

ಜೆರುಸಲೇಮ್: ಗಾಜಾದಲ್ಲಿ ದಾಳಿಯನ್ನು ಪುನರ್ ಆರಂಭಿಸಲು ಪ್ರಯತ್ನ ನಡೆಸುತ್ತಿರುವಂತೆಯೇ ಹಮಾಸ್ ನ್ನು ಭಯೋತ್ಪಾದಕ ಸಂಘಟನೆ' ಎಂದು ಘೋಷಿಸುವಂತೆ ಭಾರತವನ್ನು ಇಸ್ರೇಲ್ ಒತ್ತಾಯಿಸಿದೆ.
ಪಾಕಿಸ್ತಾನ ಮೂಲದ ಲಷ್ಕರ್-ಎ- ತೋಯ್ಬಾ (LET) ಮತ್ತಿತರ ಇರಾನಿನ ಪ್ರಾಕ್ಸಿಗಳೊಂದಿಗೆ ಹಮಾಸ್ ಬೆಳೆಯುತ್ತಿರುವ ಸಂಬಂಧಗಳು ಭಾರತ ಮತ್ತು ಇಸ್ರೇಲ್ ಎರಡಕ್ಕೂ ಭದ್ರತಾ ಬೆದರಿಕೆಯನ್ನು ಉಂಟುಮಾಡುತ್ತವೆ ಎಂಬುದನ್ನು ಉಲ್ಲೇಖಿಸಿ ಇಸ್ರೇಲ್ ಈ ರೀತಿಯ ಒತ್ತಡ ಹಾಕುತ್ತಿದೆ.
ಜೆರುಸಲೇಮ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಸ್ರೇಲ್‌ನ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು, "ಹಮಾಸ್‌ನಂತಹ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಭಾರತವು ಶ್ರಮಿಸಬೇಕು ಎಂಬುದು ನಮ್ಮ ವಿನಂತಿಯಾಗಿದೆ ಎಂದರು.
ಇಸ್ರೇಲ್ ಕೆಲವು ವರ್ಷಗಳ ಹಿಂದೆ LETಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತ್ತು. ಅದಕ್ಕೆ ಪ್ರತಿಯಾಗಿ ಭಾರತವೂ ಹಮಾಸ್ ನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಬೇಕು ಎಂದು ಬಯಸುತ್ತೇವೆ ಎಂದು ಹೇಳಿದರು. ಅಕ್ಟೋಬರ್ 7 ರ ವಿನಾಶಕಾರಿ ದಾಳಿಯ ಒಂದು ತಿಂಗಳ ನಂತರ ಇಸ್ರೇಲ್ 2023 ರಲ್ಲಿ LETಯನ್ನು ಭಯೋತ್ಪಾದಕ ಸಂಘಟನೆ ಎಂದು ಗೊತ್ತುಪಡಿಸಿತ್ತು.
ಇಸ್ರೇಲಿ ರಕ್ಷಣಾ ಪಡೆಗಳು (IDF) ಈ ಹಿಂದೆ ಹಮಾಸ್ ಅನ್ನು ನಿರ್ಬಂಧಿಸಲು ಭಾರತವನ್ನು ಒತ್ತಾಯಿಸಿದ್ದವು. ಇದೀಗ ಹಮಾಸ್ ನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವಂತೆ ಒತ್ತಾಯಿಸಿದೆ.
ಉಭಯ ದೇಶಗಳು ಸಾಮಾನ್ಯ ಶತ್ರುವನ್ನು ಹೊಂದಿದ್ದಾರೆ. ಭಾರತವು ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಎಂದು ಕರೆದರೆ ಒಳ್ಳೆಯದು. ನಾವು ಯಾರನ್ನು ಎದುರಿಸುತ್ತೇವೆ ಎಂಬುದರ ಬಗ್ಗೆ ಸ್ಪಷ್ಟವಾದ ಹೇಳಿಕೆ ನೀಡುವುದು ಒಳ್ಳೆಯದು ಎಂದು ಹೇಳಿದರು.
"ಇದು ಕೇವಲ ಸ್ವತ್ತುಗಳನ್ನು ರಕ್ಷಿಸುವುದು ಅಥವಾ ಉಗ್ರರನ್ನು ಭಾರತಕ್ಕೆ ಪ್ರವೇಶಿಸುವುದನ್ನು ನಿಷೇಧಿಸುವುದು ಮಾತ್ರವಲ್ಲ. ಹಮಾಸ್ ಏನು ಮಾಡುತ್ತಿದೆ ಎಂಬುದನ್ನು ಸ್ಪಷ್ಟವಾಗಿ ನೋಡಲು ಮತ್ತು ಭಾರತದ ನೆಲದಲ್ಲಿ ಯಾವುದೇ ಉಗ್ರರ ಕೃತ್ಯಗಳ ನಡೆಯದಂತೆ ಮಾಡಲು ಇದು ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement