Prime Minister Narendra Modi and French President Emmanuel Macron during the inauguration of the Indian Consulate, in Marseille, France, Wednesday, Feb. 12, 2025.
ಫ್ರಾನ್ಸ್‌ನ ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್

ಭಾರತ-ಫ್ರಾನ್ಸ್ ಜಂಟಿಯಾಗಿ N-reactors, AI ಅಭಿವೃದ್ಧಿ: ಪ್ರಧಾನಿ ಮೋದಿ-ಅಧ್ಯಕ್ಷ ಮ್ಯಾಕ್ರನ್ ನಿರ್ಧಾರ

ಎರಡೂ ದೇಶಗಳ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು 'ತ್ರಿಕೋನ ಅಭಿವೃದ್ಧಿ'ಯ ಉದ್ದೇಶದ ಜಂಟಿ ಘೋಷಣೆಯೊಂದಿಗೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರವನ್ನು ಹೆಚ್ಚಿಸಲು ಮೋದಿ ಮತ್ತು ಮ್ಯಾಕ್ರನ್ ಸಹಮತಕ್ಕೆ ಬಂದಿದ್ದಾರೆ.
Published on

ನವದೆಹಲಿ: ಪರಮಾಣು ಶಕ್ತಿ ಮತ್ತು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವ ಯೋಜನೆಗಳನ್ನು ದೃಢಪಡಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಸಭೆ ನಡೆಸಿ ತಮ್ಮ ಕಾರ್ಯತಂತ್ರ ಸಹಭಾಗಿತ್ವವನ್ನು ಬಲಪಡಿಸಲು ನಿರ್ಧರಿಸಿದ್ದಾರೆ.

ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳು (SMRs) ಹಾಗೂ ಸುಧಾರಿತ ಮಾಡ್ಯುಲರ್ ರಿಯಾಕ್ಟರ್‌ಗಳನ್ನು (AMRs) ಅಭಿವೃದ್ಧಿಪಡಿಸಲು ಎರಡೂ ದೇಶಗಳು ಕೈಜೋಡಿಸಲಿವೆ. ಸುರಕ್ಷಿತ ಮತ್ತು ವಿಶ್ವಾಸಾರ್ಹ ಎಐಯನ್ನು ಅಭಿವೃದ್ಧಿಪಡಿಸಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡುತ್ತವೆ. ಫ್ರಾನ್ಸ್ ಈಗಾಗಲೇ ಎಐಯಲ್ಲಿ 110 ಬಿಲಿಯನ್ ಯುರೋಗಳಷ್ಟು ಹೂಡಿಕೆ ಮಾಡುವ ಯೋಜನೆಗಳನ್ನು ಘೋಷಿಸಿದೆ.

ಎರಡೂ ದೇಶಗಳ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು 'ತ್ರಿಕೋನ ಅಭಿವೃದ್ಧಿ'ಯ ಉದ್ದೇಶದ ಜಂಟಿ ಘೋಷಣೆಯೊಂದಿಗೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರವನ್ನು ಹೆಚ್ಚಿಸಲು ಮೋದಿ ಮತ್ತು ಮ್ಯಾಕ್ರನ್ ಸಹಮತಕ್ಕೆ ಬಂದಿದ್ದಾರೆ.

ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಂತರ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಫ್ರೆಂಚ್ ನಗರವಾದ ಮಾರ್ಸಿಲ್ಲೆಗೆ ಉಭಯ ನಾಯಕರು ಭೇಟಿ ನೀಡಿದರು, ಅಲ್ಲಿ ಮ್ಯಾಕ್ರನ್ ಪ್ರಧಾನಿ ಮೋದಿಗಾಗಿ ಖಾಸಗಿ ಭೋಜನವನ್ನು ಆಯೋಜಿಸಿದರು. ನಂತರ ಜಂಟಿಯಾಗಿ ಭಾರತದ ಕಾನ್ಸುಲೇಟ್ ಜನರಲ್ ಕಚೇರಿ ಉದ್ಘಾಟಿಸಿ ಅಂತಾರಾಷ್ಟ್ರೀಯ ಥರ್ಮೋನ್ಯೂಕ್ಲಿಯರ್ ಪ್ರಾಯೋಗಿಕ ರಿಯಾಕ್ಟರ್ (ITER) ಸೌಲಭ್ಯಕ್ಕೆ ಭೇಟಿ ನೀಡಿದರು.

ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳು ಹಾಗೂ ಸುಧಾರಿತ ಮಾಡ್ಯುಲರ್ ರಿಯಾಕ್ಟರ್‌ ಕ್ಷೇತ್ರವು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಾಗಿದೆ, ಇದು ಸಾಕಷ್ಟು ವೇಗವಾಗಿ ಮುಂದುವರೆದಿದೆ. ಎರಡೂ ದೇಶಗಳು ಇದನ್ನು ಮುಂದಿನ ದಿನಗಳಲ್ಲಿ ಮುಂದುವರಿಸಲು ನಿಜವಾದ ಸಾಧ್ಯತೆಗಳಿವೆ ಎಂದು ಭಾವಿಸುತ್ತಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಾರ್ಸಿಲ್ಲೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

Prime Minister Narendra Modi and French President Emmanuel Macron during the inauguration of the Indian Consulate, in Marseille, France, Wednesday, Feb. 12, 2025.
ಫ್ರಾನ್ಸ್ ಅಧ್ಯಕ್ಷರ ವಿಮಾನದಲ್ಲಿ ಮ್ಯಾಕ್ರನ್- ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ!

SMR ಗಳು ಮತ್ತು AMR ಗಳ ಬೇಡಿಕೆಯನ್ನು ನಿರ್ಣಾಯಕವೆಂದು ಗುರುತಿಸಲಾಗಿದೆ. AI ಗೆ ಅಪಾರ ಪ್ರಮಾಣದ ವಿದ್ಯುತ್ ಅಗತ್ಯವಿರುತ್ತದೆ. ಅಗತ್ಯವಿರುವ ವಿದ್ಯುತ್ ಪ್ರಮಾಣವು ಸುಸ್ಥಿರವಾಗಬೇಕಾದರೆ, ಅದು ಪರಮಾಣು ಶಕ್ತಿ ಚಾಲಿತ ವಿದ್ಯುತ್‌ನಂತಿರಬೇಕು. SMR ಗಳು ಮತ್ತು AMR ಗಳು ಪ್ರಮುಖ ಪಾತ್ರ ವಹಿಸಬಹುದಾದ ಕ್ಷೇತ್ರ ಎಂದು ಹೇಳಿದರು.

ತ್ರಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದಂತೆ, ಭಾರತ ಮತ್ತು ಫ್ರಾನ್ಸ್ ನಮ್ಮ ಆಯಾ ಸಾಮರ್ಥ್ಯಗಳನ್ನು ನಾವು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನೋಡುವ ಮೂಲಕ, ಹಣಕಾಸಿನ ಬೆಂಬಲ ಅಥವಾ ತಾಂತ್ರಿಕ ಸಹಯೋಗ ಅಥವಾ ಸಾಮರ್ಥ್ಯ-ನಿರ್ಮಾಣ ಸಹಯೋಗದ ವಿಷಯದಲ್ಲಿ ಮೂರನೇ ದೇಶಗಳಲ್ಲಿ ಯೋಜನೆಗಳನ್ನು ತಲುಪಿಸಲು ನೋಡುತ್ತವೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com