
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಲು ಮಧ್ಯಸ್ಥಿಕೆ ವಹಿಸಿದ ಪಾತ್ರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ಇದರಲ್ಲಿ ಉದ್ಯಮವನ್ನು ಆಯುಧವಾಗಿ ಬಳಸಿಕೊಂಡಿದ್ದು, ಎರಡೂ ದೇಶಗಳು ಯುದ್ಧವನ್ನು ತಕ್ಷಣವೇ ನಿಲ್ಲಿಸಲು ಕಾರಣವಾಯಿತು ಎಂದು ಹೇಳಿದ್ದಾರೆ.
ಅಮೆರಿಕವು ಎರಡು ದೇಶಗಳ ನಡುವೆ ಮಧ್ಯಪ್ರವೇಶಿಸದಿದ್ದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವು ಪರಮಾಣು ಯುದ್ಧವಾಗುತ್ತಿತ್ತು ಎಂದು ಟ್ರಂಪ್ ಹೇಳಿದ್ದಾರೆ.
ನಾನು ಬಹಳ ಉತ್ತಮ ಕೆಲಸ ಮಾಡಿದ್ದೇನೆ, ಆದರೆ ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ, ಆದರೆ ನಾವು ಒಂದು ದೊಡ್ಡ ಸಮಸ್ಯೆಯನ್ನು ಪರಿಹರಿಸಿದ್ದೇವೆ, ಭಾರತ ಮತ್ತು ಪಾಕಿಸ್ತಾನದೊಂದಿಗೆ ಸಂಭಾವ್ಯವಾಗಿ ಪರಮಾಣು ಸಮಸ್ಯೆ. ನಾನು ಪಾಕಿಸ್ತಾನದೊಂದಿಗೆ ಮಾತನಾಡಿದೆ, ಭಾರತದೊಂದಿಗೂ ಮಾತನಾಡಿ ಸಮಸ್ಯೆ ಬಗೆಹರಿಸಿದೆ ಎಂದು ಟ್ರಂಪ್ ಏರ್ ಫೋರ್ಸ್ ಒನ್‌ನಲ್ಲಿ ವರದಿಗಾರರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನದ ನಾಯಕತ್ವವನ್ನು ಶ್ಲಾಘಿಸಿದ ಟ್ರಂಪ್, ಎರಡೂ ಪರಮಾಣು ರಾಷ್ಟ್ರಗಳು, ಬಲವಾದ ಪರಮಾಣು ರಾಷ್ಟ್ರಗಳಾಗಿದ್ದು, ನಾನು ವ್ಯಾಪಾರದ ಬಗ್ಗೆ ಮಾತನಾಡಿದೆ. ನೀವು ಪರಸ್ಪರ ಯುದ್ಧ ಮಾಡಿದರೆ ನಮ್ಮ ದೇಶ ಉದ್ಯಮ ಸ್ಥಗಿತಗೊಳಿಸುತ್ತದೆ ಎಂದು ಎಚ್ಚರಿಸಿದೆ ಎಂದರು.
ಆ ತಕ್ಷಣವೇ ಕದನ ವಿರಾಮ ಘೋಷಿಸಿದರು. ಇಲ್ಲದಿದ್ದರೆ ಭಾರತ-ಪಾಕ್ ಮಧ್ಯೆ ಪರಿಸ್ಥಿತಿ ಇನ್ನೂ ಹೆಚ್ಚಿನದಕ್ಕೆ ಹೋಗುತ್ತಿತ್ತು, ಪರಮಾಣು ಯುದ್ಧದವರೆಗೆ ಹೋಗುತ್ತಿತ್ತು. ನಾವು ಅದನ್ನು ನಿಲ್ಲಿಸಿದ್ದೇವೆ, ಪಾಕಿಸ್ತಾನ ಮತ್ತು ಭಾರತದ ಎರಡೂ ದೇಶಗಳ ನಾಯಕರನ್ನು ನಾನು ಶ್ಲಾಘಿಸಲು ಬಯಸುತ್ತೇನೆ ಎಂದರು.
Advertisement