ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ಮತ್ತು ಚೀನಾ ಹಸ್ತಕ್ಷೇಪ ಮಾಡುವ ಸಾಧ್ಯತೆ ಇದೆ: ಕೆನಡಾ ಆರೋಪ

ಮುಂಬರುವ ಚುನಾವಣೆಯಲ್ಲಿ ಕೆನಡಾದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ಪಿಆರ್ ಸಿ (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ) ಆರ್ಟ್ ಫಿಷಿಯಲ್ ಇಂಟೆಲಿಜೆನ್ಸ್ ಸಕ್ರಿಯಗೊಳಿಸಿದ ಸಾಧನಗಳನ್ನು ಬಳಸುವ ಸಾಧ್ಯತೆಯಿದೆ ಎಂದು ಹೇಳಿದರು.
Representational image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಮುಂದಿನ ತಿಂಗಳು ಏಪ್ರಿಲ್ 28 ರಂದು ನಡೆಯಲಿರುವ ಕೆನಡಾ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ಮತ್ತು ಚೀನಾ ಹಸ್ತಕ್ಷೇಪ ಮಾಡುವ ಸಾಧ್ಯತೆ ಇದೆ, ರಷ್ಯಾ ಮತ್ತು ಪಾಕಿಸ್ತಾನಗಳು ಮಧ್ಯಪ್ರವೇಶ ಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ದೇಶದ ಭದ್ರತಾ ಗುಪ್ತಚರ ಸೇವೆ ತಿಳಿಸಿದೆ.

ಕೆನಡಾ ಭದ್ರತಾ ಗುಪ್ತಚರ ಸೇವೆ (CSIS) ಕಾರ್ಯಾಚರಣೆಗಳ ಉಪ ನಿರ್ದೇಶಕಿ ವನೆಸ್ಸಾ ಲಾಯ್ಡ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಹಗೆತನದ ದೇಶಗಳು ಹೊಸ ಪ್ರಧಾನಿ ಮಾರ್ಕ್ ಕಾರ್ನಿ ಘೋಷಿಸಿದ ಮತದಾನದಲ್ಲಿ ಹಸ್ತಕ್ಷೇಪ ಮಾಡಲು ಕೃತಕ ಬುದ್ಧಿಮತ್ತೆಯನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಕೆನಡಾದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ಪಿಆರ್ ಸಿ (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ) ಆರ್ಟ್ ಫಿಷಿಯಲ್ ಇಂಟೆಲಿಜೆನ್ಸ್ ಸಕ್ರಿಯಗೊಳಿಸಿದ ಸಾಧನಗಳನ್ನು ಬಳಸುವ ಸಾಧ್ಯತೆಯಿದೆ ಎಂದು ಹೇಳಿದರು.

ಚೀನಾ ತನ್ನ ಹಿತಾಸಕ್ತಿಗಳಿಗೆ ಅನುಕೂಲಕರವಾದ ವಿಷಯಗಳನ್ನು ಪ್ರಚಾರ ಮಾಡಲು ಸೋಷಿಯಲ್ ಮೀಡಿಯಾಗಳನ್ನು ಬಳಸುವ ಸಾಧ್ಯತೆ ಹೆಚ್ಚು. ಕೆನಡಾದಲ್ಲಿ ಚೀನೀ ಜನಾಂಗೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಮುದಾಯಗಳನ್ನು 'ರಹಸ್ಯ ಮತ್ತು ವಂಚಿನೆಯ' ಮಾರ್ಗಗಳನ್ನು ಬಳಸಿಕೊಂಡು ನಿರ್ದಿಷ್ಟವಾಗಿ ಗುರಿಯಾಗಿಸುವ ಪ್ರವೃತ್ತಿ ಹೆಚ್ಚಾಗಿದೆ ಎಂದರು.

ಹಸ್ತಕ್ಷೇಪದ ಕೆನಡಾದ ಹಿಂದಿನ ಆರೋಪಗಳನ್ನು ನಿರಾಕರಿಸಿಕೊಂಡು ಬಂದಿದ್ದ ಎರಡೂ ದೇಶಗಳು ಇಲ್ಲಿಯವರೆಗೆ ಹೊಸ ಆರೋಪಗಳಿಗೆ ಪ್ರತಿಕ್ರಿಯಿಸಿಲ್ಲ. ಜನವರಿಯಲ್ಲಿ, ಒಟ್ಟಾವಾದ ಚುನಾವಣೆಯಲ್ಲಿ ಕೆಲವು ವಿದೇಶಿ ಸರ್ಕಾರಗಳು ಹಸ್ತಕ್ಷೇಪ ಮಾಡಿವೆ ಎಂಬ ಕೆನಡಾ ಆಯೋಗದ ವರದಿಯಿಂದ ಹೊರಿಸಲಾದ ಆಪಾದನೆಗಳನ್ನು ಭಾರತ ತಿರಸ್ಕರಿಸಿತ್ತು.

ಭಾರತದ ಆಂತರಿಕ ವ್ಯವಹಾರಗಳಲ್ಲಿ ಕೆನಡಾದ ಹಸ್ತಕ್ಷೇಪಕ್ಕೆ ಆಗಿನ ವಿದೇಶಾಂಗ ಸಚಿವಾಲಯ (MEA) ಹೇಳಿಕೆ ನೀಡಿ ಭಾರತದ ವಿರುದ್ಧ ಹಸ್ತಕ್ಷೇಪದ ವರದಿಯ ಪ್ರಚೋದನೆಗಳನ್ನು ನಾವು ತಿರಸ್ಕರಿಸುತ್ತೇವೆ. ಅಕ್ರಮ ವಲಸೆಗೆ ಅನುವು ಮಾಡಿಕೊಡುವ ಬೆಂಬಲ ವ್ಯವಸ್ಥೆಯನ್ನು ಒಪ್ಪುವುದಿಲ್ಲ ಎಂದು ಹೇಳಿತ್ತು.

ಕೆನಡಾದ ಪತ್ರಿಕೆ ದಿ ಗ್ಲೋಬ್ ಮತ್ತು ಮೇಲ್, ಫೆಡರಲ್ ಚುನಾವಣೆಯಲ್ಲಿ ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ "ರಹಸ್ಯ ಆರ್ಥಿಕ ಬೆಂಬಲ" ಒದಗಿಸಲು ಭಾರತ ಪ್ರಾಕ್ಸಿ ಏಜೆಂಟ್‌ಗಳನ್ನು ಬಳಸಿದೆ ಎಂದು ಆರೋಪಿಸಿತ್ತು.

ರಷ್ಯಾ ಮತ್ತು ಪಾಕಿಸ್ತಾನದಿಂದ ಚುನಾವಣಾ ಹಸ್ತಕ್ಷೇಪದ ಬಗ್ಗೆ ಕೆನಡಾ ಎಚ್ಚರಿಕೆ

ಪಾಕಿಸ್ತಾನದಲ್ಲಿ ರಾಜಕೀಯ, ಭದ್ರತೆ ಮತ್ತು ಆರ್ಥಿಕ ಸ್ಥಿರತೆಯನ್ನು ಉತ್ತೇಜಿಸಲು ಮತ್ತು ಭಾರತದ ಬೆಳೆಯುತ್ತಿರುವ ಜಾಗತಿಕ ಪ್ರಭಾವವನ್ನು ಎದುರಿಸಲು ಪಾಕಿಸ್ತಾನ ಕೆನಡಾ ವಿರುದ್ಧ ತನ್ನ ಕಾರ್ಯತಂತ್ರದ ಗುರಿಗಳಿಗೆ ಅನುಗುಣವಾಗಿ ವಿದೇಶಿ ಹಸ್ತಕ್ಷೇಪ ಚಟುವಟಿಕೆಗಳನ್ನು ನಡೆಸಬಹುದು ಎಂದು ಹೇಳಿದರು.

ಖಲಿಸ್ತಾನ ಬೆಂಬಲಿತ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ 2023 ರಲ್ಲಿ ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹದಗೆಟ್ಟಿತ್ತು.

Representational image
ನಿಜ್ಜರ್ ಹತ್ಯೆಯಲ್ಲಿ ಮೋದಿ-ಅಜಿತ್ ದೋವಲ್ ಕೈವಾಡ; ಭಾರತ ತೀವ್ರ ಆಕ್ಷೇಪ ಬೆನ್ನಲ್ಲೇ ವರದಿ ನಿರಾಕರಿಸಿದ ಕೆನಡಾ ಸರ್ಕಾರ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com