ಟ್ರಂಪ್ ಸರ್ಕಾರದಲ್ಲಿ ಭಾರತದ 'ಸಾಫ್ಟ್ ಪವರ್': Elon Muskರ DOGEಗೆ 22 ವರ್ಷದ ಭಾರತೀಯ ಎಂಜಿನಿಯರ್ ಎಂಟ್ರಿ!

ಭಾರತೀಯ ಮೂಲದ ಎಂಜಿನಿಯರ್ ಆಕಾಶ್ ಬೊಬ್ಬ ಸುದ್ದಿಯಲ್ಲಿದ್ದಾರೆ. ಎಲೋನ್ ಮಸ್ಕ್ ಅವರ ಸರ್ಕಾರಿ ದಕ್ಷತೆ ಇಲಾಖೆ (DOGE) ನೇಮಕ ಮಾಡಿಕೊಂಡ ಆರು ಯುವ ಎಂಜಿನಿಯರ್‌ಗಳಲ್ಲಿ ಆಕಾಶ್ ಒಬ್ಬರು.
Akash Bobba
ಆಕಾಶ್ ಬೊಬ್ಬ
Updated on

ಭಾರತೀಯ ಮೂಲದ ಎಂಜಿನಿಯರ್ ಆಕಾಶ್ ಬೊಬ್ಬ ಸುದ್ದಿಯಲ್ಲಿದ್ದಾರೆ. ಎಲೋನ್ ಮಸ್ಕ್ ಅವರ ಸರ್ಕಾರಿ ದಕ್ಷತೆ ಇಲಾಖೆ (DOGE) ನೇಮಕ ಮಾಡಿಕೊಂಡ ಆರು ಯುವ ಎಂಜಿನಿಯರ್‌ಗಳಲ್ಲಿ ಆಕಾಶ್ ಒಬ್ಬರು. 19 ರಿಂದ 24 ವರ್ಷ ವಯಸ್ಸಿನ ಈ ಆರು ಎಂಜಿನಿಯರ್‌ಗಳಿಗೆ ಸೂಕ್ಷ್ಮ ಸರ್ಕಾರಿ ವ್ಯವಸ್ಥೆಗಳಲ್ಲಿ ಅಸಾಧಾರಣ ಪ್ರವೇಶವನ್ನು ನೀಡಲಾಗಿದೆ.

ಆಕಾಶ್ ಬೊಬ್ಬ ಯಾರು?

ಆಕಾಶ್ ಬೊಬ್ಬ ಭಾರತೀಯ ಮೂಲದ 22 ವರ್ಷದ ಎಂಜಿನಿಯರ್. ಬೊಬ್ಬ ಯುಸಿ ಬರ್ಕ್ಲಿಯಲ್ಲಿ ಒಬ್ಬ ಅದ್ಭುತ ಕೋಡರ್ ಆಗಿ ಪ್ರಾರಂಭಿಸಿದರು. ಅವರು ಮೆಟಾ ಮತ್ತು ಪಲಂತಿರ್‌ನಲ್ಲಿ ಇಂಟರ್ನ್ ಆಗಿ ಕೆಲಸ ಮಾಡಿದ್ದಾರೆ. ಸರ್ಕಾರದ ಪ್ರಮುಖ ಹುದ್ದೆಗೆ ಬೊಬ್ಬಾ ಅವರ ನೇಮಕವು ಗಮನಾರ್ಹ ಸಾಧನೆಗಿಂತ ಕಡಿಮೆಯಿಲ್ಲ. ತಾಂತ್ರಿಕ ಕೌಶಲ್ಯಗಳ ಜೊತೆಗೆ, ಬೊಬ್ಬ ಅವರ ರೆಸ್ಯೂಮ್ AI, ಡೇಟಾ ವಿಶ್ಲೇಷಣೆ ಮತ್ತು ಹಣಕಾಸು ಮಾಡೆಲಿಂಗ್‌ನಲ್ಲಿ ಅವರ ಪರಿಣತಿಯನ್ನು ಪ್ರತಿಬಿಂಬಿಸುತ್ತದೆ.

ಬೊಬ್ಬಾ ಅವರ ಮಾಜಿ ಸಹಪಾಠಿ ಚಾರಿಸ್ ಜಾಂಗ್, ಬರ್ಕ್ಲಿಯಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಒಂದು ಪ್ರಮುಖ ಯೋಜನೆಯ ಗಡುವಿಗೆ ಕೇವಲ ಎರಡು ದಿನಗಳ ಮೊದಲು, ಆಕಾಶ್‌ನ ಪಾಲುದಾರ ಆಕಸ್ಮಿಕವಾಗಿ ಅವರ ಸಂಪೂರ್ಣ ಕೋಡ್‌ಬೇಸ್ ಅನ್ನು ಹೇಗೆ ಅಳಿಸಿಹಾಕಿದರು ಎಂಬುದನ್ನು ಜಾಂಗ್ ವಿವರಿಸಿದರು. ತಂಡವು ಭಯಭೀತರಾಗಿದ್ದಾಗ, ಬೊಬ್ಬ ಶಾಂತವಾಗಿದ್ದರು. ರಾತ್ರಿಯಿಡೀ ಇಡೀ ಯೋಜನೆಯನ್ನು ಪುನಃ ಬರೆದರು ಮತ್ತು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಅದನ್ನು ಸಲ್ಲಿಸಿ ಹೆಚ್ಚಿನ ಅಂಕಗಳನ್ನು ಗಳಿಸಿದರು ಎಂದು ಹೇಳಿದರು.

Akash Bobba
ಅಕ್ರಮ ವಲಸಿಗರನ್ನು ಭಾರತಕ್ಕೆ ಗಡಿಪಾರು ಮಾಡಲು ಯುಎಸ್ ಮಿಲಿಟರಿ ವಿಮಾನ ಬಳಕೆ: ಟ್ರಂಪ್ ಸರ್ಕಾರ ಕ್ರಮ

ಬೋಬಾ ಅವರ ಹೊರತಾಗಿ, DOGE ನಿಂದ ನೇಮಕಗೊಂಡ ಇತರ ಎಂಜಿನಿಯರ್‌ಗಳಲ್ಲಿ ಎಡ್ವರ್ಡ್ ಕೊರಿಸ್ಟೈನ್, ಲ್ಯೂಕ್ ಫಾರಿಟರ್, ಗೌಟಿಯರ್ ಕೋಲ್ ಕಿಲಿಯನ್, ಗ್ಯಾವಿನ್ ಕ್ಲಿಗರ್ ಮತ್ತು ಎಥಾನ್ ಶಾವೊಟ್ರಾನ್ ಸೇರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com