ಸುಳ್ಳು ಸುದ್ದಿ ಪ್ರಕಟ: ಮಾಧ್ಯಮ ದಿಗ್ಗಜ ರೂಪರ್ಟ್ ಮರ್ಡೋಕ್, ವಾಲ್ ಸ್ಟ್ರೀಟ್ ಜರ್ನಲ್ ವಿರುದ್ಧ ಟ್ರಂಪ್ ಮಾನನಷ್ಟ ಮೊಕದ್ದಮೆ

ಡೊನಾಲ್ಡ್ ಟ್ರಂಪ್ ಅವರು ಡೌ ಜೋನ್ಸ್, ನ್ಯೂಸ್ ಕಾರ್ಪ್, ರೂಪರ್ಟ್ ಮುರ್ಡೋಕ್ ಹಾಗೂ ‘ದಿ ವಾಲ್ ಸ್ಟ್ರೀಟ್ ಜರ್ನಲ್’ನ ಇಬ್ಬರು ವರದಿಗಾರರ ವಿರುದ್ಧ ಮಿಯಾಮಿ ಫೆಡರಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.
Donald trump
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಮಾಧ್ಯಮ ದಿಗ್ಗಜ ರೂಪರ್ಟ್ ಮರ್ಡೋಕ್, ವಾಲ್ ಸ್ಟ್ರೀಟ್ ಜರ್ನಲ್ ವಿರುದ್ಧ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 10 ಬಿಲಿಯನ್ ಡಾಲರ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಡೌ ಜೋನ್ಸ್, ನ್ಯೂಸ್ ಕಾರ್ಪ್, ರೂಪರ್ಟ್ ಮುರ್ಡೋಕ್ ಹಾಗೂ ‘ದಿ ವಾಲ್ ಸ್ಟ್ರೀಟ್ ಜರ್ನಲ್’ನ ಇಬ್ಬರು ವರದಿಗಾರರ ವಿರುದ್ಧ ಮಿಯಾಮಿ ಫೆಡರಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಲೈಂಗಿಕ ಅಪರಾಧದಲ್ಲಿ ಶಿಕ್ಷೆಗೆ ಒಳಗಾಗಿದ್ದ ಜೆಫ್ರಿ ಎಪ್ಸ್ಟೀನ್ ಎಂಬಾತನಿಗೆ 2003ರಲ್ಲಿ ಡೊನಾಲ್ಡ್ ಟ್ರಂಪ್ ಅವರು ಹುಟ್ಟುಹಬ್ಬದ ಶುಭಾಶಯ ಕೋರಿರುವ ಬಗ್ಗೆ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು. ಇದರಲ್ಲಿ ಆಕ್ಷೇಪಾರ್ಹ ಚಿತ್ರ ಮತ್ತು ರಹಸ್ಯಗಳ ಉಲ್ಲೇಖವಿತ್ತು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆಂದು ಮೂಲಗಳು ತಿಳಿಸಿವೆ.

ಮಾನನಷ್ಟ ಮೊಕದ್ದಮೆ ಹೂಡಿರುವ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್ ಅವರು, ‘ದಿ ವಾಲ್ ಸ್ಟ್ರೀಟ್ ಜರ್ನಲ್ ಎಂಬ ನಿಷ್ಪ್ರಯೋಜಕ ಪತ್ರಿಕೆಯಲ್ಲಿ ಸುಳ್ಳು, ದುರುದ್ದೇಶಪೂರಿತ, ಮಾನಹಾನಿಕರ, ನಕಲಿ ಸುದ್ದಿ ಪ್ರಕಟಿಸುವಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ವಿರುದ್ಧ ನಾವು ಮೊಕದ್ದಮೆ ಹೂಡಿದ್ದೇವೆ. ಹಾಗೆಯೇ ರೂಪರ್ಟ್ ಮುರ್ಡೋಕ್ ಮತ್ತು ರಾಬರ್ಟ್ ಥಾಮ್ಸನ್ ಮಾಲೀಕತ್ವದ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ನಾವು ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠವಾಗಿಸುತ್ತೇವೆಂದು ಹೇಳಿದ್ದಾರೆ.

Donald trump
ಇಂಡೋ-ಪಾಕ್ ಸಂಘರ್ಷದ ವೇಳೆ 5 ಜೆಟ್‌ ನಾಶ; ವ್ಯಾಪಾರ ಬೆದರಿಕೆ ಹಾಕಿ ಯುದ್ಧ ನಿಲ್ಲಿಸಿದೆವು: ಟ್ರಂಪ್ ಪುನರುಚ್ಚಾರ; Video

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com