ಭಾರತದ ಜೊತೆ ಉತ್ತಮ ಸಂಬಂಧ ಬಯಸಿದಾಗಲೆಲ್ಲಾ ಏನೋ ತಪ್ಪಾಗುತ್ತದೆ: ಬಾಂಗ್ಲಾ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್

ನಾವು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತೇವೆ ಭಾರತ ನಮ್ಮ ನೆರೆಯ ರಾಷ್ಟ್ರ, ಅವರೊಂದಿಗೆ ಯಾವುದೇ ರೀತಿಯ ಮೂಲಭೂತ ಸಮಸ್ಯೆಯನ್ನು ಹೊಂದಲು ನಾವು ಬಯಸುವುದಿಲ್ಲ ಎಂದು ಯೂನಸ್ ಹೇಳಿದರು.
Bangladesh's interim leader Muhammad Yunus.
ಮೊಹಮ್ಮದ್ ಯೂನಸ್
Updated on

ಢಾಕಾ: ತಮ್ಮ ಮಧ್ಯಂತರ ಸರ್ಕಾರವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತಿತ್ತು, ಆದರೆ ಯಾವಾಗಲೂ ಏನೋ ತಪ್ಪಾಗುತ್ತಿತ್ತು ಎಂದು ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಹೇಳಿದ್ದಾರೆ.

ಬುಧವಾರ ಲಂಡನ್‌ನಲ್ಲಿ ಚಾಥಮ್ ಹೌಸ್ ಥಿಂಕ್ ಟ್ಯಾಂಕ್ ನಿರ್ದೇಶಕ ಬ್ರಾನ್ವೆನ್ ಮ್ಯಾಡಾಕ್ಸ್ ಅವರೊಂದಿಗಿನ ಸಂವಾದದ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳು ಮತ್ತು ಮುಂದಿನ ತಿಂಗಳು 'ಜುಲೈ ಚಾರ್ಟರ್' ನಿಂದ ಪ್ರಾರಂಭವಾಗುವ ದೇಶದ ಪ್ರಜಾಪ್ರಭುತ್ವದ ಮಾರ್ಗಸೂಚಿ ಸೇರಿದಂತೆ ಹಲವು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿದರು.

ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಕೋರಿ ಭಾರತಕ್ಕೆ ನೀಡಲಾದ ಅನೌಪಚಾರಿಕ ರಾಜತಾಂತ್ರಿಕ ಟಿಪ್ಪಣಿಯನ್ನು ಮ್ಯಾಡಾಕ್ಸ್ ಉಲ್ಲೇಖಿಸಿ ಹೊಸ ಅಪ್ ಡೇಟ್ ಬಗ್ಗೆ ಮಾಹಿತಿ ಕೋರಿದರು.

ಇಡೀ ಪ್ರಕ್ರಿಯೆಯು ತುಂಬಾ ಕಾನೂನುಬದ್ಧವಾಗಿರಬೇಕು, ತುಂಬಾ ಸರಿಯಾಗಿರಬೇಕು ಎಂದು ನಾವು ಬಯಸುತ್ತೇವೆ. ನಾವು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತೇವೆ ಭಾರತ ನಮ್ಮ ನೆರೆಯ ರಾಷ್ಟ್ರ, ಅವರೊಂದಿಗೆ ಯಾವುದೇ ರೀತಿಯ ಮೂಲಭೂತ ಸಮಸ್ಯೆಯನ್ನು ಹೊಂದಲು ನಾವು ಬಯಸುವುದಿಲ್ಲ ಎಂದು ಯೂನಸ್ ಹೇಳಿದರು.

ಆದರೆ ಭಾರತೀಯ ಪತ್ರಿಕೆಗಳಿಂದ ಬರುವ ಎಲ್ಲಾ ನಕಲಿ ಸುದ್ದಿಗಳಿಂದಾಗಿ ಪ್ರತಿ ಬಾರಿಯೂ ವಿಷಯಗಳು ತಪ್ಪಾಗುತ್ತವೆ ಎಂದು ಅವರು ಹೇಳಿದರು.

Bangladesh's interim leader Muhammad Yunus.
ಭಾರತದ ಜೊತೆ ಯುದ್ಧಕ್ಕೆ ಸಿದ್ದವಾಗಿದ್ದ ಯೂನಸ್; ಯೋಜನೆ ವಿಫಲಗೊಳಿಸಿದ್ದೇಗೆ ಬಾಂಗ್ಲಾ ಸೇನಾ ಮುಖ್ಯಸ್ಥ!

ಇದು ಬಾಂಗ್ಲಾದೇಶವನ್ನು ತುಂಬಾ ಕೋಪಗೊಳ್ಳುವಂತೆ ಮಾಡುತ್ತದೆ. ನಾವು ಈ ಕೋಪವನ್ನು ಹೋಗಲಾಡಿಸಲು ಪ್ರಯತ್ನಿಸುತ್ತೇವೆ ಆದರೆ ಸೈಬರ್‌ಸ್ಪೇಸ್‌ನಲ್ಲಿ ಹಲವಾರು ವಿಷಯಗಳು ನಡೆಯುತ್ತಲೇ ಇರುತ್ತವೆ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದ್ದಕ್ಕಿದ್ದಂತೆ ಅವರು ಏನನ್ನಾದರೂ ಹೇಳುತ್ತಾರೆ, ಏನಾದರೂ ಮಾಡುತ್ತಾರೆ, ಮತ್ತೆ ಕೋಪ ಬರುತ್ತದೆ ಎಂದು ಅವರು ಹೇಳಿದರು.

ಇದು ನಮ್ಮ ದೊಡ್ಡ ಕೆಲಸ, ನಮ್ಮ ಜೀವನವನ್ನು ಮುಂದುವರಿಸಲು ಕನಿಷ್ಠ ಶಾಂತಿಯುತ ಜೀವನವನ್ನು ಹೊಂದಬಹುದೆಂದು ಖಚಿತಪಡಿಸಿಕೊಳ್ಳುವುದು. ನಾವು ಕನಸು ಕಾಣುತ್ತಿರುವ ಜೀವನವನ್ನು ಸೃಷ್ಟಿಸುವುದು" ಎಂದು ಅವರು ಹೇಳಿದರು ಹಸೀನಾ ಬಗ್ಗೆ "ಭಾರತದ ಅಸ್ಪಷ್ಟ ಪಾತ್ರ"ದ ಬಗ್ಗೆ ಪ್ರೇಕ್ಷಕರ ಪ್ರಶ್ನೆಗೆ ಉತ್ತರಸಿದ, ಯೂನಸ್ ಹೀಗೆ ಪ್ರತಿಕ್ರಿಯಿಸಿದರು: "(ಹಸೀನಾ ವಿರುದ್ಧ) ಎಲ್ಲಾ ಕೋಪವು ಈಗ ಭಾರತಕ್ಕೆ ವರ್ಗಾಯಿಸಲ್ಪಟ್ಟಿದೆ ಏಕೆಂದರೆ ಅವರು ಅಲ್ಲಿಗೆ ಹೋಗಿದ್ದಾರೆ ಎಂದರು.

ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ನನಗೆ ಅವಕಾಶ ಸಿಕ್ಕಾಗ, ನಾನು ಹೇಳಿದೆ, ನೀವು ಅವರಿಗೆ ಆತಿಥ್ಯ ವಹಿಸಲು ಬಯಸುತ್ತೀರಿ, ಆ ನೀತಿಯನ್ನು ತ್ಯಜಿಸಲು ನಾನು ನಿಮ್ಮನ್ನು ಒತ್ತಾಯಿಸಲು ಸಾಧ್ಯವಿಲ್ಲ. ಆದರೆ ಬಾಂಗ್ಲಾದೇಶದ ಜನರೊಂದಿಗೆ ಅವರು ಆನ್ ಲೈನ್ ನಲ್ಲಿ ಮಾತನಾಡದಂತೆ ನೋಡಿಕೊಳ್ಳಲು ದಯವಿಟ್ಟು ನಮಗೆ ಸಹಾಯ ಮಾಡಿ. ಅವರು ಅಂತಹ ದಿನಾಂಕ, ಅಂತಹ ಸಮಯದಲ್ಲಿ ಮಾತನಾಡುತ್ತಾರೆ ಎಂದು ಘೋಷಿಸಿದಾಗ ಇಡೀ ಬಾಂಗ್ಲಾದೇಶವು ತುಂಬಾ ಕೋಪಗೊಳ್ಳುತ್ತದೆ,ಎಂದು ಅವರು ಹೇಳಿದರು. ಹಸೀನಾ ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ಯೂನುಸ್ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com