
ಜೆರುಸೆಲೆಂ: ಇರಾನ್‌ನಲ್ಲಿ ಗುರಿ ಸಾಧನೆಯ ಹತ್ತಿರದಲ್ಲಿವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ಹೇಳಿದ್ದಾರೆ. ಇರಾನ್ ನ ಖಂಡಾಂತರ ಕ್ಷಿಪಣಿ ಮತ್ತು ಪರಮಾಣು ತಾಣಗಳ ಮೇಲೆ ಗಮನಾರ್ಹ ಹಾನಿಯನ್ನುಂಟುಮಾಡಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಇರಾನ್‌ನ ಪರಮಾಣು ತಾಣಗಳ ಮೇಲೆ ಯುಎಸ್ ದಾಳಿಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೆತನ್ಯಾಹು, ಇರಾನ್ ಜೊತೆಗಿನ ಯುದ್ಧದಿಂದ ಈಗಲೇ ಹಿಂದೆ ಸರಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಎಲ್ಲಾ ಉದ್ದೇಶಿತ ಗುರಿ ಸಾಧಿಸುವವರೆಗೂ ಯುದ್ಧವನ್ನು ಕೊನೆಗಾಣಿಸುವುದಿಲ್ಲ ಎಂದರು.
ಗುರಿ ಸಾಧಿಸಿದ ನಂತರ ಕಾರ್ಯಾಚರಣೆ ಮುಂದುವರೆಸುವುದಿಲ್ಲ ಆದರೆ ಯುದ್ಧವನ್ನು ಶೀಘ್ರದಲ್ಲಿಯೇ ಮುಗಿಸುವುದಿಲ್ಲ. ಗುರಿ ಸಾಧಿಸಿದ ಕೂಡಲೇ ಕಾರ್ಯಾಚರಣೆ ಮುಗಿಯಲಿದ್ದು, ಹೋರಾಟ ನಿಲ್ಲಲಿದೆ ಎಂದು ಅವರು ಹೇಳಿದರು.
ಇದು ನಮ್ಮನ್ನು ನಾಶಮಾಡಲು ಬಯಸುತ್ತಿರುವ ಆಡಳಿತವಾಗಿದೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ಅದಕ್ಕಾಗಿಯೇ ನಾವು ನಮ್ಮ ಅಸ್ತಿತ್ವಕ್ಕೆ ಬೆದರಿಕೆಯಾಗಿರುವುದನ್ನು ತೊಡೆದುಹಾಕಲು ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೇವೆ. ಪರಮಾಣು ಮತ್ತು ಖಂಡಾಂತರ ಕ್ಷಿಪಣಿ ಬೆದರಿಕೆಯನ್ನು ನಾಶಪಡಿಸುವತ್ತ ಹಂತ ಹಂತವಾಗಿ ಸಾಗುತ್ತಿದ್ದೇವೆ. ಅವುಗಳನ್ನು ಪೂರ್ಣಗೊಳಿಸಲು ತುಂಬಾ ಹತ್ತಿರದಲ್ಲಿದ್ದೇವೆ. ಫರ್ಡೋವ್‌ನಲ್ಲಿರುವ ಇರಾನ್‌ನ ಪರಮಾಣು ತಾಣಕ್ಕೆ ಅತ್ಯಂತ ಗಂಭೀರ ಹಾನಿಯಾಗಿದೆ ಎಂದು ಅವರು ತಿಳಿಸಿದರು.
ಆದರೆ, ಹಾನಿಯ ಪ್ರಮಾಣದ ಬಗ್ಗೆ ಅವರು ವಿವರ ನೀಡಲಿಲ್ಲ. ಇರಾನ್‌ನ ಪರಮಾಣು ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, ನಾವು ಅವರನ್ನು ಹಿಂದಕ್ಕೆ ಕಳುಹಿಸುತ್ತಿದ್ದೇವೆ. ಬೆದರಿಕೆಯನ್ನು ತೊಡೆದುಹಾಕುತ್ತಿದ್ದೇವೆ ಎಂದು ಹೇಳಿದರು.
Advertisement