'France ಅಧ್ಯಕ್ಷ ಆದ್ರೇನು...': ವಿಮಾನದಲ್ಲೇ Emmanuel Macron ಮೂತಿಗೆ ತಿವಿದ ಪತ್ನಿ? Video Viral

ಆಗ್ನೇಯ ಏಷ್ಯಾ ಪ್ರವಾಸ ಕೈಗೊಂಡಿರುವ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್‌ ಅವರು ವಿಮಾನದಿಂದ ಕೆಳಗಿಳಿಯುವ ವೇಳೆ ಅವರ ಪತ್ನಿ ಬ್ರಿಜೆಟ್‌ ಮ್ಯಾಕ್ರನ್‌ ಮುಖಕ್ಕೆ ತಿವಿದಿರುವ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
French President Emmanuel Macron
ವಿಮಾನದಲ್ಲೇ ಎಮಾನ್ಯುಯಲ್ ಮ್ಯಾಕ್ರಾನ್ ಮೂತಿಗೆ ತಿವಿದ ಪತ್ನಿ
Updated on

ವಿಯೆಟ್ನಾಂ: ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ (Emmanuel Macron)ಗೆ ಅವರ ಪತ್ನಿ ಬ್ರಿಜೆಟ್ ಮ್ಯಾಕ್ರಾನ್ (Brigitte Macron) ಮೂತಿಗೆ ತಿವಿದಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ಆಗ್ನೇಯ ಏಷ್ಯಾ ಪ್ರವಾಸ ಕೈಗೊಂಡಿರುವ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್‌ ಅವರು ವಿಮಾನದಿಂದ ಕೆಳಗಿಳಿಯುವ ವೇಳೆ ಅವರ ಪತ್ನಿ ಬ್ರಿಜೆಟ್‌ ಮ್ಯಾಕ್ರನ್‌ ಮುಖಕ್ಕೆ ತಿವಿದಿರುವ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯ ವ್ಯಾಪಕವಾಗಿ ಹರಿದಾಡುತ್ತಿದ್ದು, ಇದು ದಂಪತಿ ನಡುವಣ ಜಗಳ ಎಂದು ಮ್ಯಾಕ್ರನ್ ಅವರ ಆಪ್ತರೊಬ್ಬರು ಹೇಳಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ವಿಯೆಟ್ನಾಂನಲ್ಲಿ ವಿಮಾನದಿಂದ ಇಳಿಯುವ ಮುನ್ನ ಬಾಗಿಲು ತೆರೆದ ಕೆಲವೇ ಕ್ಷಣಗಳಲ್ಲಿಯೇ ಈ ಘಟನೆ ನಡೆದಿದೆ. ಮ್ಯಾಕ್ರನ್‌ ಅವರು ಕ್ಷಣಕಾಲ ಇರುಸುಮುರುಸು ಒಳಗಾದರು. ತಕ್ಷಣವೇ ಚೇತರಿಸಿಕೊಂಡು ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಸ್ವಾಗತಿಸಲು ಆಗಮಿಸಿದ್ದ ಅಧಿಕಾರಿಗಳತ್ತ ಕೈಬೀಸಿದರು.

ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಹಾಗೂ ಪತ್ನಿಯ ನಡವಳಿಕೆ ವಿಚಾರವನ್ನು ಫ್ರಾನ್ಸ್‌ನ ಮಾಧ್ಯಮಗಳು ವಿಶ್ಲೇಷಣೆ ಮಾಡಿದ್ದು, ಇನ್ನೂ ಕೆಲವು ಮಾಧ್ಯಮಗಳು ಮ್ಯಾಕ್ರನ್‌ ಅವರಿಗೆ ಪತ್ನಿಯಿಂದ ಕಪಾಳ ಮೋಕ್ಷವಾಗಿದೆ ಎಂದು ವರದಿ ಮಾಡಿವೆ. ‘ಕಪಾಳ ಮೋಕ್ಷವೇ– ಜಗಳವೇ’ ಎಂದು ಪ್ರಶ್ನಿಸಿ ‘ಲೆ ಪರಿಸಿಯಾನ್‌’ ವೆಬ್‌ಸೈಟ್‌ ವರದಿ ಮಾಡಿದೆ.

French President Emmanuel Macron
'ಇಂತಹ ಬೇವಕೂಫ್ ಜೋಕರ್ ಗಳು ಭಾರತದೊಂದಿಗೆ ಯುದ್ಧ ಮಾಡ್ತಾರಂತೆ.. ಹೇಗಿದೆ ನೋಡಿ'?: Kuwaitನಲ್ಲಿ Asaduddin Owaisi; ಪಾಕಿಸ್ತಾನ ಫುಲ್ ರೋಸ್ಟ್!

ಆಗಿದ್ದೇನು?

ಈ ಘಟನೆ ನಡೆದಿರುವುದು, ಮೇ 25ರಂದು. ಸದ್ಯಕ್ಕೆ ಮ್ಯಾಕ್ರನ್ ಹಾಗೂ ಅವರ ಪತ್ನಿ ವಿಯೆಟ್ನಾನಲ್ಲಿದ್ದಾರೆ. ಅಲ್ಲಿನ ನಗರವೊಂದಕ್ಕೆ ಮಾ. 22ರಂದು ಈ ದಂಪತಿ ಭೇಟಿ ನೀಡಿದ್ದರು. ಅಲ್ಲಿ ಅವರ ವಿಶೇಷ ವಿಮಾನ ಲ್ಯಾಂಡ್ ಆಗಿ ವಿಮಾನದ ಬಾಗಿಲು ತೆರೆಯುತ್ತದೆ.

ಇತ್ತ, ವಿಮಾನದ ಕೆಳಗೆ ನಿಂತಿರುವ ಅಧಿಕೃತ ಮಾಧ್ಯಮ ಸಂಸ್ಥೆಯ ಕ್ಯಾಮೆರಾಗಳು ಅತ್ತ ವಿಮಾನದಿಂದ ಇಳಿಯುವ ಮ್ಯಾಕ್ರನ್ ದಂಪತಿಯನ್ನು ಚಿತ್ರೀಕರಿಸಲು ಕ್ಯಾಮೆರಾಗಳನ್ನು ಅತ್ತ ತಿರುಗಿವೆ. ವಿಮಾನದ ದ್ವಾರದ ಬಳಿ ನಡೆದುಕೊಂಡು ಬರುವ ಮ್ಯಾಕ್ರನ್, ಅದೇಕೋ ಏನೋ ತಮ್ಮ ಹಿಂದೆಯೇ ನಡೆದು ಬರುತ್ತಿದ್ದ ತಮ್ಮ ಪತ್ನಿಯ ಕಡೆ ತಿರುಗಿ ನೋಡಿ ಏನೋ ಮಾತಾಡುತ್ತಾರೆ.

ಕೆಳಗೆ ನಿಂತು ವಿಮಾನದ ದ್ವಾರದ ಕಡೆಗೆ ಫೋಕಸ್ ಮಾಡಿರುವ ಕ್ಯಾಮೆರಾಗಳಲ್ಲಿ ಮ್ಯಾಕ್ರನ್ ಮಾತ್ರ ಕಾಣಿಸುತ್ತಾರೆ. ಅವರ ಪತ್ನಿ ಕಾಣಿಸುವುದಿಲ್ಲ. ಅವರೇನೋ ಮಾತನಾಡುತ್ತಿದ್ದಾರೆ ಅಂತ ಅಂದುಕೊಳ್ಳುವಷ್ಟರಲ್ಲಿ ಅವರ ಪತ್ನಿಯ ಕೈಯ್ಯೊಂದು ಚಟಾರನೆ ಮ್ಯಾಕ್ರನ್ ಅವರ ಮೂತಿಗೆ ತಿವಿಯುತ್ತದೆ.

ಸ್ಪಷ್ಟನೆ ನೀಡಿದ ಫ್ರಾನ್ಸ್ ಅಧ್ಯಕ್ಷ

ಕಪಾಳ ಮೋಕ್ಷ ಅಥವಾ ಜಗಳ ಊಹಾಪೋಹಗಳನ್ನು ತಳ್ಳಿಹಾಕಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯಲ್ ಮ್ಯಾಕ್ರನ್‌, ‘ಪತ್ನಿ ತಮಾಷೆ ಮಾಡುತ್ತಿದ್ದಳು. ನಮ್ಮ ಸಂಬಂಧ ಉತ್ತಮವಾಗಿದೆ. ಯಾವುದೇ ರೀತಿಯ ಕಲಹ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಫ್ರಾನ್ಸ್ ಅಧ್ಯಕ್ಷರಾದರೇನು ಪತ್ನಿಗೆ ಗಂಡನೇ?: ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಗಳ ಸುರಿಮಳೆ

ಇನ್ನು ಎಮಾನ್ಯುಯಲ್ ಮ್ಯಾಕ್ರನ್ ಮತ್ತು ಅವರ ಪತ್ನಿ ಬ್ರಿಜೆಟ್ ನಡುವಿನ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಗಳ ಸುರಿಮಳೆಗೆ ಕಾರಣವಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ನಗೆಯ ಅಲೆ ಎಬ್ಬಿಸಿದ್ದು, ಕೆಲವರಂತೂ, ಯಾರೇ ಆಗಲಿ, ಆತ ಇಡೀ ದೇಶಕ್ಕೇ ರಾಜನಾಗಿರಬಹುದು. ಯಾರ ಮೇಲಾದರೂ ಅಧಿಕಾರ ಚಲಾಯಿಸಬಹುದು. ಆದರೆ, ಮನೆಯಲ್ಲಿ ಹೆಂಡ್ತಿ ಮುಂದೆ ಮಾತ್ರ ಆತನದ್ದು ಏನೂ ನಡೆಯಲ್ಲ… ಎಂದು ಹೇಳಿದ್ದಾರೆ. ಇನ್ನೂ ಕೆಲವರು ಎಲ್ಲರ ಮನೆ ದೋಸೆನೂ ತೂತು.. ಎಂದು ನಕ್ಕಿದ್ದಾರೆ.

ಇಮಾನ್ಯುಯಲ್ ಗಿಂತ 25 ವರ್ಷ ದೊಡ್ಡವರು ಬ್ರಿಜೆಟ್ ಮ್ಯಾಕ್ರಾನ್

ಅಂದಹಾಗೆ ಎಮಾನ್ಯುಯೆಲ್ ಮ್ಯಾಕ್ರನ್‌ ಗಿಂತ ಅವರ ಪತ್ನಿ ಎಮಾನ್ಯುಯೆಲ್ ಮ್ಯಾಕ್ರನ್‌ 25 ವರ್ಷ ದೊಡ್ಡವರು. ಎಮಾನ್ಯುಯೆಲ್ ಮ್ಯಾಕ್ರನ್‌ ಅವರು, ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಬ್ರಿಜೆಟ್‌ ಶಿಕ್ಷಕಿಯಾಗಿದ್ದರು. ಮೂರು ಮಕ್ಕಳ ತಾಯಿಯಾಗಿದ್ದ ಬ್ರಿಜೆಟ್‌, ಪತಿಗೆ ವಿಚ್ಛೇದನ ನೀಡಿ ಮ್ಯಾಕ್ರನ್‌ ಅವರನ್ನು 2007ರಲ್ಲಿ ವಿವಾಹವಾದರು. ಪ್ರಸ್ತುತ ಎಮಾನ್ಯುಲ್ ಮ್ಯಾಕ್ರನ್‌ ಅವರಿಗೆ 47 ವರ್ಷವಾಗಿದ್ದು, ಬ್ರಿಜೆಟ್‌ ಅವರಿಗೆ 72 ವರ್ಷಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com