ಶ್ವೇತಭವನದ ಮೇಲೆ ದಾಳಿಗೆ ಯತ್ನ: ಭಾರತೀಯ ಮೂಲದ ಮಿಸ್ಸೌರಿ ವ್ಯಕ್ತಿಗೆ 8 ವರ್ಷ ಜೈಲುಶಿಕ್ಷೆ

ಕಂಡುಲಾ ಅಮೆರಿಕಾ ಸರ್ಕಾರದ ಮೇಲೆ ದಾಳಿ ಮಾಡಿ ನಾಶಮಾಡಲು ಬಯಸಿದ್ದನು ಎಂದು ಅಭಿಯೋಜಕರು ಹೇಳಿದ್ದಾರೆ.
ಶ್ವೇತಭವನದ ಮೇಲೆ ದಾಳಿಗೆ ಯತ್ನ: ಭಾರತೀಯ ಮೂಲದ ಮಿಸ್ಸೌರಿ ವ್ಯಕ್ತಿಗೆ 8 ವರ್ಷ ಜೈಲುಶಿಕ್ಷೆ
Updated on

ವಾಷಿಂಗ್ಟನ್: ಅಮೆರಿಕಾದ ಶಕ್ತಿಕೇಂದ್ರ ಶ್ವೇತಭವನವನ್ನು ರಕ್ಷಿಸುವ ತಡೆಗೋಡೆಗಳಿಗೆ ಬಾಡಿಗೆ ಟ್ರಕ್ ನ್ನು ಡಿಕ್ಕಿ ಹೊಡೆದ ಮಿಸೌರಿಯ ವ್ಯಕ್ತಿಯೊಬ್ಬನಿಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ, ಈ ದಾಳಿಯು ನಾಝಿ ಸಿದ್ಧಾಂತದ ಮೇಲಿನ ಆಕರ್ಷಣೆಯಿಂದ ಪ್ರೇರಿತವಾಗಿದೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ ಎಂದು ನ್ಯಾಯಾಲಯದ ದಾಖಲೆಗಳು ತೋರಿಸುತ್ತವೆ.

ಈ ಘಟನೆ ನಡೆದ ಸಂದರ್ಭದಲ್ಲಿ 19 ವರ್ಷದವನಾಗಿದ್ದ ಸಾಯಿ ವರ್ಷಿತ್ ಕಂಡುಲಾ, ಯು-ಹಾಲ್ ಬಾಕ್ಸ್ ಟ್ರಕ್ ನ್ನು ಪಾದಚಾರಿ ಮಾರ್ಗಕ್ಕೆ ಮತ್ತು ಶ್ವೇತಭವನದ ಉತ್ತರಕ್ಕೆ ಇರುವ ಲಫಯೆಟ್ಟೆ ಚೌಕಕ್ಕೆ ವಾಹನಗಳು ಪ್ರವೇಶಿಸುವುದನ್ನು ತಡೆಯುವ ಲೋಹದ ಬೋಲಾರ್ಡ್‌ ಕಡೆಗೆ ತಿರುಗಿಸಿದಾಗ ಪಾರ್ಕ್ ಬೆಂಚ್ ಪಕ್ಕದಲ್ಲಿ ನಿಂತಿದ್ದ ಇಬ್ಬರು ಡಿಕ್ಕಿ ಹೊಡೆದ ರಭಸಕ್ಕೆ ಬಿದ್ದು ಪ್ರಾಣಾಪಾಯವಾಗುವ ಸಾಧ್ಯತೆಗಳಿದ್ದವು. ಮೇ 22, 2023 ರಂದು ಸಂಭವಿಸಿದ ಈ ಅಪಘಾತದ ನಂತರ ನಾಝಿ ಧ್ವಜವನ್ನು ಹೊರತೆಗೆದರು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ.

ಕಂಡುಲಾ ಅಮೆರಿಕಾ ಸರ್ಕಾರದ ಮೇಲೆ ದಾಳಿ ಮಾಡಿ ನಾಶಮಾಡಲು ಬಯಸಿದ್ದನು ಎಂದು ಅಭಿಯೋಜಕರು ಹೇಳುತ್ತಾರೆ. ಅಮೆರಿಕದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ತೊಡೆದುಹಾಕಲು ಮತ್ತು ಸರ್ಕಾರವನ್ನು ನಾಝಿ ಶೈಲಿಯ ಸರ್ವಾಧಿಕಾರದಿಂದ ಬದಲಾಯಿಸಲು ಬಯಸಿದ್ದರು ಎಂದು ಬರೆದಿದ್ದಾರೆ.

ಶ್ವೇತಭವನದ ಮೇಲೆ ದಾಳಿಗೆ ಯತ್ನ: ಭಾರತೀಯ ಮೂಲದ ಮಿಸ್ಸೌರಿ ವ್ಯಕ್ತಿಗೆ 8 ವರ್ಷ ಜೈಲುಶಿಕ್ಷೆ
ಬೆಂಗಳೂರಲ್ಲಿ ಅಮೆರಿಕಾ ರಾಯಭಾರ ಕಚೇರಿ: ವರ್ಷಗಳ ಸತತ ಯತ್ನ ಅಂತಿಮವಾಗಿ ಸಾಕಾರಗೊಂಡಿದೆ- HDK

ಅಮೆರಿಕದ ಜಿಲ್ಲಾ ನ್ಯಾಯಾಧೀಶ ಡಾಬ್ನಿ ಫ್ರೆಡ್ರಿಕ್ ಕೂಡ ಕಾಂಡುಲಾಗೆ ಜೈಲು ಶಿಕ್ಷೆಯ ನಂತರ ಮೂರು ವರ್ಷಗಳ ಮೇಲ್ವಿಚಾರಣೆಯ ಬಿಡುಗಡೆ ಶಿಕ್ಷೆಯನ್ನು ವಿಧಿಸಿದರು. ನ್ಯಾಯಾಲಯದ ದಾಖಲೆಗಳ ಪ್ರಕಾರ ಸುಮಾರು 57,000 ಡಾಲರ್ ಪರಿಹಾರವನ್ನು ಪಾವತಿಸಲು ಆದೇಶಿಸಿದರು. ಆಸ್ತಿ ಹಾನಿ ಆರೋಪದಲ್ಲಿ ಮೇ ತಿಂಗಳಲ್ಲಿ ತಪ್ಪೊಪ್ಪಿಕೊಂಡ ಕಂಡೂಲಾಗೆ ಎಂಟು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಾಸಿಕ್ಯೂಟರ್‌ ಶಿಫಾರಸು ಮಾಡಿದ್ದು ಆತ ಈಗ ಬಂಧನದಲ್ಲಿದ್ದಾರೆ.

ಅಪಘಾತಕ್ಕೆ ಕೆಲವೇ ಗಂಟೆಗಳ ಮೊದಲು ಸೇಂಟ್ ಲೂಯಿಸ್‌ನಿಂದ ವಾಷಿಂಗ್ಟನ್ ಡಿ.ಸಿ.ಗೆ ವಿಮಾನ ಏರುವ ಮೊದಲು ಕಾಂಡುಲಾ ವಾರಗಳ ಕಾಲ ದಾಳಿಯನ್ನು ಯೋಜಿಸಿದ್ದನುನಎಂದು ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ. ಟ್ರಕ್ ನ್ನು ತಡೆಗೋಡೆಗಳಿಗೆ ಡಿಕ್ಕಿ ಹೊಡೆಯುವ ಸುಮಾರು ಮೂರು ಗಂಟೆಗಳ ಮೊದಲು ವರ್ಜೀನಿಯಾದ ಹೆರ್ನ್‌ಡನ್‌ನಲ್ಲಿ ಬಾಡಿಗೆಗೆ ಪಡೆದಿದ್ದನು. ಕಂಡುಲಾ ಹಿಂದಕ್ಕೆ ಸರಿದು ಎರಡನೇ ಬಾರಿಗೆ ಬೋಲಾರ್ಡ್‌ಗಳಿಗೆ ಡಿಕ್ಕಿ ಹೊಡೆದ ನಂತರ, ಟ್ರಕ್ ತನ್ನ ಎಂಜಿನ್ ವಿಭಾಗದಿಂದ ಹೊಗೆಯಾಡಲು ಪ್ರಾರಂಭಿಸಿ ದ್ರವಗಳು ಸೋರಿಕೆಯಾಗಲು ಪ್ರಾರಂಭಿಸಿತು.

ಶ್ವೇತಭವನದ ಮೇಲೆ ದಾಳಿಗೆ ಯತ್ನ: ಭಾರತೀಯ ಮೂಲದ ಮಿಸ್ಸೌರಿ ವ್ಯಕ್ತಿಗೆ 8 ವರ್ಷ ಜೈಲುಶಿಕ್ಷೆ
ಬೆಂಗಳೂರಲ್ಲಿ ಅಮೆರಿಕಾ ರಾಯಭಾರ ಕಚೇರಿ: BJP-ಕಾಂಗ್ರೆಸ್ ನಡುವೆ ಕ್ರೆಡಿಟ್ ವಾರ್!

ಅವನ ಬಳಿ ಯಾವುದೇ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಅಥವಾ ಸ್ಫೋಟಕಗಳು ಕಂಡುಬಂದಿಲ್ಲ. ಜುಲೈ 13 ರಂದು ಪೆನ್ಸಿಲ್ವೇನಿಯಾದಲ್ಲಿ ನಡೆದ ರ್ಯಾಲಿಯಲ್ಲಿ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಯತ್ನಿಸಿದ್ದು ಅಂತಹ ವಿನಾಶಕಾರಿ ಉದ್ದೇಶವನ್ನು ಹೊಂದಿರುವ ವ್ಯಕ್ತಿಗಳು ಅಮೆರಿಕದ ರಾಜಕೀಯ ವ್ಯವಸ್ಥೆಗೆ ಗಂಭೀರ ಹಾನಿಯನ್ನುಂಟುಮಾಡುವ ಸಾಮರ್ಥ್ಯ ಹೊಂದಿದ್ದಾನೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.

ಅಪಘಾತದ ನಂತರದ ದೃಶ್ಯಗಳನ್ನು ಪೊಲೀಸ್ ಬಾಡಿ ಕ್ಯಾಮೆರಾ ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಬಂಧನದ ನಂತರ, ನಾಝಿಗಳಿಗೆ ಉತ್ತಮ ಇತಿಹಾಸವಿದೆ ಎಂಬ ಕಾರಣಕ್ಕಾಗಿ ತಾನು ಸ್ವಸ್ತಿಕ ಧ್ವಜವನ್ನು ಖರೀದಿಸಿದ್ದೇನೆ ಎಂದು ಕಂಡುಲಾ ತನಿಖಾಧಿಕಾರಿಗಳಿಗೆ ತಿಳಿಸಿದ್ದನು.

ಕಂಡುಲಾ ಬಂಧನದ ನಂತರ, ಇಬ್ಬರು ಮನಶ್ಶಾಸ್ತ್ರಜ್ಞರು ರೋಸೆನ್‌ಬ್ಲಮ್ ಪ್ರಕಾರ, ಆತನಿಗೆ ಸ್ಕಿಜೋಫ್ರೇನಿಯಾ ಇದೆ ಎಂದು ರೋಗನಿರ್ಣಯ ಮಾಡಿದರು. ಕಂಡುಲಾ ಶಿಕ್ಷೆಯಿಂದಾಗಿ ಆತನನ್ನು ಭಾರತಕ್ಕೆ ಗಡೀಪಾರು ಮಾಡುವ ಸಾಧ್ಯತೆ ಇದೆ ಎಂದು ರೋಸೆನ್‌ಬ್ಲಮ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com