ಅಮೆರಿಕದಲ್ಲಿ ಗುಡಿಸಲು, ರಸ್ತೆ ಗುಂಡಿ, ಗೋಡೆಬರಹ!: ಪ್ರಧಾನಿ ಮೋದಿ, ಇತರ ವಿಶ್ವನಾಯಕರ ಕುರಿತು ಟ್ರಂಪ್ ಹೇಳಿದ್ದೇನು?

ಫೆಬ್ರುವರಿ 13 ರಂದು ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಶ್ವೇತಭವನಕ್ಕೆ ಭೇಟಿ ನೀಡಿದ್ದರು.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ತಮ್ಮನ್ನು ಭೇಟಿ ಮಾಡುವ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ವಿಶ್ವ ನಾಯಕರು ವಾಷಿಂಗ್ಟನ್ ಡಿಸಿಯ ಫೆಡರಲ್ ಕಟ್ಟಡಗಳ ಬಳಿ ಇರುವ ಗುಡಿಸಲುಗಳು ಮತ್ತು ಗೋಡೆಬರಹಗಳನ್ನು ನೋಡಬಾರದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ಅಮೆರಿಕದ ರಾಜಧಾನಿಯನ್ನು ಸ್ವಚ್ಛಗೊಳಿಸುವಂತೆ ಆದೇಶಿಸಿದ್ದಾರೆ.

'ನಾವು ನಮ್ಮ ನಗರವನ್ನು ಸ್ವಚ್ಛಗೊಳಿಸುತ್ತಿದ್ದೇವೆ. ನಾವು ಈ ಮಹಾನ್ ರಾಜಧಾನಿಯನ್ನು ಸ್ವಚ್ಛಗೊಳಿಸುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಅಪರಾಧ ನಡೆಯಲು ಬಿಡುವುದಿಲ್ಲ ಮತ್ತು ನಾವು ಅಪರಾಧವನ್ನು ಬೆಂಬಲಿಸುವುದಿಲ್ಲ. ಗೋಡೆಬರಹಗಳನ್ನು ಅಳಿಸಲಿದ್ದೇವೆ ಮತ್ತು ನಾವು ಈಗಾಗಲೇ ಗುಡಿಸಲುಗಳನ್ನು ಕೆಡವುತ್ತಿದ್ದೇವೆ. ಈ ಸಂಬಂಧ ನಾವು ಆಡಳಿತದೊಂದಿಗೆ ಕೆಲಸ ಮಾಡುತ್ತಿದ್ದೇವೆ' ಎಂದು ಟ್ರಂಪ್ ಶುಕ್ರವಾರ ನ್ಯಾಯ ಇಲಾಖೆಯ ಹೇಳಿಕೆಗಳಲ್ಲಿ ತಿಳಿಸಿದ್ದಾರೆ.

ಇಲ್ಲಿಯವರೆಗೆ ವಾಷಿಂಗ್ಟನ್ ಡಿಸಿಯ ಮೇಯರ್ ಮುರಿಯಲ್ ಬೌಸರ್ ಅವರು ರಾಜಧಾನಿಯನ್ನು ಸ್ವಚ್ಛಗೊಳಿಸುವಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

'ವಿದೇಶಾಂಗ ಇಲಾಖೆಯ ಎದುರು ಸಾಕಷ್ಟು ಗುಡಿಸಲುಗಳಿವೆ. ಅವುಗಳನ್ನು ಕೂಡಲೇ ಕೆಡವಬೇಕು ಎಂದು ನಾವು ಹೇಳಿದೆವು ಮತ್ತು ಅವರು ತಕ್ಷಣವೇ ಅವುಗಳನ್ನು ಕೆಡವಿದರು. ಇದು ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಪ್ರಪಂಚದಾದ್ಯಂತ ಎಲ್ಲರೂ ಮೆಚ್ಚಿಕೊಳ್ಳುವಂತಹ ರಾಜಧಾನಿಯನ್ನು ನಾವು ಹೊಂದಲು ಬಯಸುತ್ತೇವೆ' ಎಂದು ಟ್ರಂಪ್ ಹೇಳಿದರು.

ಡೊನಾಲ್ಡ್ ಟ್ರಂಪ್
ಸುಂಕ ಕಡಿತಕ್ಕೆ ಭಾರತ ಒಪ್ಪಿದೆ ಎಂದ ಡೊನಾಲ್ಡ್ ಟ್ರಂಪ್; ಅಮೆರಿಕಾ ಒತ್ತಡಕ್ಕೆ ಮಣಿಯಿತೇ ಮೋದಿ ಸರ್ಕಾರ?

'ಭಾರತದ ಪ್ರಧಾನಿ ಮೋದಿ, ಫ್ರಾನ್ಸ್ ಅಧ್ಯಕ್ಷರು ಮತ್ತು ಇತರ ವಿಶ್ವನಾಯಕರು ಕಳೆದ ಒಂದೂವರೆ ವಾರದಲ್ಲಿ ನನ್ನನ್ನು ನೋಡಲು ರಾಜಧಾನಿಗೆ ಬಂದರು. ಅವರಿಗಾಗಿ ನಾನು ಯೋಜಿತ ಮಾರ್ಗವನ್ನು ಸಿದ್ಧಪಡಿಸಿದ್ದೆ. ಏಕೆಂದರೆ, ಅವರು ಗುಡಿಸಲುಗಳ್ನು ನೋಡಬೇಕೆಂದು ನಾನು ಬಯಸಲಿಲ್ಲ. ಗೋಡೆಬರಹವನ್ನು ನೋಡಬೇಕೆಂದು ನಾನು ಬಯಸಲಿಲ್ಲ. ಮುರಿದ ತಡೆಗೋಡೆಗಳು ಮತ್ತು ರಸ್ತೆಗಳಲ್ಲಿನ ಗುಂಡಿಗಳನ್ನು ಅವರು ನೋಡಬೇಕೆಂದು ನಾನು ಬಯಸಲಿಲ್ಲ. ಹೀಗಾಗಿ, ನಾವು ರಾಜಧಾನಿಯು ಸುಂದರವಾಗಿ ಕಾಣುವಂತೆ ಮಾಡಬೇಕು' ಎಂದು ಟ್ರಂಪ್ ಹೇಳಿದರು.

'ನಾವು ಸುಂದರ ನಗರವನ್ನಾಗಿ ಮಾಡಲು ಇದನ್ನು ಮಾಡಲಿದ್ದೇವೆ. ನಾವು ಅಪರಾಧ ಮುಕ್ತ ರಾಜಧಾನಿಯನ್ನು ಹೊಂದಲಿದ್ದೇವೆ. ಯಾವುದೇ ಜನರು ಇಲ್ಲಿಗೆ ಬಂದಾಗ, ಅವರನ್ನು ದೋಚುವುಜು ಅಥವಾ ಗುಂಡು ಹಾರಿಸುವುದು ಅಥವಾ ಅತ್ಯಾಚಾರದಂತಹ ಅಪರಾಧಗಳು ನಡೆಯುವುದಿಲ್ಲ. ರಾಜಧಾನಿಯು ಹಿಂದೆಂದಿಗಿಂತಲೂ ಸ್ವಚ್ಛ, ಉತ್ತಮ ಮತ್ತು ಸುರಕ್ಷಿತವಾಗಿರುತ್ತದೆ ಮತ್ತು ಇದು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ' ಎಂದು ಅವರು ಹೇಳಿದರು.

ಡೊನಾಲ್ಡ್ ಟ್ರಂಪ್
ಭಾರತ ಎಲ್ಲರಿಗಿಂತ ಆಧುನಿಕವಾಗಿದೆ: ಭಾರತದ ಸಂಸ್ಕೃತಿಯ ಪ್ರಭಾವ ಒಪ್ಪಿ ನಮಸ್ಕರಿಸಿದ ಟ್ರಂಪ್!

ಫೆಬ್ರುವರಿ 13 ರಂದು ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಶ್ವೇತಭವನಕ್ಕೆ ಭೇಟಿ ನೀಡಿದ್ದರು. ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ಕೆಲವೇ ವಾರಗಳಲ್ಲಿ ಟ್ರಂಪ್ ಆತಿಥ್ಯ ವಹಿಸಿದ ನಾಲ್ಕನೇ ವಿದೇಶಿ ನಾಯಕ ಪ್ರಧಾನಿ ಮೋದಿಯಾಗಿದ್ದರು.

ಟ್ರಂಪ್ ಅವರು ಎರಡನೇ ಬಾರಿಗೆ ಅಧ್ಯಕ್ಷೀಯ ಹುದ್ದೆ ಅಲಂಕರಿಸಿದ ಒಂದು ತಿಂಗಳೊಳಗೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಜಪಾನ್ ಪ್ರಧಾನಿ ಶಿಗೆರು ಇಶಿಬಾ ಮತ್ತು ಜೋರ್ಡಾನ್‌ನ ರಾಜ ಅಬ್ದುಲ್ಲಾ II ಅವರಿಗೆ ಆತಿಥ್ಯ ವಹಿಸಿದ್ದರು. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಕೂಡ ಅಮೆರಿಕಕ್ಕೆ ಭೇಟಿ ನೀಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com