
ಲಂಡನ್: ಸುಮಾರು ಒಂದು ದಶಕದ ನಂತರ ಅಪರೂಪಕ್ಕೆ ಎಂಬಂತೆ ಪಾಡ್‌ಕ್ಯಾಸ್ಟ್ ಸಂದರ್ಶನವೊಂದರಲ್ಲಿ ಮೌನ ಮುರಿದಿರುವ ಲಿಕ್ಕರ್ ಉದ್ಯಮಿ ಹಾಗೂ ಕಿಂಗ್ ಫಿಶರ್ ಏರ್ ಲೈನ್ಸ್ ಮಾಜಿ ಮುಖ್ಯಸ್ಥ ವಿಜಯ್ ಮಲ್ಯ, ಬ್ಯಾಂಕುಗಳಿಗೆ ಸಾಲ ಮರು ಪಾವತಿ ಮಾಡುವುದೇ ನನ್ನ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ ಶಾಮಾನಿ ಅವರ ಪಾಡ್‌ಕ್ಯಾಸ್ಟ್ ನಲ್ಲಿ ನಾಲ್ಕು ಗಂಟೆಗಳ ವಿಜಯ್ ಮಲ್ಯ ಅವರ ಸಂದರ್ಶನದ ಎಪಿಸೋಡ್ ಈ ವಾರ ಬಿಡುಗಡೆಯಾಗಿದ್ದು, ಅವರು ತನ್ನ ಕಾನೂನು ಹೋರಾಟವನ್ನು ಸಮರ್ಥಿಸಿಕೊಂಡಿದ್ದಾರೆ.
ಮಾಧ್ಯಮಗಳು ನಿರಂತರ ಟೀಕೆ:
ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ವಿಜಯ್ ಮಲ್ಯ, ನ್ಯಾಯಯುತ ವಿಚಾರಣೆ ನಂತರ ಭಾರತಕ್ಕೆ ಮರಳುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ. ನನ್ನನ್ನು ವಿವಿಧ ಹೆಸರುಗಳಿಂದ ಕರೆದು ನಿಂದಿಸಲಾಗಿದೆ. ಜನರ ಕೋಪ ಹೆಚ್ಚಾಗುವಂತೆ ಅಸ್ತ್ರವಾಗಿ ಬಳಸಲಾಗುತ್ತಿದೆ. ಮಾಧ್ಯಮಗಳು ನಿರಂತರವಾಗಿ ಟೀಕೆ ಮಾಡುತ್ತಿವೆ. ಆದರೆ, ಕಿಂಗ್‌ಫಿಷರ್ ಏರ್‌ಲೈನ್ಸ್‌ಗಾಗಿ ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡುವುದೇ ನನ್ನ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ರೂ.14,100 ಕೋಟಿ ಮರುಪಾವತಿ:
ಇತ್ತೀಚಿನ ಹಣಕಾಸು ಸಚಿವಾಲಯದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, 6,203 ಕೋಟಿ ರೂಪಾಯಿ ಸಾಲ ವಸೂಲಾತಿ ನ್ಯಾಯಮಂಡಳಿ ತೀರ್ಪಿನ ಎರಡು ಪಟ್ಟು ಹೆಚ್ಚು ಅಂದರೆ 14,100 ಕೋಟಿ ರೂ. ಸಾಲ ಮರುಪಾವತಿ ಮಾಡಿಸಿಕೊಂಡಿರುವುದಾಗಿ ಹೇಳಿದೆ. ನಾನು ನಿಜವಾಗಿಯೂ ಬ್ಯಾಂಕ್‌ಗಳಿಗೆ ವಂಚನೆ ಮಾಡಿದ್ದರೆ, ಸರ್ಕಾರ ಅಷ್ಟು ಹಣವನ್ನು ಹೇಗೆ ವಸೂಲಿ ಮಾಡಿತು?" ಅವರು ಕೇಳಿದರು.
2008 ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ವಿಮಾನಯಾನವನ್ನು ಕಡಿಮೆ ಮಾಡದಂತೆ ಕೇಳಿದ್ದಕ್ಕಾಗಿ ಅಂದಿನ ಸರ್ಕಾರದ ಮೇಲೆ ಆರೋಪ ಹೊರಿಸಿದ ಮಲ್ಯ, ಆಗಿನ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರೊಂದಿಗಿನ ಮಾತುಕತೆಯನ್ನು ನೆನಪಿಸಿಕೊಂಡರು. ಬ್ಯಾಂಕುಗಳ ಸಾಲ ನೀಡುವ ಭರವಸೆಯೊಂದಿಗೆ
ಸಂಪರ್ಕ ಮತ್ತು ಉದ್ಯೋಗದ ಸಲುವಾಗಿ ಏರ್ ಲೈನ್ಸ್ ಕಾರ್ಯಾಚರಣೆ ನಡೆಸುವಂತೆ ಕೇಳಿಕೊಂಡಿದ್ದರು ಎಂದು ಅವರು ಆರೋಪಿಸಿದರು.
ಏರ್ ಡೆಕ್ಕನ್ ಸ್ವಾಧೀನ: 2007 ರಲ್ಲಿ ಕಡಿಮೆ-ವೆಚ್ಚದ ಏರ್ ಡೆಕ್ಕನ್ ಸ್ವಾಧೀನವನ್ನು ಸಮರ್ಥಿಸಿಕೊಂಡ ಮಲ್ಯ. ಇದು ಸಮರ್ಥನೀಯವಲ್ಲದ ರೂ.1 ನೀಡುವ ಮಾರುಕಟ್ಟೆ ಅಡ್ಡಿಯನ್ನು ತೊಡೆದುಹಾಕಲು ಒಂದು ಕಾರ್ಯತಂತ್ರದ ಕ್ರಮವಾಗಿದೆ. ಇದು ಗ್ರಾಹಕರ ನಿರೀಕ್ಷೆಗಳನ್ನು ಹಾಳು ಮಾಡಿತ್ತು. ಉದ್ಯಮವನ್ನು ಅವನತಿ ಅಂಚಿನತ್ತ ತಳ್ಳಿತ್ತು ಎಂದು ಹೇಳಿದರು.
ಇದೀಗ ಲಂಡನ್‌ನಲ್ಲಿ ನೆಲೆಸಿರುವ ಮಲ್ಯ, ಭಾರತಕ್ಕೆ ಹಸ್ತಾಂತರದ ವಿರುದ್ಧ ಯುಕೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದು, ಕಿಂಗ್‌ಫಿಶರ್ ಏರ್‌ಲೈನ್ಸ್‌ನ ದೊಡ್ಡ ಕೊಡುಗೆ ಎಂದರೆ ಹಲವಾರು ಹೊಸ ವಿಮಾನಯಾನ ಮಾರ್ಗಗಳನ್ನು ತೆರೆದಿದೆ ಎಂದು ತಿಳಿಸಿದರು.
ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆ: ಅದ್ದೂರಿ 60 ನೇ ಹುಟ್ಟುಹಬ್ಬದ ಪಾರ್ಟಿ ಮತ್ತು ಸಾಗರೋತ್ತರ ಹೂಡಿಕೆ ಸೇರಿದಂತೆ ತಮ್ಮ ಜೀವನಶೈಲಿಗಳಿಂದ ನಾಗರಿಕರು ಆಕ್ರೋಶಗೊಂಡದ್ದಾರೆ. ವಿಮಾನಯಾನದ ವೈಫಲ್ಯಕ್ಕಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆ. ನ್ಯಾಯಯುತ ವಿಚಾರಣೆಯ ಭರವಸೆ ನೀಡಿದರೆ ಭಾರತಕ್ಕೆ ಮರಳುವ ಇಚ್ಚೆ ವ್ಯಕ್ತಪಡಿಸಿದರು.
Advertisement