
ಆಸ್ಟ್ರೇಲಿಯಾದಲ್ಲಿರುವ ಮುಸ್ಲಿಂ ಸಂಸದೆ ಫಾತಿಮಾ ಪೇಮನ್ ಅವರು ಮದ್ಯಪಾನ ಮಾಡಿ ನೃತ್ಯ ಮಾಡಲು ಒತ್ತಾಯಿಸಲಾಯಿತು ಎಂದು ಸಂಸದೀಯ ಕಾವಲುಗಾರರಿಗೆ ದೂರು ನೀಡಿದ್ದಾರೆ. ನನ್ನ ಪುರುಷ ಸಹೋದ್ಯೋಗಿಗಳಲ್ಲಿ ಒಬ್ಬರು ನನ್ನನ್ನು ಮದ್ಯಪಾನ ಮಾಡಿ ಮೇಜಿನ ಮೇಲೆ ನೃತ್ಯ ಮಾಡಲು ಕೇಳಿದ್ದಾರೆ ಎಂದು ಫಾತಿಮಾ ಆರೋಪಿಸಿದ್ದಾರೆ.
ಸೆನೆಟರ್ ಫಾತಿಮಾ ಪೇಮನ್ (30) ಅವರು ಮದ್ಯಪಾನ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅಧಿಕೃತ ಸಮಾರಂಭದಲ್ಲಿ ಕುಡಿದು ಟೈಟಾದ ನಂತರ ತಮ್ಮ ಹಿರಿಯ ಸಹೋದ್ಯೋಗಿ ಹಲವಾರು ಅನುಚಿತ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. "ನೀವು ಸ್ವಲ್ಪ ಮದ್ಯಪಾನ ಮಾಡಿ ಮೇಜಿನ ಮೇಲೆ ನೃತ್ಯ ಮಾಡುವುದನ್ನು ನೋಡೋಣ" ಎಂದು ಹೇಳಲಾಗಿದೆ ಎಂದು ಫಾತಿಮಾ ಪೇಮನ್ ಹೇಳಿಕೊಂಡಿದ್ದಾರೆ.
ಫಾತಿಮಾ ಪೇಮನ್ ಅಫ್ಘಾನಿಸ್ತಾನದಲ್ಲಿ ಜನಿಸಿದ್ದು ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಹಿಜಾಬ್ ಧರಿಸಿದ ಮೊದಲ ಮುಸ್ಲಿಂ ಸಂಸದೆ ಆಗಿದ್ದಾರೆ. ಸ್ವತಂತ್ರ ಸಂಸದೆ ಪೇಮನ್ ಅವರು ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ನರಿಗೆ ಸಹಾಯ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ 2024ರಲ್ಲಿ ಎಡಪಂಥೀಯ ಲೇಬರ್ ಸರ್ಕಾರದಿಂದ ಬೇರ್ಪಟ್ಟರು.
ಮಾಜಿ ಸೆನೆಟರ್ ಬ್ರಿಟಾನಿ ಹಿಗ್ಗಿನ್ಸ್ 2021ರಲ್ಲಿ ಸಂಸತ್ತಿನ ಕಚೇರಿಯೊಳಗೆ ಸಹೋದ್ಯೋಗಿಯಿಂದ ಅತ್ಯಾಚಾರಕ್ಕೊಳಗಾಗಿದ್ದಾಗಿ ಆರೋಪಿಸಿದ್ದರು. ನಂತರ ದೇಶಾದ್ಯಂತ ಪ್ರತಿಭಟನೆಗಳು ಪ್ರಾರಂಭವಾದವು. ನಂತರ ಆಸ್ಟ್ರೇಲಿಯನ್ ಸಂಸತ್ತಿನಲ್ಲಿ ಮದ್ಯಪಾನ, ಬೆದರಿಸುವಿಕೆ ಮತ್ತು ಲೈಂಗಿಕ ಕಿರುಕುಳದ ಪ್ರಕರಣಗಳು ಮುನ್ನೆಲೆಗೆ ಬರುತ್ತಿರುವುದು ಕಂಡುಬಂದಿದೆ.
Advertisement