'ಬಾಂಗ್ಲಾದೇಶದ ಮೇಲೆ ದಾಳಿ ಮಾಡಿದ್ರೆ.. ಭಾರತಕ್ಕೆ ಸಂಪೂರ್ಣ ಬಲದ ತಕ್ಕ ಉತ್ತರ': ಪಾಕ್ ಎಚ್ಚರಿಕೆ!

ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹದಗೆಟ್ಟಿದ್ದು, ಇದರ ಬೆನ್ನಲ್ಲೇ ಈ ಪರಿಸ್ಥಿತಿಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಪಾಕಿಸ್ತಾನ ಸಂಚು ರೂಪಿಸುತ್ತಿದೆ.
Osman Hadi
ಕಮ್ರಾನ್ ಸಯೀದ್ ಉಸ್ಮಾನಿ
Updated on

ಇಸ್ಲಾಮಾಬಾದ್: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಮುಂದಿಟ್ಟುಕೊಂಡು ಭಾರತ ದಾಳಿಗೆ ಮುಂದಾದ್ರೆ.. ಪಾಕಿಸ್ತಾನ ತನ್ನ ಸಂಪೂರ್ಣ ಬಲದೊಂದಿಗೆ ಬಾಂಗ್ಲಾದೇಶ ಪರ ನಿಂತ ಹೋರಾಟ ನಡೆಸಲಿದೆ ಎಂದು ಪಾಕಿಸ್ತಾನ ಸರ್ಕಾರ ಎಚ್ಚರಿಸಿದೆ.

ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹದಗೆಟ್ಟಿದ್ದು, ಇದರ ಬೆನ್ನಲ್ಲೇ ಈ ಪರಿಸ್ಥಿತಿಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಪಾಕಿಸ್ತಾನ ಸಂಚು ರೂಪಿಸುತ್ತಿದೆ. ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಅಸಮಾಧಾನವನ್ನು ಮತ್ತು ಶೀತಲ ಸಮರವನ್ನು ದುರುಪಯೋಗಪಡಿಸಿಕೊಳ್ಳಲು ಪಾಕ್ ಪ್ರಯತ್ನಿಸುತ್ತಿದೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಪಕ್ಷವಾದ ಪಾಕಿಸ್ತಾನ ಮುಸ್ಲಿಂ ಲೀಗ್ (ಪಿಎಂಎಲ್)ನ ಯುವ ವಿಭಾಗದ ನಾಯಕ ಕಮ್ರಾನ್ ಸಯೀದ್ ಉಸ್ಮಾನಿ ಇಂದು ಭಾರತಕ್ಕೆ ಬೆದರಿಕೆ ಹಾಕಿದ್ದು, ಬಾಂಗ್ಲಾದೇಶದ ಮೇಲೆ ಭಾರತದಿಂದ ಯಾವುದೇ ದಾಳಿ ನಡೆದರೆ ಪಾಕಿಸ್ತಾನದ ಸೈನ್ಯ ಮತ್ತು ಕ್ಷಿಪಣಿಗಳು ಅದಕ್ಕೆ ಪ್ರತಿಕ್ರಿಯಿಸುತ್ತವೆ ಎಂದು ಹೇಳಿದ್ದಾರೆ.

'ಭಾರತವು ಬಾಂಗ್ಲಾದೇಶದ ಸ್ವಾಯತ್ತತೆಯ ಮೇಲೆ ದಾಳಿ ಮಾಡಿದರೆ, ಯಾರಾದರೂ ಬಾಂಗ್ಲಾದೇಶವನ್ನು ಕೆಟ್ಟ ಉದ್ದೇಶದಿಂದ ನೋಡಲು ಧೈರ್ಯ ಮಾಡಿದರೆ ಪಾಕಿಸ್ತಾನದ ಜನರು, ಪಾಕಿಸ್ತಾನಿ ಸಶಸ್ತ್ರ ಪಡೆಗಳು ಮತ್ತು ನಮ್ಮ ಕ್ಷಿಪಣಿಗಳು ಸುಮ್ಮನಿರುವುದಿಲ್ಲ, ನಾವು ಬಾಂಗ್ಲಾದೇಶದ ಸಹಾಯಕ್ಕೆ ರೆಡಿ ಇರುತ್ತೇವೆ ಎಂಬುದನ್ನು ನೆನಪಿಡಿ' ಎಂದು ಹೇಳಿದ್ದಾರೆ.

Osman Hadi
ದೆಹಲಿ: ಬಾಂಗ್ಲಾದೇಶ ರಾಯಭಾರ ಕಚೇರಿ ಎದುರು ಬೃಹತ್ ಪ್ರತಿಭಟನೆ, ಲಾಠಿ ಚಾರ್ಜ್! ವೀಸಾ ಸೇವೆ ಸ್ಥಗಿತ, Video

ಸೇನಾ ಮೈತ್ರಿಗೆ ಕರೆ

ಅಲ್ಲದೆ, ಅವರು ಪಾಕಿಸ್ತಾನ (Pakistan) ಮತ್ತು ಬಾಂಗ್ಲಾದೇಶದ ನಡುವೆ ಮಿಲಿಟರಿ ಮೈತ್ರಿಗೆ ಕರೆ ನೀಡಿದ್ದು, ಬಾಂಗ್ಲಾದೇಶವನ್ನು ಭಾರತದ ಸೈದ್ಧಾಂತಿಕ ಪ್ರಾಬಲ್ಯಕ್ಕೆ ತಳ್ಳುವುದನ್ನು ಪಾಕಿಸ್ತಾನ ಒಪ್ಪುವುದಿಲ್ಲ. ಒಂದುವೇಳೆ ಭಾರತ ಬಾಂಗ್ಲಾದೇಶದ ಮೇಲೆ ದಾಳಿ ಮಾಡಿದರೆ ಅಥವಾ ಅದರ ಸ್ವಾಯತ್ತತೆಯ ಮೇಲೆ ದುಷ್ಟ ದೃಷ್ಟಿ ಬೀರಿದರೆ, ಪಾಕಿಸ್ತಾನ ಅದಕ್ಕೆ ಬಲವಾಗಿ ಪ್ರತಿಕ್ರಿಯಿಸುತ್ತದೆ ಎಂದು ಎಚ್ಚರಿಸಿದ್ದಾರೆ.

ಮತ್ತೊಂದು ವಿಡಿಯೋದಲ್ಲಿ, ಉಸ್ಮಾನಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವೆ ಔಪಚಾರಿಕ ಮಿಲಿಟರಿ ಮೈತ್ರಿಗೆ ಕರೆ ನೀಡುವ ಮೂಲಕ ಪಾಕಿಸ್ತಾನದ ಜೊತೆ ಕೈಜೋಡಿಸಲು ಬಾಂಗ್ಲಾದೇಶವನ್ನು ಆಹ್ವಾನಿಸಿದ್ದಾರೆ. ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಾಂಗ್ಲಾದೇಶಕ್ಕೆ ಕಾಟ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಭಾರತವು ಅಖಂಡ ಭಾರತ ಸಿದ್ಧಾಂತದ ಅಡಿಯಲ್ಲಿ ಬಾಂಗ್ಲಾದೇಶವನ್ನು ಕೆಡವಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

'ನಮ್ಮ ಪ್ರಸ್ತಾಪವೆಂದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮಿಲಿಟರಿ ಮೈತ್ರಿಯನ್ನು ರಚಿಸಬೇಕು. ಪಾಕಿಸ್ತಾನ ಬಾಂಗ್ಲಾದೇಶದಲ್ಲಿ ಮಿಲಿಟರಿ ನೆಲೆಯನ್ನು ಸ್ಥಾಪಿಸಬೇಕು ಮತ್ತು ಬಾಂಗ್ಲಾದೇಶ ಪಾಕಿಸ್ತಾನದಲ್ಲಿ ಮಿಲಿಟರಿ ನೆಲೆಯನ್ನು ಸ್ಥಾಪಿಸಬೇಕು. ಪಾಕಿಸ್ತಾನ-ಬಾಂಗ್ಲಾದೇಶ ಮಿಲಿಟರಿ ಪಾಲುದಾರಿಕೆಯು ಪ್ರಾದೇಶಿಕ ಶಕ್ತಿಯ ಚಲನಶೀಲತೆಯನ್ನು ಬದಲಾಯಿಸುತ್ತದೆ ಮತ್ತು ಜಾಗತಿಕವಾಗಿ ಎರಡೂ ದೇಶಗಳು ತಮ್ಮ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಬಾಂಗ್ಲಾದೇಶ ಪಾಕಿಸ್ತಾನದ ಈ ಆಫರ್​​ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com