ಝೆಲೆನ್ಸ್‌ಕಿ ಸಭೆಯಲ್ಲಿ ಯುರೋಪಿಯನ್ ಮತ್ತು ನ್ಯಾಟೋ ನಾಯಕರು ಸೇರಿಕೊಳ್ಳುವುದರಿಂದ ಶ್ವೇತಭವನದಲ್ಲಿ ದೊಡ್ಡ ದಿನ" ಎಂದು ಟ್ರಂಪ್ ಹೇಳಿದ್ದಾರೆ. ಇಂದು ಶ್ವೇತಭವನದಲ್ಲಿ ದೊಡ್ಡ ದಿನ. ಒಂದೇ ಸಮಯದಲ್ಲಿ ಇಷ್ಟೊಂದು ಯುರೋಪಿಯನ್ ನಾಯಕರು ಸಭೆ ನಡೆಸಿರಲಿಲ್ಲ. ಅವರಿಗೆ ಆತಿಥ್ಯ ವಹಿಸುವುದು ನನ್ನ ದೊಡ್ಡ ಗೌರವ ಎಂದು ಅವರು ಹೇಳಿದ್ದಾರೆ.
ಕಳೆದ ವಾರ ಅಲಾಸ್ಕಾದಲ್ಲಿ ನಡೆದ ಸಭೆಯಲ್ಲಿ ಉಕ್ರೇನ್ ವಿರುದ್ಧದ ಕದನ ವಿರಾಮ ಒಪ್ಪಂದ ಜಾರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಪ್ಪಿಕೊಂಡಿಲ್ಲ ಎಂಬ ವರದಿಗಳು ಸುಳ್ಳು. ಅಂತಹ ಸುದ್ದಿಗಳನ್ನು ವರದಿ ಮಾಡುವುದನ್ನು ಮಾಧ್ಯಮಗಳು ನಿಲ್ಲಿಸಬೇಕು ಎಂದು ಟ್ರಂಪ್ ಕಿಡಿಕಾರಿದ್ದಾರೆ.
ಶನಿವಾರ ಎಕ್ಸ್ ಪೋಸ್ಟ್‌ನಲ್ಲಿ ಝೆಲೆನ್ಸ್ಕಿ ಅವರು ಸೋಮವಾರ ವಾಷಿಂಗ್ಟನ್‌ನಲ್ಲಿ ಟ್ರಂಪ್ ಅವರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. ಸೋಮವಾರದ ಶ್ವೇತಭವನದ ಸಭೆಯಲ್ಲಿ ಭಾಗವಹಿಸಲು ಟ್ರಂಪ್ ಯುರೋಪಿಯನ್ ನಾಯಕರನ್ನು ಆಹ್ವಾನಿಸಿದ್ದಾರೆ ಎಂದು ಅಮೆರಿಕದ ಆನ್‌ಲೈನ್ ಮಾಧ್ಯಮ ಸಂಸ್ಥೆ ಆಕ್ಸಿಯೋಸ್ ವರದಿ ಮಾಡಿದೆ.
Advertisement