ಗನ್, ಬಾಂಬ್‌ಗಳು-ಈಗ ಮಾದಕ ವಸ್ತುಗಳು? ಹಸಿದ ಪ್ಯಾಲೇಸ್ತೀನಿಯರಿಗೆ ಮಾರಕ ಡ್ರಗ್ಸ್ ಬೆರೆಸಿದ ಆಹಾರ ಪೂರೈಸಿದ ಇಸ್ರೇಲ್?

ಯುದ್ಧ, ಹಸಿವು ಮತ್ತು ಸ್ಥಳಾಂತರದಿಂದ ಈಗಾಗಲೇ ನಾಶವಾಗಿರುವ ಸಮುದಾಯದಲ್ಲಿ ಕೆಲವು ಮಾತ್ರೆಗಳನ್ನು ನೇರವಾಗಿ ಹಿಟ್ಟಿನಲ್ಲಿ ಪುಡಿಮಾಡಿರಬಹುದು ಅಥವಾ ಕರಗಿಸಿರಬಹುದು ಎಂದು ಗಾಜಾ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಅಮೆರಿಕ ಮತ್ತು ಇಸ್ರೇಲ್ ಬೆಂಬಲಿತ ನೆರವು ಕೇಂದ್ರಗಳ ಮೂಲಕ ವಿತರಿಸಲಾದ ಗೋಧಿ ಹಿಟ್ಟಿನಲ್ಲಿ ಆಕ್ಸಿಕೊಡೋನ್ ಇದೆ ಎಂದು ಪ್ಯಾಲೆಸ್ಟೀನಿಯನ್ ಅಧಿಕಾರಿಗಳು ಆರೋಪಿಸಿದ್ದು, ಇದು ತೀವ್ರ ಆರೋಗ್ಯ ತೊಂದರೆಗಳು ಮತ್ತು ಸಾವಿಗೆ ಕಾರಣವಾಗುವ ಅತ್ಯಂತ ವ್ಯಸನಕಾರಿ ಒಪಿಯಾಡ್ ಆಗಿದೆ ಎಂದಿದ್ದಾರೆ.

ಮಾನವೀಯ ನೆರವಿನಡಿಯಲ್ಲಿ ವಿತರಿಸಲಾದ ಹಿಟ್ಟಿನ ಚೀಲಗಳ ಒಳಗೆ ಮಾತ್ರೆಗಳು ಪತ್ತೆಯಾಗಿವೆ ಎಂದು ಗಾಜಾ ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ. ಆಹಾರ ಸರಬರಾಜುಗಳಲ್ಲಿ ಪ್ರಿಸ್ಕ್ರಿಪ್ಷನ್ ಔಷಧವನ್ನು ಬೆರೆಸಿರುವುದನ್ನು ಪತ್ತೆಯಾಗಿದ್ದು ನಾಲ್ಕು ಚೀಲಗಳಲ್ಲಿ ಮಾತ್ರೆಗಳು ಸಿಕ್ಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾನ್ಯವಾಗಿ ದೀರ್ಘಕಾಲದ ನೋವು ನಿವಾರಣೆಗೆ ಬಳಸುವ ಆಕ್ಸಿಕೊಡೋನ್ ಅನ್ನು ದುರುಪಯೋಗಪಡಿಸಿಕೊಂಡರೆ ಮಾರಕವಾಗಬಹುದು. ವಿಶೇಷವಾಗಿ ಯುದ್ಧ, ಹಸಿವು ಮತ್ತು ಸ್ಥಳಾಂತರದಿಂದ ಈಗಾಗಲೇ ನಾಶವಾಗಿರುವ ಸಮುದಾಯದಲ್ಲಿ ಕೆಲವು ಮಾತ್ರೆಗಳನ್ನು ನೇರವಾಗಿ ಹಿಟ್ಟಿನಲ್ಲಿ ಪುಡಿಮಾಡಿರಬಹುದು ಅಥವಾ ಕರಗಿಸಿರಬಹುದು ಎಂದು ಗಾಜಾ ಅಧಿಕಾರಿಗಳು ಎಚ್ಚರಿಸಿದ್ದಾರೆ. ಇದು ಜನಸಂಖ್ಯೆಯನ್ನು ವಿಷಪೂರಿತಗೊಳಿಸಲು ಮತ್ತು ಸಾಮೂಹಿಕ ವ್ಯಸನವನ್ನು ಪ್ರಚೋದಿಸಲು ಉದ್ದೇಶಪೂರ್ವಕ ಕೃತ್ಯದ ಭಯವನ್ನು ಹುಟ್ಟುಹಾಕಿದೆ.

ಇಸ್ರೇಲ್ ಅನ್ನು ನೇರವಾಗಿ ದೂಷಿಸಿದ ಮಾಧ್ಯಮ ಕಚೇರಿಯು ಪ್ಯಾಲೆಸ್ಟೀನಿಯನ್ ಸಮಾಜವನ್ನು ಒಳಗಿನಿಂದ ನಾಶಮಾಡಲು ವಿನ್ಯಾಸಗೊಳಿಸಲಾದ "ಘೋರ ಅಪರಾಧ" ಎಂದು ಕರೆದಿದೆ. ಇಸ್ರೇಲಿ ಅಧಿಕಾರಿಗಳು ದಿಗ್ಬಂಧನವನ್ನು ದುರ್ಬಳಕೆ ಮಾಡಿಕೊಂಡು ಮಾನವೀಯ ನೆರವನ್ನು ಅಸ್ತ್ರಗೊಳಿಸುತ್ತಿದ್ದಾರೆ ಎಂದು ಅದು ಆರೋಪಿಸಿದೆ. ಅಮೆರಿಕ-ಇಸ್ರೇಲಿ ನೆರವು ಕೇಂದ್ರಗಳನ್ನು "ಸಾವಿನ ಬಲೆಗಳು" ಎಂದು ಬಣ್ಣಿಸಿದೆ.

ಸಂಗ್ರಹ ಚಿತ್ರ
ಇವರು ಅಲ್ಲಾನ ಶತ್ರುಗಳು: ಟ್ರಂಪ್-ನೆತನ್ಯಾಹು 'ಶಿರಚ್ಛೇದ'ಕ್ಕೆ ಇರಾನ್ ಶಿಯಾ ಮೌಲ್ವಿ ಫತ್ವಾ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com