
ಮಾಸ್ಕೋ: ಇರಾನ್‌ನಲ್ಲಿ ಆಡಳಿತ ಬದಲಾವಣೆ 'ಸ್ವೀಕಾರಾರ್ಹವಲ್ಲ' ಎಂದು ರಷ್ಯಾ ಹೇಳಿದೆ.
ಇರಾನ್ ನ ಸರ್ವೋಚ್ಚ ನಾಯಕನ ಹತ್ಯೆ 'ಇನ್ನಷ್ಟು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸಂದರ್ಶನದಲ್ಲಿ ಸ್ಕೈ ನ್ಯೂಸ್‌ಗೆ ತಿಳಿಸಿದ್ದಾರೆ.
ಅಮೆರಿಕದ ನೆರವಿನೊಂದಿಗೆ ಇಸ್ರೇಲ್ ಇರಾನ್‌ನ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿದರೆ ರಷ್ಯಾ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಕೇಳಿದಾಗ, ಪ್ರತಿಕ್ರಿಯೆ ನೀಡಿರುವ ಪೆಸ್ಕೋವ್ ಸ್ಕೈ, "ತುಂಬಾ ನಕಾರಾತ್ಮಕವಾಗಿ, ನಾವು ಅದನ್ನು ಬಲವಾಗಿ ನಿರಾಕರಿಸುತ್ತೇವೆ. ಇದು ಇರಾನ್‌ನ ಒಳಗಿನಿಂದ ಬರುವ ಕ್ರಮಕ್ಕೆ ಕಾರಣವಾಗುತ್ತದೆ" ಎಂದು ಎಚ್ಚರಿಸಿದ್ದಾರೆ.
"ಇದು ಇರಾನ್‌ನಲ್ಲಿ ಉಗ್ರಗಾಮಿ ಮನಸ್ಥಿತಿಗಳ ಹುಟ್ಟಿಗೆ ಕಾರಣವಾಗುತ್ತದೆ ಮತ್ತು (ಖಮೇನಿಯನ್ನು ಕೊಲ್ಲುವ) ಬಗ್ಗೆ ಮಾತನಾಡುವವರು ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು." ಎಂದು ರಷ್ಯಾ ಎಚ್ಚರಿಕೆ ನೀಡಿದೆ.
"ಇರಾನ್‌ನಲ್ಲಿ ಆಡಳಿತ ಬದಲಾವಣೆ ಊಹಿಸಲಾಗದು. ಅದು ಸ್ವೀಕಾರಾರ್ಹವಲ್ಲ, ಅದರ ಬಗ್ಗೆ ಮಾತನಾಡುವುದು ಸಹ ಎಲ್ಲರಿಗೂ ಸ್ವೀಕಾರಾರ್ಹವಲ್ಲ" ಎಂದು ಪೆಸ್ಕೋವ್ ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ರಷ್ಯಾದ ಪ್ರಮುಖ ಮಿತ್ರ ರಾಷ್ಟ್ರವಾದ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಬಗ್ಗೆ ಕ್ರೆಮ್ಲಿನ್‌ನ ಪ್ರತಿಕ್ರಿಯೆ ಮಹತ್ವ ಪಡೆದುಕೊಂಡಿದೆ. ರಷ್ಯಾ ಮತ್ತು ಇರಾನ್ ಬಹಳ ಹಿಂದಿನಿಂದಲೂ ನಿಕಟ ರಾಜತಾಂತ್ರಿಕ ಮತ್ತು ಮಿಲಿಟರಿ ಸಂಬಂಧಗಳನ್ನು ಹೊಂದಿವೆ, ಯುಕ್ರೇನ್ ಮೇಲೆ ರಷ್ಯಾ ನಡೆಸಿದ ಆಕ್ರಮಣದ ನಂತರ ಈ ಸಂಬಂಧ ಬಲಗೊಂಡಿದೆ.
Advertisement